ಕೀವ್​​ನ ಟಿವಿ ಟವರ್​ ಮೇಲೆ ರಷ್ಯಾ ಬಾಂಬ್​​ ದಾಳಿ; 5 ಮಂದಿ ಸಾವು, ಹಲವು ಚಾನಲ್​​ಗಳು ಸ್ಥಗಿತ

ಕೀವ್:‌ ಉಕ್ರೇನ್​​ನ ಕೀವ್​​ನಲ್ಲಿರುವ ಟಿವಿ ಟವರ್​ ಮೇಲೆ ರಷ್ಯಾ ಬಾಂಬ್​​ ದಾಳಿ ನಡೆಸಿದ್ದು, ಇದರಿಂದಾಗಿ ಇಡೀ ದೇಶಾದ್ಯಂತ ಟಿವಿ ಚಾನಲ್​​ಗಳ ಪ್ರಸಾರ ನಿಂತಿದೆ. ಈ ದಾಳಿಯಲ್ಲಿ ಐವರು ಮೃತಪಟ್ಟಿದ್ದಾಗಿ ವರದಿಯಾಗಿದೆ. ಹಾಗೂ ಕೆಲವು ಟಿವಿ ಚಾನೆಲ್ಗಳು ಪ್ರಸಾರಗಳೇ ಸ್ಥಗಿತಗೊಂಡಿವೆ. ಅಷ್ಟೇ ಅಲ್ಲ, 2ನೇ ಮಹಾಯುದ್ಧ ಕಾಲದಲ್ಲಿ ಸಾಮೂಹಿಕ ಹತ್ಯೆಯಾಗಿದ್ದ ಯಹೂದಿಗಳ ಸ್ಮರಣಾರ್ಥ ನಿರ್ಮಿಸಿದ್ದ ಸ್ಮಾರಕ ಕೇಂದ್ರಕ್ಕೂ ಹಾನಿಯಾಗಿದೆ. ಟೆಲಿವಿಷನ್ ಟವರ್‌ನ ಮೇಲಿನ ದಾಳಿಯು ಕೀವ್‌ನಲ್ಲಿನ ಪ್ರಮುಖ ಹತ್ಯಾಕಾಂಡದ ಸ್ಮಾರಕವನ್ನು ಸಹ ಹೊಡೆದಿದೆ ಎಂದು ಉಕ್ರೇನಿಯನ್ ಅಧಿಕಾರಿಗಳು ಮತ್ತು ಸೈಟ್‌ನ ಮಂಡಳಿ ತಿಳಿಸಿದೆ. ಸ್ಮಾರಕದ ವಕ್ತಾರರು ಬಾಬಿ ಯಾರ್ ಸೈಟ್‌ಗೆ ಹೆಚ್ಚಿನ ಹಾನಿಯು ಸಂಕೀರ್ಣದಲ್ಲಿರುವ ಯಹೂದಿ ಸ್ಮಶಾನದಲ್ಲಿನ ಕಟ್ಟಡಗಳಿಗೆ ಆಗಿದೆ ಆದರೆ ಭದ್ರತಾ ತಂಡವು ಇನ್ನೂ ಮೌಲ್ಯಮಾಪನಗಳನ್ನು ಮಾಡುತ್ತಿದೆ ಎಂದು ಹೇಳಿದರು.
ದಾಳಿಗೂ ಮೊದಲು ರಷ್ಯಾ ಎಚ್ಚರಿಕೆಯೊಂದನ್ನು ನೀಡಿತ್ತು. ಕೀವ್​​ನಲ್ಲಿರುವ ಭದ್ರತಾ ಸೇವೆಯ ಪ್ರಧಾನ ಕಚೇರಿ ಮೇಲೆ ಹೆಚ್ಚು ಪ್ರಭಾವ ಇರುವ ಶಸ್ತ್ರಗಳಿಂದ ದಾಳಿ ನಡೆಸುತ್ತೇವೆ. ಇಲ್ಲಿ ಸಮೀಪದಲ್ಲಿ ವಾಸವಾಗುತ್ತಿರುವ ಜನರು ಸ್ಥಳಾಂತರಗೊಳ್ಳುವಂತೆ ಹೇಳಿತ್ತು. ಅಷ್ಟೇ ಅಲ್ಲ, ಕೀವ್​​ನಲ್ಲಿರುವ ಇನ್​ಫಾರ್ಮೇಶನ್​ ಮತ್ತು ಸೈಕಾಲಜಿಕಲ್​ ಸೆಂಟರ್​ ಮೇಲೆ ಕೂಡ ಆಕ್ರಮಣ ಮಾಡುವುದಾಗಿ ಹೇಳಿತ್ತು.
ಉಕ್ರೇನ್​​ನ ಎರಡನೇ ದೊಡ್ಡ ನಗರವಾದ ಖಾರ್ಕೀವ್​​ನಲ್ಲಿ ರಷ್ಯಾ ನಿರಂತರವಾಗಿ ಶೆಲ್, ರಾಕೆಟ್​​ ದಾಳಿ ನಡೆಸಿದೆ. ಅದರಲ್ಲಿ ಸುಮಾರು 11 ಮಂದಿ ಮೃತಪಟ್ಟಿದ್ದಾರೆ. 35ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅಮೆರಿಕ ತಂತ್ರಜ್ಞಾನ ಸಂಸ್ಥೆ ಮ್ಯಾಕ್ಸರ್ ಟೆಕ್ನಾಲಜೀಸ್ ಸೋಮವಾರ ಉಪಗ್ರಹಚಿತ್ರಗಳನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ರಷ್ಯಾದ ಮಿಲಿಟರಿ ಪಡೆ ಕೀವ್​​ನತ್ತ ಹೋಗುತ್ತಿರುವುದು ಕಂಡುಬಂದಿತ್ತು. ಸುಮಾರು 64 ಕಿಮೀ ಉದ್ದದವರೆಗ ಈ ಮಿಲಿಟರಿ ಬೆಂಗಾವಲು ಪಡೆ ವ್ಯಾಪಿಸಿಕೊಂಡಿದ್ದನ್ನು ಉಪಗ್ರಹ ಚಿತ್ರ ತೋರಿಸಿತ್ತು.

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement