ಉಕ್ರೇನಿನ ಖೆರ್ಸನ್ ನಗರ ವಶಪಡಿಸಿಕೊಂಡ ರಷ್ಯಾ, ಪ್ರಮುಖನಗರಗಳ ಮೇಲೆ ದಾಳಿ ತೀವ್ರ

ಉಕ್ರೇನಿನ ಖೆರ್ಸನ್ ನಗರ ವಶಪಡಿಸಿಕೊಂಡ ರಷ್ಯಾ, ಪ್ರಮುಖನಗರಗಳ ಮೇಲೆ ದಾಳಿ ತೀವ್ರ
ಕೀವ್‌: ಉಕ್ರೇನಿಯನ್ ಅಧಿಕಾರಿಗಳು, ಗುರುವಾರ, ಮಾರ್ಚ್ 3 ರಂದು, ರಷ್ಯಾದ ಸೈನಿಕರು ದಕ್ಷಿಣದ ನಗರವಾದ ಖೆರ್ಸನ್ ಅನ್ನು ವಶಪಡಿಸಿಕೊಂಡಿದ್ದಾರೆ ಎಂಬುದನ್ನು ದೃಢಪಡಿಸಿದ್ದಾರೆ.
ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿದ 8 ನೇ ದಿನದಂದು ಖೆರ್ಸನ್ ನಗರವು ರಷ್ಯಾದ ನಿಯಂತ್ರಣಕ್ಕೆ ಒಳಗಾಯಿತು. ಈ ಮಾಹಿತಿಯನ್ನು ಸುದ್ದಿ ಸಂಸ್ಥೆ ಎಎಫ್‌ಪಿ ಟ್ವಿಟರ್‌ನಲ್ಲಿ ನೀಡಿದೆ. ಖೆರ್ಸನ್ ಕಪ್ಪು ಸಮುದ್ರದ ಮೇಲೆ ನೆಲೆಗೊಂಡಿರುವ ಪ್ರಮುಖ ಬಂದರು ನಗರವಾಗಿದೆ.
ಮಂಗಳವಾರ, ಉಕ್ರೇನಿಯನ್ ಆಂತರಿಕ ಸಚಿವಾಲಯದ ಸಲಹೆಗಾರ ವಾಡಿಮ್ ಡೆನಿಸೆಂಕೊ, ರಷ್ಯಾದ ಪಡೆಗಳು ಖೆರ್ಸನ್‌ಗೆ ಪ್ರವೇಶಿಸಿವೆ ಎಂದು ಹೇಳಿದ್ದಾರೆ. ರಷ್ಯಾದ ಅಧಿಕಾರಿಗಳು ಖೆರ್ಸನ್ ತಮ್ಮ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಘೋಷಿಸಿದ್ದಾರೆ.

ನಾಗರಿಕರ ಮೇಲೆ ಗುಂಡು ಹಾರಿಸಿದಂತೆ ಹಾಗೂ ಶವಗಳನ್ನು ತೆಗೆದುಕೊಳ್ಳಲು ಅವಕಾಶ ಕಲ್ಪಿಸುವಂತೆ ರಷ್ಯಾ ಸೇನೆಗೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಸುದ್ದಿ ಸಂಸ್ಥೆಗಳಾದ ರಾಯಿಟರ್ಸ್ ಮತ್ತು ಎಪಿ ವರದಿ ಮಾಡಿವೆ.
ಜನರ ಮೇಲೆ ಗುಂಡು ಹಾರಿಸಬೇಡಿ ಎಂದು ನಾವು ಅವರನ್ನು ಕೇಳಿದ್ದೇವೆ ಎಂದು ಮೇಯರ್ ಇಗೊರ್ ಕೊಲಿಖೇವ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ನಾವು ಯಾವುದೇ ಉಕ್ರೇನಿಯನ್ ಪಡೆಗಳನ್ನು ಹೊಂದಿಲ್ಲ, ಕೇವಲ ನಾಗರಿಕರು ಮತ್ತು ಇಲ್ಲಿ ವಾಸಿಸಲು ಬಯಸುವ ಜನರು ಮಾತ್ರವೇ ನಗರದಲ್ಲಿದ್ದೇವೆ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.

ಖೆರ್ಸನ್ 3,00,000 ಜನಸಂಖ್ಯೆಯ ನಗರವಾಗಿದ್ದು, ಕಪ್ಪು ಸಮುದ್ರ ಸೇರುವ ಡ್ನೀಪರ್ ನದಿಯ ದಡದಲ್ಲಿರುವ ಆಯಕಟ್ಟಿನ ಸ್ಥಳವಾಗಿದೆ. ರಷ್ಯಾದ ಪಡೆಗಳು ಈ ನಗರವನ್ನು ವಶಕ್ಕೆ ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ನೀರಿನ ಕಾಲುವೆ ಮೇಲಿದ್ದ ನಿರ್ಬಂಧ ತೆರೆವುಗೊಳಿಸಿ, ಕ್ರಿಮಿಯಾಕ್ಕೆ ನೀರು ಸರಬರಾಜು ಮರುಸ್ಥಾಪಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement