ರಷ್ಯಾ-ಉಕ್ರೇನ್ ಯುದ್ಧ: ಭಾರತದ ಮಧ್ಯಸ್ಥಿಕೆಗೆ ನಾವು ಮನವಿ ಮಾಡ್ತೇವೆ; ಪುಟಿನ್ ಮೋದಿಜಿ ಮಾತು ಕೇಳಬಹುದು ಅಥವಾ ಕನಿಷ್ಠಪಕ್ಷ ಯೋಚಿಸಬಹುದು- ಉಕ್ರೇನ್ ರಾಯಭಾರಿ

ನವದೆಹಲಿ: ಭಾರತದಲ್ಲಿನ ಉಕ್ರೇನ್ ರಾಯಭಾರಿ ಇಗೊರ್ ಪೊಲಿಖಾ ರಷ್ಯಾದ ಆಕ್ರಮಣದ ಮಧ್ಯೆ ಪ್ರಧಾನಿ ನರೇಂದ್ರ ಮೋದಿಯವರ ಮಧ್ಯಸ್ಥಿಕೆಯನ್ನು ಕೋರಿದ್ದಾರೆ.
ಬಿಕ್ಕಟ್ಟನ್ನು ಪರಿಹರಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಪ್ರಧಾನಿ ಮೋದಿಯನ್ನು ಒತ್ತಾಯಿಸಿದ ಇಗೊರ್ ಪೊಲಿಖಾ, “ಭಾರತವು ಬಹಳ ಹಿಂದಿನಿಂದಲೂ ರಷ್ಯಾದೊಂದಿಗೆ ವಿಶೇಷ ಸಂಬಂಧವನ್ನು ಹೊಂದಿದೆ ಮತ್ತು ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ನವದೆಹಲಿ ಹೆಚ್ಚು ಸಕ್ರಿಯ ಪಾತ್ರ ವಹಿಸಬೇಕು ಎಂದು ಅವರು ಒತ್ತಾಯಿಸಿದರು.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ನಮ್ಮ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯನ್ನು ತಕ್ಷಣವೇ ಸಂಪರ್ಕಿಸುವಂತೆ ನಾವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸುತ್ತೇವೆ ಎಂದು ಉಕ್ರೇನ್ ರಾಯಭಾರಿ ಇಗೊರ್ ಪೊಲಿಖಾ ಹೇಳಿದ್ದಾರೆ.
ಎಷ್ಟು ವಿಶ್ವ ನಾಯಕರ ಮಾತನ್ನು ರಷ್ಯಾ ಅಧ್ಯಕ್ಷ ಪುಟಿನ್ ಕೇಳುತ್ತಾರೆಂದು ನನಗೆ ತಿಳಿದಿಲ್ಲ, ಆದರೆ, ಪ್ರಧಾನಿ ಮೋದಿ ಅವರ ಸ್ಥಿತಿಯು ನನಗೆ ಭರವಸೆ ಮೂಡಿಸಿದೆ. ಮೋದಿ ಅವರ ಮಾತನ್ನು ಕೇಳಬಹುದು, ಅವರ ಬಲವಾದ ಧ್ವನಿಯಿಂದಾಗಿ, ಪುಟಿನ್ ಕನಿಷ್ಠ ಆ ಬಗ್ಗೆ ಯೋಚಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ನಾವು ಭಾರತ ಸರ್ಕಾರದಿಂದ ಹೆಚ್ಚು ಅನುಕೂಲಕರವಾದ ಮನೋಭಾವವನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಅವರು ಹೇಳಿದರು.
ಇದು ಘೋರ ಆಕ್ರಮಣದ ಪ್ರಕರಣವಾಗಿದೆ. ನಾವು ಸಾವುನೋವುಗಳ ಬಗ್ಗೆ ತಾಜಾ ಮಾಹಿತಿಯನ್ನು ಪಡೆಯುತ್ತಿದ್ದೇವೆ. ಅವರು ಮಿಲಿಟರಿ ಸೌಲಭ್ಯಗಳ ಮೇಲೆ ಮಾತ್ರ ದಾಳಿ ಮಾಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ, ಆದರೆ ನಾವು ನಾಗರಿಕ ಸಾವುನೋವುಗಳನ್ನು ಅನುಭವಿಸಿದ್ದೇವೆ ಎಂದು ಎಂದರು.

ರಷ್ಯಾದ ಐದು ವಿಮಾನಗಳು ಮತ್ತು ಎರಡು ಹೆಲಿಕಾಪ್ಟರ್‌ಗಳು, ಟ್ಯಾಂಕ್‌ಗಳು ಮತ್ತು ಟ್ರಕ್‌ಗಳನ್ನು ಉಕ್ರೇನಿಯನ್ ಪಡೆಗಳು ಹೊಡೆದುರುಳಿಸಿದೆ. ರಷ್ಯಾದ ಪಡೆಗಳು ಗಡಿಯನ್ನು ದಾಟುತ್ತಿರುವ ಬಗ್ಗೆ ನಮಗೆ ಮಾಹಿತಿ ಇದೆ.” ಭಾರತವು ವಿಶ್ವಸಂಸ್ಥೆಯ ಭದ್ರತಾ ಮಂಡಳಿ, ಶಾಶ್ವತವಲ್ಲದ ಸದಸ್ಯ. ಭಾರತ ಜಾಗತಿಕವಾಗಿ ಪ್ರಭಾವಿ ದೇಶ. ಭಾರತದ ರಾಜತಾಂತ್ರಿಕತೆಯ ಇತಿಹಾಸದ ಬಗ್ಗೆ ನನಗೆ ಸಾಕಷ್ಟು ತಿಳಿದಿದೆ, ಎಂದು ಇಗೊರ್ ಪೋಲಿಖಾ ಹೇಳಿದರು.
ನಾವು ಭಾರತದ ಬೆಂಬಲವನ್ನು ಕೇಳುತ್ತೇವೆ… ಪ್ರಜಾಸತ್ತಾತ್ಮಕ ರಾಜ್ಯದ ವಿರುದ್ಧ ನಿರಂಕುಶ ಆಡಳಿತದ ಆಕ್ರಮಣದ ಸಂದರ್ಭದಲ್ಲಿ, ಭಾರತವು ತನ್ನ ಜಾಗತಿಕ ಪಾತ್ರವನ್ನು ಸಂಪೂರ್ಣವಾಗಿ ವಹಿಸಿಕೊಳ್ಳಬೇಕು. ಮೋದಿ ವಿಶ್ವದ ಅತ್ಯಂತ ಶಕ್ತಿಶಾಲಿ ಮತ್ತು ಗೌರವಾನ್ವಿತ ನಾಯಕರಲ್ಲಿ ಒಬ್ಬರು ಎಂದು ಇಗೊರ್ ಪೋಲಿಖಾ ಹೇಳಿದರು.
ಅವರು [ಪ್ರಧಾನಿ ಮೋದಿ] ರಷ್ಯಾದೊಂದಿಗೆ ವಿಶೇಷ ಸಂಬಂಧವನ್ನು ಹೊಂದಿದ್ದಾರೆ. ಪುಟಿನ್ ಎಷ್ಟು ನಾಯಕರು ಕೇಳುತ್ತಾರೆ ಎಂದು ನನಗೆ ತಿಳಿದಿಲ್ಲ. ಆದರೆ, ಮೋದಿ ಅವರ ವಿಶೇಷ ಪಾಲುದಾರಿಕೆಯೊಂದಿಗೆ ಅವರು ವಿಶೇಷ ಪಾತ್ರವನ್ನು ವಹಿಸಬಹುದು. ಭಾರತ ಸರ್ಕಾರದ ಅನುಕೂಲಕರ ಪಾತ್ರವನ್ನು ನಿರೀಕ್ಷಿಸುತ್ತೇವೆ. ಇದು ಸತ್ಯದ ಕ್ಷಣ, ವಿಧಿಯ ಕ್ಷಣ ಎಂದು ಇಗೊರ್ ಪೋಲಿಖಾ ಹೇಳಿದರು.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿದ ಕೆಲವೇ ಗಂಟೆಗಳ ನಂತರ ಭಾರತದ ಉಕ್ರೇನ್ ರಾಯಭಾರಿ ಇಗೊರ್ ಪೋಲಿಖ್ ಅವರು ಪ್ರಧಾನಿ ಮೋದಿಗೆ ಮನವಿ ಮಾಡಿದರು.
ಉಕ್ರೇನ್‌ನ ಕೈವ್, ಖಾರ್ಕಿವ್ ಮತ್ತು ಡ್ನಿಪ್ರೊ ಸೇರಿದಂತೆ ಕೆಲವು ಭಾಗಗಳಲ್ಲಿ ಸ್ಫೋಟಗಳು ಕೇಳಿಬಂದವು. ಗುರುವಾರ ಮಧ್ಯಾಹ್ನ 1:30 ರ ಹೊತ್ತಿಗೆ ರಷ್ಯಾದ ಶೆಲ್ ದಾಳಿಯಲ್ಲಿ ಕನಿಷ್ಠ ಏಳು ಜನರು ಮೃತಪಟ್ಟಿದ್ದಾರೆ ಮತ್ತು ಒಂಬತ್ತು ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಹೇಳಿಕೊಂಡಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement