ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ತಮ್ಮನ ಮಗ ಮುಬಾಶಿರ್ ಬಿಜೆಪಿ ಸೇರ್ಪಡೆ

ಜಮ್ಮು: ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರ ತಮ್ಮನ ಮಗ ಮುಬಾಶಿರ್ ಆಜಾದ್ ಅವರು ಭಾನುವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ
ಪ್ರಧಾನಿ ನರೇಂದ್ರ ಮೋದಿಯವರ ತಳಮಟ್ಟದ ಅಭಿವೃದ್ಧಿ ಕಾರ್ಯಗಳಿಂದ ಪ್ರಭಾವಿತರಾಗಿ ಬಿಜೆಪಿಗೆ ಸೇರಿದ್ದೇನೆ ಎಂದು ಮುಬಾಶಿರ್ ಆಜಾದ್ ಹೇಳಿದ್ದಾರೆ.
ಗುಲಾಂ ನಬಿ ಆಜಾದ್ ಅವರ ಕಿರಿಯ ಸಹೋದರ ಲಿಯಾಕತ್ ಅಲಿ ಅವರ ಪುತ್ರ ಮುಬಾಶಿರ್ ಆಜಾದ್ ತಮ್ಮ ದೊಡ್ಡಪ್ಪನಿಗೆ ಕಾಂಗ್ರೆಸ್ ನಾಯಕತ್ವದಿಂದ “ಅಗೌರವ” ಉಂಟಾಗಿದೆ ಎಂದು ಹೇಳಿದ್ದಾರೆ, ಅದು ತನಗೆ ನೋವುಂಟುಮಾಡಿತು ಹಾಗಾಗಿ ನಾನು ಪಕ್ಷ ತೊರೆದೆ. ಆದರೆ, ಬಿಜೆಪಿ ಸೇರುವ ಬಗ್ಗೆ ಚಿಕ್ಕಪ್ಪನ ಜತೆ ಚರ್ಚಿಸಿಲ್ಲ ಎಂದು ಕಿಡಿಕಾರಿದರು.
ಮುಬಾಶಿರ್ ಆಜಾದ್ ಮತ್ತು ಅವರ ಬೆಂಬಲಿಗರನ್ನು ಜಮ್ಮು ಮತ್ತು ಕಾಶ್ಮೀರ ಬಿಜೆಪಿ ಅಧ್ಯಕ್ಷ ರವೀಂದರ್ ರೈನಾbಇತರ ಹಿರಿಯ ನಾಯಕರು ಪಕ್ಷಕ್ಕೆ ಸ್ವಾಗತಿಸಿದರು. ಅವರು ಕೇಸರಿ ಪಕ್ಷಕ್ಕೆ ಸೇರುವುದು “ತಿರುವು” ಎಂದು ಬಣ್ಣಿಸಲಾಗಿದೆ, ಇದು ಚೆನಾಬ್ ಕಣಿವೆ ಪ್ರದೇಶದ ದೋಡಾ, ಕಿಶ್ತ್ವಾರ್ ಮತ್ತು ರಾಂಬನ್ ಜಿಲ್ಲೆಗಳಿಂದ ಹೆಚ್ಚಿನ ಯುವ ಕಾರ್ಯಕರ್ತರನ್ನು ಪಕ್ಷಕ್ಕೆ ಸೇರಲು ದಾರಿ ಮಾಡಿಕೊಡುತ್ತದೆ ಎಂದು ಹೇಳಲಾಗಿದೆ.
ವಿರೋಧ ಪಕ್ಷಗಳ ರಾಜಕೀಯ ನಾಯಕರು, ಹಿಂದೂಗಳು, ಮುಸ್ಲಿಮರು, ಗುಜ್ಜರ್‌ಗಳು, ಬಕರ್‌ವಾಲ್‌ಗಳು ಮತ್ತು ಪಹಾರಿಗಳು ಸೇರಿದಂತೆ ಎಲ್ಲಾ ಸಮುದಾಯಗಳ ಸಾಮಾಜಿಕ ಕಾರ್ಯಕರ್ತರು ಸೇರ್ಪಡೆಗೊಳ್ಳುವುದರೊಂದಿಗೆ ಬಿಜೆಪಿ ವೇಗವಾಗಿ ಬೆಳೆಯುತ್ತಿದೆ ಎಂದು ಅವರು ಹೇಳಿದರು.
ಏಪ್ರಿಲ್ 2009 ರಲ್ಲಿ, ಆಜಾದ್ ಅವರ ಸಹೋದರ ಗುಲಾಂ ಅಲಿ ಕೂಡ ಬಿಜೆಪಿ ಸೇರಿದ್ದರು.

ಓದಿರಿ :-   ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಹರಿಯಾಣದ ಮಾಜಿ ಸಿಎಂ ಚೌತಾಲಾ ದೋಷಿ ಎಂದು ದೆಹಲಿ ಕೋರ್ಟ್ ತೀರ್ಪು

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

advertisement

ನಿಮ್ಮ ಕಾಮೆಂಟ್ ಬರೆಯಿರಿ