ವಿಜಯನಗರ: ಮೊಬೈಲ್ ಕೊಡಿಸಿಲ್ಲ ಎಂದು ಮುನಿಸಿಕೊಂಡು ಮನೆ ಬಿಟ್ಟು ಹೋಗಿದ್ದ ವಿದ್ಯಾರ್ಥಿಯೊಬ್ಬ ಶವವಾಗಿ ಪತ್ತೆಯಾದ ಘಟನೆ ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕು ತೊಲಹಳ್ಳಿ ಎಂಬ ಊರಿನಲ್ಲಿ ನಡೆದ ಬಗ್ಗೆ ವರದಿಯಾಗಿದೆ.
advertisement
9535127775 / 9901837775 / 6364528715 / 08362775155 / https://icsmpucollege.com/
ಬಡತನದ ಕಾರಣಕ್ಕೆ ಪೋಷಕರಿಗೆ ಮೊಬೈಲ್ ಕೊಡಿಸಲಾಗಿರಲಿಲ್ಲ. ಮಗನನ್ನ ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.
ವಿಜಯನಗರದ ಕೊಟ್ಟೂರಿನ ಸನ್ನಿಧಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ನಾಗರಾಜ್ ಎಂಬ ವಿದ್ಯಾರ್ಥಿಯೇ ಮೃತಪಟ್ಟವ ಎಂದು ಗುರುತಿಸಲಾಗಿದೆ, ಮೊಬೈಲ್ ಕೊಡಿಸುವಂತೆ ಹೇಳಿದರೂ ತಂದೆ-ತಾಯಿ ಮೊಬೈಲ್ ಕೊಡಿಸಲಿಲ್ಲ ಎಂದು ಬೇಸರಿಸಿಕೊಂಡು ಫೆಬ್ರವರಿ ೧೬ರಂದು ಮನೆ ಬಿಟ್ಟು ಹೋಗಿದ್ದ ಎನ್ನಲಾಗಿದೆ. ಈ ಬಗ್ಗೆ ಪೋಷಕರರು ಪೊಲೀಸರಿಗೆ ಮಾಹಿತಿ ನೀಡಿದ್ದರು ಹಾಗೂ ಮಗನಿಗಾಗಿ ಹುಡುಕಾಟ ನಡೆಸಿದ್ದರು. ಆ ವೇಳೆ ಸುಟ್ಟು ಕರಕಲಾದ ನಾಗರಾಜನ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದ್ದು, ಅದನ್ನು ನೋಡಿದ ಪೋಷಕರಿಗೆ ದಿಗಿಲು ಬಡಿದಿದೆ.
ನಾಗರಾಜ್ ಓದಲು ಮುಂದಿದ್ದ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇಕಡಾ 98ರಷ್ಟು ಅಂಕ ಗಳಿಸಿದ್ದ ಈತ, ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದ. ತನಗೆ ಓದಲು ಕಷ್ಟವಾಗುತ್ತದೆ. ಹೀಗಾಗಿ ಮೊಬೈಲ್ ಕೊಡಿಸಿ ಎಂದು ಹೇಳುತ್ತಿದ್ದ, ಆದರೆ ಆರ್ಥಿಕ ಸಮಸ್ಯೆಯಿಂದಾಗಿ ಪೋಷಕರಿಗೆ ಮೊಬೈಲ್ ಕೊಡಿಸಲು ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ. ಇದರಿಂದ ಮನನೊಂದು ನಾಗರಾಜ್, ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಹೆತ್ತವರ ದುಃಖದ ಕಟ್ಟೆಯೊಡೆದಿದೆ.
ನಿಮ್ಮ ಕಾಮೆಂಟ್ ಬರೆಯಿರಿ