ಉಕ್ರೇನ್‌ನಲ್ಲಿ ಮದುವೆ.. ರಷ್ಯಾ ದಾಳಿಯ ನಂತರ ಹೈದರಾಬಾದ್​ಗೆ ಬಂದು ರಿಸೆಪ್ಷನ್​…

ಹೈದರಾಬಾದ್: ಉಕ್ರೇನ್‌ನಲ್ಲಿ ಘರ್ಷಣೆ ವೇಗವಾಗಿ ಹೆಚ್ಚುತ್ತಿರುವ ನಡುವೆ, ಹೈದರಾಬಾದ್‌ ಹುಡುಗ ಮತ್ತು ಉಕ್ರೇನಿಯನ್ ಯುವತಿ ಯುದ್ಧ ಪೀಡಿತ ಉಕ್ರೇನಿನಿಂದ ಗಂಟುಮೂಟೆ ಕಟ್ಟಿಕೊಂಡು ಭಾರತಕ್ಕೆ ದೌಡಾಯಿಸಿದರು ಹಾಗೂ ಫೆಬ್ರವರಿ 27 ರಂದು ನಗರದಲ್ಲಿ ಆಪ್ತ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಆರತಕ್ಷತೆ ಮಾಡಿಕೊಂಡರು..!

ಪ್ರತೀಕ್ ಮತ್ತು ಲ್ಯುಬೊವ್ ಅವರ ವಿವಾಹವು ಬಾಲಿವುಡ್ ಚಲನಚಿತ್ರದ ಕಥಾವಸ್ತುಕ್ಕಿಂತ ಏನೂ ಕಡಿಮೆಯಿಲ್ಲ. ಮೊದಲ ನೋಟದಲ್ಲೇ ಪ್ರೀತಿಯಲ್ಲಿ ಸಿಲುಕಿದ ದಂಪತಿ ರಷ್ಯಾದ ಮಿಲಿಟರಿ ಉಕ್ರೇನ್‌ ದೇಶದ ಮೇಲೆ ಆಕ್ರಮಣ ಮಾಡುವ ಒಂದು ದಿನ ಮೊದಲು ಫೆಬ್ರವರಿ 23 ರಂದು ಉಕ್ರೇನ್‌ನಲ್ಲಿ ವಿವಾಹವಾದರು. ಆದರೆ ರಿಸೆಪ್ಷನ್​ ನಡೆಸಲು ಸಾಧ್ಯವಾಗಲಿಲ್ಲ, ಯಾಕೆಂದರೆ ಅಷ್ಟರಲ್ಲಾಗಲೇ ರಷ್ಯಾ ದಾಳಿ ಮಾಡಿಯಾಗಿತ್ತು. ಹೀಗಾಗಿ ಉಪಾಯವಿಲ್ಲದೆ ಗಂಟುಮೂಟೆ ಕಟ್ಟಿಕೊಂಡು ಈ ನವದಂಪತಿ ಭಾರತಕ್ಕೆ ಹೇಗೋ ಆಗಮಿಸಿದರು. ಭಾರತದ ಹೈದರಾಬಾದ್​ನಲ್ಲಿ ಫೆಬ್ರವರಿ 27 ರಂದು ಆಪ್ತ ಸ್ನೇಹಿತರು ಮತ್ತು ಕುಟುಂಬದೊಂದಿಗೆ ರಿಸೆಪ್ಶನ್‌ ಮಾಡಿಕೊಂಡರು..!

ಚಿಲ್ಕೂರು ಬಾಲಾಜಿ ದೇವಸ್ಥಾನದ ಮುಖ್ಯ ಅರ್ಚಕ ಸಿ.ಎಸ್.ರಂಗರಾಜನ್ ವಿವಾಹ ನೆರವೇರಿಸಿದರು. ಅವರ ಪ್ರಕಾರ, ಉಕ್ರೇನ್‌ನಲ್ಲಿ ಚಾಲ್ತಿಯಲ್ಲಿರುವ ಪರಿಸ್ಥಿತಿಯಿಂದಾಗಿ ರಿಸೆಪ್ಶನ್‌ ತುಂಬಾ ಖಾಸಗಿ ವಿಷಯವಾಗಿತ್ತು. ಹೀಗಾಗಿ ಅವರಿಗೆ ಬೇರೆ ಮಾರ್ಗ ಕಾಣದೆ ವರನ ಊರಾದ ಹೈದರಾಬಾದ್​ಗೆ ಆಗಮಿಸಿದ್ದಾರೆ.
ಏತನ್ಮಧ್ಯೆ, ರಂಗರಾಜನ್ ಇತರ ಅರ್ಚಕರು ಮತ್ತು ಭಕ್ತರೊಂದಿಗೆ 16 ನೇ ಶತಮಾನದ ವೆಂಕಟೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು, ಉಕ್ರೇನ್‌ನಲ್ಲಿ ಪ್ರಜಾಪ್ರಭುತ್ವ ರಾಷ್ಟ್ರದ ಮೇಲೆ ರಷ್ಯಾ ಪೂರ್ಣ ಪ್ರಮಾಣದ ದಾಳಿಯನ್ನು ಪ್ರಾರಂಭಿಸಿದ ನಂತರ ಉಂಟಾದ ಸಂಘರ್ಷವನ್ನು ಕೊನೆಗಾಣಿಸಲು ಕೋರಿದರು.
ಭಾರತವು ಉಕ್ರೇನ್‌ನಿಂದ ತನ್ನ ನಾಗರಿಕರನ್ನು ಸ್ಥಳಾಂತರಿಸುವ ಪ್ರಕ್ರಿಯೆಯಲ್ಲಿ ಸಹಾಯ ಮಾಡುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ತಂಡಗಳೊಂದಿಗೆ 24×7 ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಿದೆ. ಮೊಲ್ಡೊವಾ, ರೊಮೇನಿಯಾ, ಸ್ಲೋವಾಕಿಯಾ, ಪೋಲೆಂಡ್ ಮತ್ತು ಹಂಗೇರಿಯ ಜೊತೆಗೆ ಉಕ್ರೇನ್‌ನಿಂದ ಭಾರತೀಯರನ್ನು ವಾಪಸು ಕರೆತರಲು ಭೂ ಮಾರ್ಗವಾಗಿ ಬಳಸಲಾಗುತ್ತಿದೆ.

ಓದಿರಿ :-   ಗಾಂಜಾ ಅಮಲಿನಲ್ಲಿ ತನ್ನ ಮರ್ಮಾಂಗವನ್ನೇ ತಾನೇ ಕತ್ತರಿಸಿಕೊಂಡ..! ಧರ್ಮದ ಭಯಕ್ಕೆ ಈ ಕೃತ್ಯ...!

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ