ಉಕ್ರೇನ್ -ರಷ್ಯಾ ಯುದ್ಧ: ಉಕ್ರೇನ್‌ನಲ್ಲಿ ಇನ್ನೂ ಕೆಟ್ಟದ್ದು ಸಂಭವಿಸಲಿದೆ-ಪುತಿನ್ ಜೊತೆ ಮಾತುಕತೆ ನಂತರ ಫ್ರಾನ್ಸ್‌ ಅಧ್ಯಕ್ಷರ ಹೇಳಿಕೆ

ಪ್ಯಾರಿಸ್‌: ಉಕ್ರೇನ್ ವಿರುದ್ಧ ರಷ್ಯಾದ ಯುದ್ಧ ಮುಂದುವರೆದಿದೆ. ಏತನ್ಮಧ್ಯೆ, ಇಂದು, ಗುರುವಾರ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ.
ಉಭಯ ನಾಯಕರ ನಡುವೆ ಸುಮಾರು 90 ನಿಮಿಷಗಳ ಕಾಲ ಮಾತುಕತೆ ನಡೆಯಿತು. ಇದಾದ ನಂತರ ಮ್ಯಾಕ್ರನ್, “ಪುತಿನ್ ಇಡೀ ಉಕ್ರೇನ್ ಅನ್ನು ವಶಪಡಿಸಿಕೊಳ್ಳಲು ಬಯಸುತ್ತಾರೆ. ಉಕ್ರೇನ್‌ನಲ್ಲಿ ಇನ್ನೂ”ಕೆಟ್ಟದ್ದು ಸಂಭವಿಸಲಿದೆ” ಎಂದು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ನಂಬಿದ್ದಾರೆ ಎಂದು ಅವರ ಆಪ್ತ ಸಹಾಯಕ ಹೇಳಿದ್ದಾರೆ

ಅಧ್ಯಕ್ಷ ಪುತಿನ್ ಹೇಳಿದ್ದರಲ್ಲಿ ನಮಗೆ ಧೈರ್ಯ ತುಂಬುವಂಥದ್ದೇನೂ ಇರಲಿಲ್ಲ. ಕಾರ್ಯಾಚರಣೆಯನ್ನು ಮುಂದುವರಿಸಲು ಅವರು ದೃಢವಾದ ಅಚಲತೆಯನ್ನು ತೋರಿಸಿದರು ಎಂದು ಹೇಳಿದ್ದಾರೆ ಎಂಬುದಾಗಿ ಮ್ಯಾಕ್ರನ್ ಅವರ ಆಪ್ತ ಸಹಾಯಕ ಮಾಹಿತಿ ನೀಡಿದ್ದಾರೆ.
ಪುತಿನ್ “ಇಡೀ ಉಕ್ರೇನ್‌ನ ನಿಯಂತ್ರಣವನ್ನು ವಶಪಡಿಸಿಕೊಳ್ಳಲು ಬಯಸಿದ್ದಾರೆ. ಅವರು ತಮ್ಮ ಮಾತಿನಲ್ಲಿ ಹೇಳುವುದಾದರೆ, ಉಕ್ರೇನ್ ಅನ್ನು ಕೊನೆಯವರೆಗೂ ಡಿ-ನಾಜಿಫೈ ಮಾಡಲು” ತಮ್ಮ ಕಾರ್ಯಾಚರಣೆಯನ್ನು ಮುಂದುವರಿಸುತ್ತಾರೆ ಎಂದು ಅವರು ಹೇಳಿದರು.
ನಾಗರಿಕ ಸಾವುನೋವುಗಳನ್ನು ತಪ್ಪಿಸಲು ಮತ್ತು ಮಾನವೀಯ ಪ್ರವೇಶಕ್ಕೆ ಅವಕಾಶ ನೀಡುವಂತೆ ಮ್ಯಾಕ್ರನ್ ಅವರು ಪುತಿನ್ ಅವರನ್ನು ಒತ್ತಾಯಿಸಿದರು.
ಫೆಬ್ರವರಿ 24 ರಂದು ರಷ್ಯಾ ಉಕ್ರೇನ್ ಮೇಲೆ ದಾಳಿ ಮಾಡಿತು. ಅಂದಿನಿಂದ ಇದು ಪುಟಿನ್ ಮತ್ತು ಮ್ಯಾಕ್ರನ್ ನಡುವಿನ ಎರಡನೇ ಸಂಭಾಷಣೆಯಾಗಿದೆ.
ಕೀವ್, ಖಾರ್ಕಿವ್ ಮತ್ತು ಚೆರ್ನಿಹಿವ್ ಸೇರಿದಂತೆ ಉಕ್ರೇನ್‌ನ ಅನೇಕ ನಗರಗಳ ಮೇಲೆ ರಷ್ಯಾದ ಸೈನ್ಯವು ನಿರಂತರವಾಗಿ ದಾಳಿ ಮಾಡುತ್ತಿದೆ. ಸುದ್ದಿ ಸಂಸ್ಥೆ ಎಪಿ ಪ್ರಕಾರ, ಉಕ್ರೇನ್‌ನ ಉತ್ತರ ನಗರವಾದ ಚೆರ್ನಿಹಿವ್‌ನಲ್ಲಿ ರಷ್ಯಾದ ದಾಳಿಯಲ್ಲಿ ಕನಿಷ್ಠ 22 ನಾಗರಿಕರು ಮೃತಪಟ್ಟಿದ್ದಾರೆ, ರಕ್ಷಣಾ ಕಾರ್ಯಕರ್ತರು ಅವಶೇಷಗಳಲ್ಲಿ ಇತರರನ್ನು ಹುಡುಕುತ್ತಿದ್ದಾರೆ.

ಓದಿರಿ :-   ಅಸ್ಸಾಂ: ಸಾಮೂಹಿಕ ಅತ್ಯಾಚಾರ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾಗ ಪೊಲೀಸರಿಂದ ಗುಂಡೇಟು

ರಷ್ಯಾದ ಪಡೆಗಳು ಒಂದು ಆಯಕಟ್ಟಿನ ಬಂದರನ್ನು ವಶಪಡಿಸಿಕೊಂಡವು ಮತ್ತು ಇನ್ನೊಂದನ್ನು ಮುತ್ತಿಗೆ ಹಾಕಿದವು. ಅದೇ ಸಮಯದಲ್ಲಿ, ಮಾಸ್ಕೋ ಕಪ್ಪು ಸಮುದ್ರದಿಂದ ಉಕ್ರೇನ್‌ ಅನ್ನು ಬೇರ್ಪಡಿಸಲು ಪ್ರಯತ್ನಿಸುತ್ತಿದೆ. 2, 80,000 ಜನಸಂಖ್ಯೆಯನ್ನು ಹೊಂದಿರುವ ಖೆರ್ಸನ್‌ ನಗರ ತನ್ನ ನಿಯಂತ್ರಣದಲ್ಲಿದೆ ಎಂದು ರಷ್ಯಾದ ಮಿಲಿಟರಿ ಗುರುವಾರ ಹೇಳಿದೆ, ಕಳೆದ ವಾರ ರಷ್ಯಾದ ಆಕ್ರಮಣದ ಪ್ರಾರಂಭದ ನಂತರ ಇದು ರಷ್ಯಾ ವಶಪಡಿಸಿಕೊಂಡ ಮೊದಲ ಪ್ರಮುಖ ನಗರವಾಗಿದೆ.

ಈ ದಾಳಿಗಳ ಮಧ್ಯೆ, ರಷ್ಯಾ ಮತ್ತು ಉಕ್ರೇನ್ ಪ್ರತಿನಿಧಿಗಳು ಬೆಲಾರಸ್ ಗಡಿಯಲ್ಲಿ ಮಾತುಕತೆಗಾಗಿ ಪರಸೊರ ಭೇಟಿಯಾಗಿದ್ದಾರೆ. ಈ ಸಭೆಯಲ್ಲಿ, ಉಕ್ರೇನ್ ರಷ್ಯಾದೊಂದಿಗಿನ ಯುದ್ಧವನ್ನು ತಕ್ಷಣವೇ ಕೊನೆಗೊಳಿಸಬೇಕೆಂದು ಒತ್ತಾಯಿಸಿತು. ಇದರೊಂದಿಗೆ ನಗರಗಳಲ್ಲಿ ಸಿಲುಕಿರುವ ಸಾಮಾನ್ಯ ಜನರಿಗೆ ಸ್ಥಳಾಂತರಕ್ಕೆ ದಾರಿ ಮಾಡಿಕೊಡುವ ಕುರಿತು ಮಾತನಾಡಿದರು. ಯುದ್ಧದಲ್ಲಿ ನೂರಾರು ಜನರು ಮೃತಪಟ್ಟಿದ್ದಾರೆ ಮತ್ತು ಹತ್ತು ಲಕ್ಷಕ್ಕೂ ಹೆಚ್ಚು ಜನರು ಉಕ್ರೇನ್ ಗಡಿಯನ್ನು ತೊರೆದಿದ್ದಾರೆ.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಅವರು ಕ್ರೆಮ್ಲಿನ್‌ನ “ಸೈನ್ಯೀಕರಣ”ದ ಬೇಡಿಕೆಯನ್ನು ತಕ್ಷಣವೇ ಒಪ್ಪಿಕೊಳ್ಳಬೇಕು ಮತ್ತು ನ್ಯಾಟೋಗೆ ಸೇರುವ ಪ್ರಯತ್ನವನ್ನು ಕೈಬಿಟ್ಟು ತಟಸ್ಥವೆಂದು ಘೋಷಿಸಬೇಕು ಎಂದು ಉಕ್ರೇನ್‌ಗೆ ಹೇಳಿದ್ದಾರೆ. ಪಶ್ಚಿಮ ದೇಶಗಳತ್ತ ಉಕ್ರೇನ್ ಹೊರಳುವುದು ಮಾಸ್ಕೋಗೆ ಬೆದರಿಕೆ ಎಂದು ಪುತಿನ್ ಬಹಳ ಸಮಯದಿಂದ ಹೇಳುತ್ತಿದ್ದಾರೆ.

ಓದಿರಿ :-   ಬಾಲಿವುಡ್ ನಟರಾದ ಶಾರುಖ್ ಖಾನ್‌- ಅಜಯ್ ದೇವಗನ್‌ಗೆ ತಲಾ 5 ರೂಪಾಯಿ ಮನಿ ಆರ್ಡರ್ ಕಳುಹಿಸಿದ ವಿದ್ಯಾರ್ಥಿನಿ..! ಕಾರಣವೇನೆಂದರೆ

 

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ