ದಾಳಿಯಲ್ಲಿ 4500 ರಷ್ಯಾದ ಸೈನಿಕರ ಸಾವು ಎಂದ ಉಕ್ರೇನ್ ಅಧ್ಯಕ್ಷರ ಹೇಳಿಕೆ, ತಕ್ಷಣವೇ ಯುರೋಪಿಯನ್‌ ಒಕ್ಕೂಟದ ಸದಸ್ಯತ್ವ ನೀಡಲು ಒತ್ತಾಯ

ಕೀವ್:‌ 4,500ಕ್ಕೂ ಹೆಚ್ಚು ರಷ್ಯಾದ ಸೈನಿಕರು ಈಗಾಗಲೇ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸೋಮವಾರ ಹೇಳಿದ್ದಾರೆ.
TRT ವರ್ಲ್ಡ್ ನ್ಯೂಸ್ ಪ್ರಕಾರ ಕಳೆದ ನಾಲ್ಕು ದಿನಗಳಲ್ಲಿ 16 ಮಕ್ಕಳು ಮೃತಪಟ್ಟಿದ್ದಾರೆ ಮತ್ತು 45 ಮಂದಿ ಗಾಯಗೊಂಡಿದ್ದಾರೆ ಎಂದು ಝೆಲೆನ್ಸ್ಕಿ ಹೇಳಿಕೊಂಡಿದ್ದಾರೆ.
ವಿಶ್ವಸಂಸ್ಥೆ ವರದಿ ಪ್ರಕಾರ, ಐದು ದಿನಗಳ ಹಿಂದೆ ರಷ್ಯಾದ ಒಳನುಗ್ಗುವಿಕೆಯಿಂದ ಉಕ್ರೇನ್‌ನಲ್ಲಿ ಏಳು ಮಕ್ಕಳು ಸೇರಿದಂತೆ ಕನಿಷ್ಠ 102 ನಾಗರಿಕರು ಮೃತಪಟ್ಟಿದ್ದಾರೆ.
ವಿಶ್ವಸಂಸ್ಥೆ ಮಾನವ ಹಕ್ಕುಗಳ ಮುಖ್ಯಸ್ಥ ಮಿಚೆಲ್ ಬ್ಯಾಚೆಲೆಟ್ ಜಿನೀವಾದಲ್ಲಿ ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಗೆ ನಿಜವಾದ ಅಂಕಿಅಂಶಗಳು ಗಣನೀಯವಾಗಿ ಹೆಚ್ಚಿವೆ ಎಂದು ಹೇಳಿದರು.
ಈ ನಾಗರಿಕರಲ್ಲಿ ಹೆಚ್ಚಿನವರು ಭಾರೀ ಫಿರಂಗಿ ಮತ್ತು ಬಹು-ಉಡಾವಣಾ ರಾಕೆಟ್ ವ್ಯವಸ್ಥೆಗಳಿಂದ ಶೆಲ್ ದಾಳಿಗಳು ಮತ್ತು ವಾಯುದಾಳಿಗಳನ್ನು ಒಳಗೊಂಡಂತೆ ಸ್ಫೋಟಕ ಶಸ್ತ್ರಾಸ್ತ್ರಗಳಿಂದ ಕೊಲ್ಲಲ್ಪಟ್ಟರು” ಎಂದು ಬ್ಯಾಚೆಲೆಟ್ ಉಲ್ಲೇಖಿಸಿ ಎಎಫ್‌ಪಿ ವರದಿ ಮಾಡಿದ್ದಾರೆ.
ಉಕ್ರೇನಿಯನ್ ಅಧ್ಯಕ್ಷರು ರಷ್ಯಾದ ಸೈನಿಕರಿಗೆ ಮನವಿ ಮಾಡಿದರು, ‘ಇಲ್ಲಿಂದ ಹೊರಬನ್ನಿ’ ಮತ್ತು ‘ನಿಮ್ಮ ಪ್ರಾಣವನ್ನು ಉಳಿಸಿಕೊಳ್ಳಿ’ ಎಂದು ಹೇಳಿದರು.
ನಿಮ್ಮ ಸಲಕರಣೆಗಳನ್ನು ತ್ಯಜಿಸಿ. ಇಲ್ಲಿಂದ ಹೊರಟುಹೋಗಿ. ನಿಮ್ಮ ಕಮಾಂಡರುಗಳನ್ನು ನಂಬಬೇಡಿ. ನಿಮ್ಮ ಪ್ರಚಾರಕರನ್ನು ನಂಬಬೇಡಿ. ನಿಮ್ಮ ಜೀವಗಳನ್ನು ಉಳಿ ಎಂದು ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಉಲ್ಲೇಖಿಸಿ ಎಎಫ್‌ಪಿ ವರದಿ ಮಾಡಿದೆ.
ಇದಲ್ಲದೆ, ವಿಶೇಷ ಕಾರ್ಯವಿಧಾನದ ಮೂಲಕ ಉಕ್ರೇನ್‌ಗೆ “ತಕ್ಷಣವೇ” ಸದಸ್ಯತ್ವವನ್ನು ನೀಡುವಂತೆ ಝೆಲೆನ್ಸ್ಕಿ ಯುರೋಪಿಯನ್ ಒಕ್ಕೂಟವನ್ನು ಒತ್ತಾಯಿಸಿದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement