ಗದ್ದಲದ ನಡುವೆಯೇ ಕರ್ನಾಟಕ ಸ್ಟ್ಯಾಂಪ್ ( 2ನೇ ತಿದ್ದುಪಡಿ) ವಿಧೇಯಕ ಸೇರಿ ನಾಲ್ಕು ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

posted in: ರಾಜ್ಯ | 0

ಬೆಂಗಳೂರು: ಸಚಿವ ಕೆ.ಎಸ್ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಧರಣಿ ನಡೆವೆಯೇ 2022 ನೇ ಸಾಲಿನ ಕರ್ನಾಟಕ ಸಿವಿಲ್‌ ಸೇವೆಗಳ ವಿಧೇಯಕ ಸೇರಿದಂತೆ ಒಟ್ಟು ನಾಲ್ಕು ವಿಧೇಯಕಗಳು ವಿಧಾನಸಭೆಯಲ್ಲಿ ಸೋಮವಾರ ಅಂಗೀಕಾರಗೊಂಡಿತು.
ಕಾಂಗ್ರೆಸ್‌ ಧರಣಿ ಹಿನ್ನೆಲೆಯಲ್ಲಿ ವಿಧೇಯಕಗಳು ಯಾವುದೇ ಚರ್ಚೆಯಿಲ್ಲದೆ ಅಂಗೀಕಾರಗೊಂಡವು. 2022 ನೇ ಸಾಲಿನ ಕರ್ನಾಟಕ ಸ್ಟಾಂಪ್‌( ತಿದ್ದುಪಡಿ) ವಿಧೇಯಕ, 2022 ನೇ ಸಾಲಿನ ಕರ್ನಾಟಕ ಸ್ಟಾಂಪ್‌ ( ಎರಡನೇ ತಿದ್ದುಪಡಿ) ವಿಧೇಯಕ, 2022 ನೇ ಸಾಲಿನ ಕ್ರಿಮಿನಲ್‌ ಕಾನೂನು ತಿದ್ದುಪಡಿ ಅಧ್ಯಾದೇಶ, 1944( ಕರ್ನಾಟಕ ತಿದ್ದುಪಡಿ) ವಿಧೇಯಕ ಸಹ ಅಂಗೀಕಾರಗೊಂಡಿತು.
2022 ನೇ ಸಾಲಿನ‌ ಕರ್ನಾಟಕ ಸ್ಟಾಂಪ್‌ ಎರಡನೇಯ ತಿದ್ದುಪಡಿ ವಿಧೇಯಕ ಅಂಗೀಕಾರಗೊಂಡಿದೆ. ಕೈಗಾರಿಕೆಗಳು ರಾಜ್ಯಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ವಿಧೇಯಕ ಮಹತ್ವ ಪಡೆದುಕೊಂಡಿದೆ. ಕೈಗಾರಿಕೆಗಳಿಗೆ ಸ್ಟಾಂಪ್‌ ಡ್ಯೂಟಿಯನ್ನು 25 ಲಕ್ಷ ರೂ ಗಳಿಗೆ ಮಿತಿಗೊಳಿಸುವ ವಿಧೇಯಕ ಇದಾಗಿದೆ.
2022 ನೇ ಸಾಲಿನ ಕರ್ನಾಟಕ ಸಿವಿಲ್‌ ಸೇವೆಗಳ ( 2021 ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ಆಯ್ಕೆ ಮತ್ತು ನೇಮಕಾತಿ ಸಿಂಧುಗೊಳಿಸುವಿಕೆ) ವಿಧೇಯಕ ವಿಧೇಯಕ ಸಮರ್ಥಿಸಿಕೊಂಡ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ, ನೇಮಕಾತಿ ಸಕ್ರಮ ಮಾಡಲು ಈ ವಿಧೇಯಕ ತರಲಾಗಿದೆ. ವಿವಿಧ
ವಿಧೇಯಕವನ್ನು ಜೆಡಿಎಸ್ ಶಾಸಕ ಬಂಡೆಪ್ಪ ಕಾಶಂಪೂರ ಬೆಂಬಲಿಸಿದರು. ಕಾಂಗ್ರೆಸ್ ಶಾಸಕರು ಧರಣಿ ನಡೆಸುತ್ತಿದ್ದರಿಂದ ಚರ್ಚೆಯಲ್ಲಿ ಪಾಲ್ಗೊಳ್ಳಲಿಲ್ಲ,
2022 ನೇ ಸಾಲಿನ ಕ್ರಿಮಿನಲ್‌ ಕಾನೂನು ತಿದ್ದುಪಡಿ ಅಧ್ಯಾದೇಶ, 1944( ಕರ್ನಾಟಕ ತಿದ್ದುಪಡಿ) ಆರ್ಥಿಕ ಅಪರಾಧಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಕ್ರಮಕ್ಕೆ ಆದೇಶ ಮಾಡಿದರೆ ಜಿಲ್ಲಾ ನ್ಯಾಯಾಧೀಶರಿಗೆ ಮಾತ್ರ ಅವಕಾಶ ಇತ್ತು. ಈ ಅಧಿಕಾರವನ್ನು ವಿಸ್ತರಣೆ ಮಾಡಲು ಈ ವಿಧೇಯಕ ಅಂಗೀಕಾರ ಮಾಡಲಾಗಿದೆ.
ಕಾಂಗ್ರೆಸ್ ಸದಸ್ಯರು ತಮ್ಮ ಆಗ್ರಹ ಮುಂದುವರೆಸಿದ ಹಿನ್ನೆಲೆಯಲ್ಲಿ ಸಭಾಧ್ಯಕ್ಷರು ಕಲಾಪವನ್ನು ನಾಳೆ ಬೆಳಗ್ಗೆ ೧೧ ಗಂಟೆಗೆ ಮುಂದೂಡಿದರು.

ಓದಿರಿ :-   ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: 32 ಶೈಕ್ಷಣಿಕ ಜಿಲ್ಲೆಗೆ ಎ ಗ್ರೇಡ್, ಮೊದಲನೇ ಸ್ಥಾನ ಹಂಚಿಕೊಂಡ 145 ವಿದ್ಯಾರ್ಥಿಗಳು

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ