ಇದೇನು ಸೋಜಿಗ..? : ಪಶ್ಚಿಮ ಬಂಗಾಳದಲ್ಲಿ ಮಧ್ಯರಾತ್ರಿಗೆ ವಿಧಾನಸಭೆ ಅಧಿವೇಶನ ಆರಂಭ..! ಹೀಗಾದರೆ ದೇಶದ ಇತಿಹಾಸದಲ್ಲೇ ಮೊದಲು..!!

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆಯ ಅಧಿವೇಶನವು ಮಾರ್ಚ್ 7 ರ  ರಾತ್ರಿಯ  2 ಗಂಟೆಗೆ ಪ್ರಾರಂಭವಾಗಲಿದೆ ಎಂದು ರಾಜ್ಯಪಾಲ ಜಗದೀಪ್ ಧನಕರ್ ಅವರು ಸಹಿ ಮಾಡಿರುವ ಟಿಪ್ಪಣಿಯಲ್ಲಿ ಸರ್ಕಾರಕ್ಕೆ ಕಳುಹಿಸಲಾಗಿದೆ..!
ಫೆಬ್ರವರಿ 17ರಂದು ಪಶ್ಚಿಮ ಬಂಗಾಳ ಸರ್ಕಾರವು ರಾಜ್ಯಪಾಲರಿಗೆ ಕಳುಹಿಸಿದ ಟಿಪ್ಪಣಿಯೊಂದಿಗೆ ಮಾರ್ಚ್ 7 ರಂದು ಮಧ್ಯಾಹ್ನ 2 ಗಂಟೆಗೆ ವಿಧಾನಸಭೆ ಅಧಿವೇಶನವನ್ನು ಕರೆಯುವಂತೆ ಶಿಫಾರಸು ಮಾಡುವುದರೊಂದಿಗೆ ಇದು ಪ್ರಾರಂಭವಾಯಿತು. ಆದಾಗ್ಯೂ, “ಸಂವಿಧಾನದ 166 (3) ನೇ ವಿಧಿಯ ಅಡಿಯಲ್ಲಿ ವ್ಯವಹಾರದ ನಿಯಮಗಳ ಅನುಸರಣೆಯ ನಂತರ ಕ್ಯಾಬಿನೆಟ್ ಮಾಡಿದ ಶಿಫಾರಸಿನ ಮೇರೆಗೆ ರಾಜ್ಯಪಾಲರು ಸದನವನ್ನು ಕರೆಯುವುದರಿಂದ ಸಾಂವಿಧಾನಿಕ ಅನುಸರಣೆಗಾಗಿ ಶಿಫಾರಸನ್ನು ಹಿಂತಿರುಗಿಸಲಾಗಿದೆ” ಎಂದು ಜಗದೀಪ್ ಧನಕರ್ ಈ ಹಿಂದೆ ಫೆಬ್ರವರಿ 19 ರಂದು ಟ್ವೀಟ್ ಮಾಡಿದ್ದರು.

ಅಪರಾತ್ರಿ ಅಧಿವೇಶ ನಡೆಸಲು ನಿರ್ಧರಿಸಲಾಗಿದೆ ಎಂದು ಅಪಹಾಸ್ಯ ಮಾಡುವಂತದ್ದು ಏನೂ ಇಲ್ಲ. ಈ ನಿರ್ಧಾರ ನನ್ನದಲ್ಲ. ರಾಜ್ಯ ಸಚಿವ ಸಂಪುಟ ಏನನ್ನು ಶಿಫಾರಸು ಮಾಡಿದೆಯೋ ಅದನ್ನು ಘೋಷಿಸಿದ್ದೇನೆ’ ಎಂದು ರಾಜ್ಯಪಾಲ ಧನಕರ್‌ ಹೇಳಿದ್ದಾರೆ. ಮಾರ್ಚ್ 7ರ ರಾತ್ರಿ 2 ಗಂಟೆಗೆ ಪಶ್ಚಿಮ ಬಂಗಾಳ ವಿಧಾನಸಭೆ ಅಧಿವೇಶನ ಆರಂಭಗೊಳ್ಳಲಿದೆ ಎಂದು ರಾಜ್ಯ ಭವನ ಪ್ರಕಟಣೆ ತಿಳಿಸಿದೆ.

ಪ್ರಮುಖ ಸುದ್ದಿ :-   ರಾಯಬರೇಲಿಯಿಂದ ಅಕ್ಕನ ವಿರುದ್ಧ ಸ್ಪರ್ಧಿಸಲು ಬಿಜೆಪಿ ನೀಡಿದ್ದ ಆಫರ್‌ ತಿರಸ್ಕರಿಸಿದರೇ ವರುಣ್‌ ಗಾಂಧಿ..?
https://twitter.com/jdhankhar1/status/1496771008111386626?ref_src=twsrc%5Etfw%7Ctwcamp%5Etweetembed%7Ctwterm%5E1496771008111386626%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Findia%2Fstory%2Fbengal-assembly-may-begin-at-2-am-on-march-7-history-in-making-says-governor-jagdeep-dhankhar-1917364-2022-02-24

ನಂತರದ ನಡೆದ ಸಂವಹನದ ಸಮಯದಲ್ಲಿ ಟೈಪಿಂಗ್ ದೋಷವು 2 PM ರಿಂದ 2 AM ಎಂದು ಬದಲಾಗಿದೆ. ಈ ವಿಚಿತ್ರ ಸಮಯ ನಿಗದಿ ಬಗ್ಗೆ ತಿಳಿದು ಅನೇಕರು ಬೆರಗಾಗಿದ್ದಾರೆ. ಅಪರಾತ್ರಿ ಅಧಿವೇಶನದ ಬಗ್ಗೆ ಕೇಳಿದ ಪ್ರಶ್ನೆಗೆ ಬಂಗಾಳದ ಸ್ಪೀಕರ್‌ ಅವರು, ಅಂಥದ್ದೊಂದು ಸಮಯ ನಿಗದಿಯಾಗಿದೆಯೆ? ಅಪರಾತ್ರಿ ಅಧಿವೇಶನ ಸೇರುವ ತುರ್ತು ಇಲ್ಲವಲ್ಲ, ಬಹುಶಃ ಅದು ಟೈಪಿಂಗ್‌ ತಪ್ಪಿನಿಂದ ಎಡವಟ್ಟಾಗಿರಬೇಕು’ ಎಂದು ಸಮಜಾಯಿಶಿ ನೀಡಿದ್ದಾರೆ.
ರಾಜ್ಯಪಾಲರು ಏಕಾಏಕಿ ಅಧಿವೇಶನದ ಈ ಅಪರಾತ್ರಿ ಸಮಯದ ಪ್ರಕಟಣೆ ಹೊರಡಿಸಿಲ್ಲ. ಸರ್ಕಾರದಿಂದ ಬಂದ ಶಿಫಾರಸು ಕಂಡು ರಾಜ್ಯಪಾಲ ಧನಕರ್‌ ಟೈಪಿಂಗ್‌ ಪ್ರಮಾದವೇ ಇರಬೇಕು ಎಂದು ಭಾವಿಸಿ, ಸರ್ಕಾರದ ಮುಖ್ಯ ಕಾರ್ಯದರ್ಶಿಯನ್ನು ಸಂಪರ್ಕಿಸಲು ಪ್ರಯತ್ನಿಸಿದ್ದರು. ಮುಖ್ಯ ಕಾರ್ಯದರ್ಶಿ ನನ್ನ ಸಂಪರ್ಕಕ್ಕೆ ಸಿಗಲಿಲ್ಲ. ನಾನು ಕರೆ ಮಾಡಿದರೆ ಅವರಿಗೆ ಉದಾಸೀನ. ಹಾಗಾಗಿ ಇರುವ ಸಮಯವನ್ನೇ ಅಂತಿಮಗೊಳಿಸಿ ಪ್ರಕಟಿಸಿದ್ದೇನೆ’ ಎಂದು ರಾಜ್ಯಪಾಲರು ಬೇಸರದಿಂದ ಹೇಳಿದ್ದಾರೆ.

https://twitter.com/jdhankhar1/status/1496780545967243264?ref_src=twsrc%5Etfw%7Ctwcamp%5Etweetembed%7Ctwterm%5E1496780545967243264%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Findia%2Fstory%2Fbengal-assembly-may-begin-at-2-am-on-march-7-history-in-making-says-governor-jagdeep-dhankhar-1917364-2022-02-24

ಮಧ್ಯೆ ರಾತ್ರಿ ಅಧಿವೇಶನ ಸೇರುವ ನಿರ್ಧಾರವನ್ನು ರಾಜ್ಯ ಸಚಿವ ಸಂಪುಟ ತೆಗೆದುಕೊಂಡಿದೆ. ಅದರ ನಿರ್ಧಾರವನ್ನು ನಾನು ಮಾನ್ಯ ಮಾಡಿದ್ದೇನೆ’ ಎಂದು ಧನಕರ್‌ ಟ್ವೀಟ್‌ ಮೂಲಕ ತಿಳಿಸಿದ್ದಾರೆ.
ಈ ಮೊದಲು ಬಜೆಟ್‌ ಅಧಿವೇಶನ ಸೇರುವ ಕುರಿತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಳುಹಿಸಿದ್ದ ಶಿಫಾರಸ್ಸನ್ನು ರಾಜ್ಯಪಾಲರು ಹಿಂದಕ್ಕೆ ಕಳುಹಿಸಿದ್ದರು. ಶಿಫಾರಸು ಸಚಿವ ಸಂಪುಟದಿಂದ ಬರಬೇಕು ಎಂದು ಹೇಳಿದ್ದರು.
ಮಮತಾ ಬ್ಯಾನರ್ಜಿ ಅವರು ರಾಜ್ಯಪಾಲ ಜಗದೀಪ್ ಧನಕರ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದು, ಫೆಬ್ರವರಿ 28 ರಂದು ನಡೆಯುವ ಸಚಿವ ಸಂಪುಟ ಸಭೆಯ ನಂತರ ಹೊಸ ಶಿಫಾರಸ್ಸು ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ. ಒಂದುವೇಳೆ ಪಶ್ಚಿಮ ಬಂಗಾಳ ವಿಧಾನಸಭೆಯು ರಾತ್ರಿ 2 ಗಂಟೆಗೆ ಆರಂಭವಾದರೆ, ಇದು ದೇಶದಲ್ಲೇ ಮೊದಲನೆಯದಾಗುತ್ತದೆ.

ಪ್ರಮುಖ ಸುದ್ದಿ :-   ಇವಿಎಂ ಮತಗಳ ಜೊತೆ ವಿವಿಪ್ಯಾಟ್ ಮತಗಳ ಸಂಪೂರ್ಣ ಎಣಿಕೆ : ಎಲ್ಲ ಅರ್ಜಿಗಳನ್ನು ವಜಾ ಮಾಡಿದ ಸುಪ್ರೀಂ ಕೋರ್ಟ್

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement