ಉಕ್ರೇನ್‌ನ ವಿಶ್ವದ ಅತಿದೊಡ್ಡ ವಿಮಾನ ನಾಶ ಪಡಿಸಿದ ರಷ್ಯಾ..!

ಕೀವ್‌: ನ್ಯಾಟೋ ಗುಂಪಿಗೆ ಉಕ್ರೇನ್‌ ಸೇರ್ಪಡೆಯನ್ನೇ ಪ್ರಮುಖ ಕಾರಣವನ್ನಾಗಿಸಿಕೊಂಡು ಭಯಾನಕ ಯುದ್ಧ ಸಾರಿರುವ ರಷ್ಯಾ ವಾಯುದಾಳಿ ಮುಂದುವರಿದಿದ್ದು, ವಿಶ್ವದ ಅತಿ ದೊಡ್ಡ ವಿಮಾನ ‘ಮ್ರಿಯಾ’ವನ್ನು ನಾಶಪಡಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
4ನೇ ದಿನದ ದಾಳಿಯಲ್ಲಿ(ಬಾನುವಾರ) ಉಕ್ರೇನ್‌ ರಾಜಧಾನಿ ಕೀವ್‌ ಸಮೀಪದಲ್ಲಿ ವಿಶ್ವದ ಅತಿ ದೊಡ್ಡದಾದ AN-225 ಮ್ರಿಯಾ ಸರಕು ಸಾಗಣೆ ವಿಮಾನವನ್ನು ರಷ್ಯಾ ಪಡೆಗಳು ನಾಶಪಡಿಸಿವೆ. ಆದರೆ ನಮ್ಮ ಮ್ರಿಯಾ ಎಂದಿಗೂ ನಾಶವಾಗುವುದಿಲ್ಲ ಎಂದು ಉಕ್ರೇನ್‌ ಸರ್ಕಾರ ಟ್ವೀಟ್‌ ಮಾಡಿದೆ.
‘ನಾವು ಈ ವಿಮಾನವನ್ನು ಮತ್ತೆ ನಿರ್ಮಿಸುವ ಮೂಲಕ ನಮ್ಮ ಕನಸನ್ನು ಮತ್ತಷ್ಟು ಬಲಿಷ್ಠ, ಮುಕ್ತ ಹಾಗೂ ಪ್ರಜಾಪ್ರಭುತ್ವದ ಉಕ್ರೇನ್‌ ಅನ್ನು ರೂಪಿಸುತ್ತೇವೆ’ ಎಂದು ಹೇಳಿದೆ.
ಇದರ ಜೊತೆ ವಿಮಾನದ ಫೋಟೋ ಹಂಚಿಕೊಂಡಿದ್ದು ಅತಿ ದೊಡ್ಡ ವಿಮಾನಗಳನ್ನು ಸುಟ್ಟು ಹಾಕಿದ್ದಾರೆ. ಆದರೆ ನಮ್ಮ ಮ್ರಿಯಾ ಎಂದಿಗೂ ನಾಶವಾಗುವುದಿಲ್ಲ ಎಂದು ಅವರು ಬರೆದುಕೊಂಡಿದ್ದಾರೆ.
1988 ರಲ್ಲಿ ಮೊದಲ ಬಾರಿಗೆ ಟೇಕ್ ಆಫ್ ಆದ ವಿಮಾನವನ್ನು ಪ್ರಪಂಚದಾದ್ಯಂತ ದೊಡ್ಡ ಪ್ರಮಾಣದ ಮಾನವೀಯ ಸಹಾಯವನ್ನು ಸಾಗಿಸಲು ಬಳಸಲಾಯಿತು, ವಿಶೇಷವಾಗಿ ಅಲ್ಪಾವಧಿಯಲ್ಲಿ. ಸೋವಿಯತ್ ಬಾಹ್ಯಾಕಾಶ ನೌಕೆಗಳನ್ನು ವರ್ಗಾಯಿಸಲು ಸಹ ಇದನ್ನು ಬಳಸಲಾಯಿತು.
ಯುರೋಪಿಯನ್‌ ಒಕ್ಕೂಟ ಮತ್ತು ಅಮೆರಿಕ ವಿಧಿಸಿದ ನಿರ್ಬಂಧಗಳ ಭಾಗವಾಗಿ ಅನೇಕ ಯುರೋಪಿಯನ್ ರಾಷ್ಟ್ರಗಳಿಂದ ರಷ್ಯಾದ ವಿಮಾನಗಳನ್ನು ನಿಷೇಧಿಸಲಾಗಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement