
ಕೀವ್: ರಷ್ಯಾ ದಾಳಿಯಿಂದ ಉಕ್ರೇನ್ ತತ್ತರಿಸಿ ಹೋಗುತ್ತಿದೆ. ಉಕ್ರೇನ್ ಅಧ್ಯಕ್ಷ ವ್ಲಾಡಿಮಿರ್ ಝೆಲನ್‍ಸ್ಕಿ ಅವರು ದೇಶ ರಕ್ಷಣೆಯಲ್ಲಿ ಪಾಲ್ಗೊಳ್ಳಿ ಎಂದು ಜನರಿಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಈಗ ಮಿಸ್ ಉಕ್ರೇನ್ ಸಹ ತನ್ನ ದೇಶ ರಕ್ಷಣೆಗೆ ಗನ್ ಹಿಡಿದಿದ್ದಾರೆ…!
ಸೌಂದರ್ಯ ಸ್ಪರ್ಧೆಯಲ್ಲಿ ಮಿಸ್ ಉಕ್ರೇನ್ ಆಗಿರುವ ಅನಾಸ್ತೀನಾ ಲೀನಾ(Anastasiia Lenna) 2015ರಲ್ಲಿ ಮಿಸ್ ಗ್ರ್ಯಾಂಡ್ ಇನ್‍ಟರ್‌ನ್ಯಾಷನಲ್ ಬ್ಯೂಟಿ ಸ್ಪರ್ಧೆಯಲ್ಲಿ ಗೆದ್ದಿದ್ದರು.ದೇಶದ ಅಗತ್ಯ ಪರಿಸ್ಥಿತಿಯಲ್ಲಿ ಅವರು ಈಗ ತಮ್ಮ ದೇಶ ರಕ್ಷಣೆ ಮಾಡಲು ಉಕ್ರೇನ್ ಸೈನ್ಯವನ್ನು ಸೇರಿಕೊಂಡಿದ್ದಾರೆ. ಕೈಯಲ್ಲಿ ಗನ್ ಹಿಡಿದು, ಸಮವಸ್ತ್ರವನ್ನು ಧರಿಸಿ ನಿಂತಿರುವ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಲೀನಾ ಅವರು ಸ್ಲಾವಿಟಿಕ್ ಯೂನಿವರ್ಸಿಟಿ ಕೀವ್‌ನಲ್ಲಿ ವಿದ್ಯಾಭ್ಯಾಸವನ್ನು ಮಾಡಿದ್ದಾರೆ.
ವಿಶ್ವದ ಬಾಕ್ಸಿಂಗ್ ದಂತಕಥೆ ಉಕ್ರೇನ್ ಮೇಯರ್ ವಿಟಾಲಿ ಕ್ಲಿಟ್ಸ್ಚ್ಕೋ (Vitali Klitschko) ಕೂಡಾ ಸೈನ್ಯಕ್ಕೆ ಸೇರ್ಪಡೆಗೊಂಡಿದ್ದಾರೆ. ಹೆಚ್ಚಿನವರು ದೇಶ ಸೇವೆ ಮಾಡಲು ಸಿದ್ಧರಿದ್ದಾರೆ. ಆದರೆ ಹೆಚ್ಚಿನ ಶಸ್ತ್ರಾಸ್ತ್ರಗಳನ್ನು ಕೇಳುತ್ತಿದ್ದಾರೆ. ಹೆಚ್ಚಿನವರು ಮಿಲಿಟರಿ ಹಿನ್ನೆಲೆಯುಳ್ಳವರಾಗಿದ್ದಾರೆ. ಎಲ್ಲಾ ಮಹಿಳೆಯರು ಹಾಗೂ ಪುರುಷರು ದೇಶ ರಕ್ಷಣೆಗೆ ಗನ್ ಹಿಡಿದು ಸಿದ್ಧರಾಗಬೇಕು ಎಂದು ವಿಟಾಲಿ ಹೇಳಿದ್ದಾರೆ



ನಿಮ್ಮ ಕಾಮೆಂಟ್ ಬರೆಯಿರಿ