ರಷ್ಯಾ ಅಧ್ಯಕ್ಷ ಪುಟಿನ್ ಅಂತಾರಾಷ್ಟ್ರೀಯ ಜೂಡೋ ಫೆಡರೇಶನ್ ಗೌರವ ಅಧ್ಯಕ್ಷ ಸ್ಥಾನದಿಂದ ಅಮಾನತು

ಮಾಸ್ಕೋ: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಅಂತಾರಾಷ್ಟ್ರೀಯ ಜೂಡೋ ಫೆಡರೇಶನ್ (IJF) ಗೌರವ ಅಧ್ಯಕ್ಷ ಸ್ಥಾನದಿಂದ ಅಮಾನತುಗೊಳಿಸಲಾಗಿದೆ, ಉಕ್ರೇನ್ ಮೇಲೆ ರಷ್ಯಾ ಆಕ್ರಮಣದ ಹಿನ್ನೆಲೆಯಲ್ಲಿ ಭಾನುವಾರ ಕ್ರೀಡಾ ಆಡಳಿತ ಮಂಡಳಿ ಘೋಷಿಸಿದೆ.
ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧ ಸಂಘರ್ಷದ ನಡುವೆ, ಅಂತಾರಾಷ್ಟ್ರೀಯ ಜೂಡೋ ಫೆಡರೇಶನ್‌ನ ಗೌರವಾಧ್ಯಕ್ಷ ಮತ್ತು ರಾಯಭಾರಿಯಾಗಿ ವ್ಲಾಡಿಮಿರ್ ಪುಟಿನ್ ಅವರ ಸ್ಥಾನಮಾನವನ್ನು ಅಂತರರಾಷ್ಟ್ರೀಯ ಜೂಡೋ ಫೆಡರೇಶನ್ ಅಮಾನತುಗೊಳಿಸಿದೆ” ಎಂದು ಐಜಿಎಫ್‌ (IJF) ಹೇಳಿಕೆಯಲ್ಲಿ ತಿಳಿಸಿದೆ.

ರಷ್ಯಾದಲ್ಲಿ ಮೇ 20-22ರ ಕಾರ್ಯಕ್ರಮವನ್ನು ರದ್ದುಗೊಳಿಸಿರುವುದಾಗಿ ಐಜೆಎಫ್ ಶುಕ್ರವಾರ ಹೇಳಿತ್ತು. “ರಷ್ಯಾದ ಕಜಾನ್‌ನಲ್ಲಿ 2022 ರ ಗ್ರ್ಯಾಂಡ್ ಸ್ಲಾಮ್ ಅನ್ನು ರದ್ದುಗೊಳಿಸಿರುವುದನ್ನು ಅಂತಾರಾಷ್ಟ್ರೀಯ ಜೂಡೋ ಫೆಡರೇಶನ್ ವಿಷಾದದಿಂದ ಘೋಷಿಸುತ್ತದೆ ಎಂದು ಐಜಿಎಫ್‌ (IJF) ಅಧ್ಯಕ್ಷ ಮಾರಿಯಸ್ ವೈಜರ್ ಹೇಳಿದರು. ರಷ್ಯಾ ಉಕ್ರೇನ್‌ನಲ್ಲಿ ಸೇನಾ ಕಾರ್ಯಾಚರಣೆಯನ್ನು ಘೋಷಿಸಿದ ಕೆಲವು ದಿನಗಳ ನಂತರ ಈ ನಿರ್ಧಾರವು ಬಂದಿದೆ.
ರಷ್ಯಾದ ಸೈನ್ಯವು ಗುರುವಾರ ಉಕ್ರೇನ್ ಅನ್ನು ಆಕ್ರಮಿಸಿತು ಮತ್ತು ಅಂದಿನಿಂದ ದೇಶದ ಪ್ರಮುಖ ನಗರಗಳಾದ್ಯಂತ ನೂರಾರು ಮಿಲಿಟರಿ ಸ್ಥಾಪನೆಗಳನ್ನು ಗುರಿಯಾಗಿರಿಸಿಕೊಂಡಿದೆ. ವರದಿಗಳ ಪ್ರಕಾರ, ಇದುವರೆಗೆ 600 ಕ್ಕೂ ಹೆಚ್ಚು ನಾಗರಿಕರು ಸಂಘರ್ಷದಲ್ಲಿ ಮೃತಪಟ್ಟಿದ್ದಾರೆ. ಸಾವಿರಾರು ಜನರು ಗಾಯಗೊಂಡಿದ್ದಾರೆ.

ಓದಿರಿ :-   1955ರ ಮರ್ಸಿಡಿಸ್-ಬೆಂಜ್ 300 SLR ಕಾರು ಮಾರಾಟವಾದ ದುಬಾರಿ ಕಾರು...ಮೊತ್ತ ಕೇಳಿದರೆ ಬೆಚ್ಚಿ ಬೀಳ್ತೀರಾ..!

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

advertisement

ನಿಮ್ಮ ಕಾಮೆಂಟ್ ಬರೆಯಿರಿ