ಕರ್ನಾಟಕದಲ್ಲಿ ದೈನಂದಿನ ಕೊರೊನಾ ಸೋಂಕು ಮತ್ತಷ್ಟು ಇಳಿಕೆ

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಸೋಂಕಿನ ಸಂಖ್ಯೆ ಭಾರೀ ಇಳಿಕೆಯಾಗಿದೆ. ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 679 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು ಇದೇ ಸಮಯದಲ್ಲಿ 21 ಮಂದಿಮೃತಪಟ್ಟಿದ್ದಾರೆ ಹಾಗೂ 1,932 ಮಂದಿ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ.
ಸಕ್ರಿಯ ಪ್ರಕರಣಗಳ ಸಂಖ್ಯೆ ಶೇ‌. 1.29 ಕ್ಕೆ ಇಳಿಕೆಯಾಗಿದೆ. ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಪ್ರತಿಶತ ಸಂಖ್ಯೆ ಶೇ.3.09 ರಷ್ಟು ಇದೆ.
ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 11,360 ಕ್ಕೆ ಇಳಿಕೆಯಾಗಿದೆ.
ಬೆಂಗಳೂರಿನಲ್ಲಿ ಇಂದು 346 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ ಹಾಗೂ 839 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ. ಮತ್ತು 8 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಜಿಲ್ಲಾವಾರು ಸೋಂಕಿನ ಮಾಹಿತಿ
ಬಾಗಲಕೋಟೆ- 5, ಬಳ್ಳಾರಿ – 31, ಬೆಳಗಾವಿ – 11, ಬೆಂಗಳೂರು ಗ್ರಾಮಾಂತರ- 4, ಬೆಂಗಳೂರು ನಗರ. – 346, ಬೀದರ 3, ಚಾಮರಾಜನಗರ- 9, ಚಿಕ್ಕಬಳ್ಳಾಪುರ- 4, ಚಿಕ್ಕಮಗಳೂರು- 8, ಚಿತ್ರದುರ್ಗ- 16, ದಕ್ಷಿಣ ಕನ್ನಡ – 15, ದಾವಣಗೆರೆ- 7, ಧಾರವಾಡ- 7,
ಗದಗ- 2, ಹಾಸನ- 21, ಹಾವೇರಿ- 1, ಕಲಬುರಗಿ- 11, ಕೊಡಗು- 28, ಕೋಲಾರ- 2, ಕೊಪ್ಪಳ- 6, ಮಂಡ್ಯ- 7, ಮೈಸೂರು- 26, ರಾಯಚೂರು- 6, ರಾಮನಗರ – 12, ಶಿವಮೊಗ್ಗ- 34, ತುಮಕೂರು- 20, ಉಡುಪಿ- 21, ಉತ್ತರ ಕನ್ನಡ- 12, ವಿಜಯಪುರ – 3
ಯಾದಗಿರಿ- 1 ಪ್ರಕರಣಗಳು ದಾಖಲಾಗಿವೆ.

ಪ್ರಮುಖ ಸುದ್ದಿ :-   ಕುಣಿಗಲ್ : ರಾಮನವಮಿ ಪಾನಕ ಸೇವಿಸಿದ 42 ಮಂದಿ ಅಸ್ವಸ್ಥ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement