ಉಕ್ರೇನ್‌ನಿಂದ ಭಾರತೀಯ ವಿದ್ಯಾರ್ಥಿಗಳ ಸ್ಥಳಾಂತರಕ್ಕೆ ತನ್ನ 130 ಬಸ್‌ಗಳು ಸಿದ್ಧವಾಗಿವೆ ಎಂದ ರಷ್ಯಾ

ಮಾಸ್ಕೋ: ಯುದ್ಧ ಪೀಡಿತ ಉಕ್ರೇನ್‌ನ ಖಾರ್ಕೊವ್ ಮತ್ತು ಸುಮಿ ನಗರಗಳಿಂದ ರಷ್ಯಾದ ಬೆಲ್ಗೊರೊಡ್ ಪ್ರದೇಶಕ್ಕೆ ಭಾರತೀಯ ವಿದ್ಯಾರ್ಥಿಗಳು ಮತ್ತು ಇತರ ವಿದೇಶಿಯರನ್ನು ಸ್ಥಳಾಂತರಿಸಲು 130 ಬಸ್‌ಗಳು ಸಿದ್ಧವಾಗಿವೆ ಎಂದು ರಷ್ಯಾದ ಉನ್ನತ ಮಿಲಿಟರಿ ಜನರಲ್ ಗುರುವಾರ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಬುಧವಾರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಅವರೊಂದಿಗೆ ಮಾತನಾಡಿ ಉಕ್ರೇನ್‌ನಲ್ಲಿನ ಸಂಘರ್ಷದ ಪ್ರದೇಶಗಳಿಂದ ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಕುರಿತು ಚರ್ಚಿಸಿದ ಒಂದು ದಿನದ ನಂತರ ರಷ್ಯಾದ ರಾಷ್ಟ್ರೀಯ ರಕ್ಷಣಾ ನಿಯಂತ್ರಣ ಕೇಂದ್ರದ ಮುಖ್ಯಸ್ಥ ಕರ್ನಲ್-ಜನರಲ್ ಮಿಖಾಯಿಲ್ ಮಿಜಿಂಟ್ಸೆವ್ ಅವರಿಂದ ಈ ಹೇಳಿಕೆಗಳು ಬಂದಿವೆ.

ಸುಮಾರು 8,000 ಭಾರತೀಯರು, ಮುಖ್ಯವಾಗಿ ವಿದ್ಯಾರ್ಥಿಗಳು ಇನ್ನೂ ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಮಂಗಳವಾರ ಹೇಳಿದ್ದಾರೆ.
ಭಾರತೀಯ ವಿದ್ಯಾರ್ಥಿಗಳು ಮತ್ತು ಇತರ ವಿದೇಶಿ ನಾಗರಿಕರನ್ನು ರಕ್ಷಿಸುವ ಸಲುವಾಗಿ ಇಂದು ಬೆಳಿಗ್ಗೆ 6 ಗಂಟೆಯಿಂದ ಬೆಲ್ಗೊರೊಡ್ ಪ್ರದೇಶದ ನೆಖೋಟೆಯೆವ್ಕಾ ಮತ್ತು ಸುಡ್ಜಾ ಚೆಕ್‌ಪೋಸ್ಟ್‌ಗಳಿಂದ ಖಾರ್ಕೊವ್ ಮತ್ತು ಸುಮಿಗೆ ಒಟ್ಟು 130 ಆರಾಮದಾಯಕ ಬಸ್‌ಗಳು ಹೊರಡಲು ಸಿದ್ಧವಾಗಿವೆ ಎಂದು ರಷ್ಯಾದ ರಾಷ್ಟ್ರೀಯ ರಕ್ಷಣಾ ನಿಯಂತ್ರಣ ಕೇಂದ್ರದ ಮುಖ್ಯಸ್ಥ ಕರ್ನಲ್ -ಜನರಲ್ ಮಿಖಾಯಿಲ್ ಮಿಜಿಂಟ್ಸೆವ್ ಅವರು ಸರ್ಕಾರಿ ಸ್ವಾಮ್ಯದ ತಾಸ್‌ (TASS) ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   'ಯಾರೂ ಮೋದಿಗೆ ಮತ ಹಾಕಬೇಡಿ' ಎಂದು ತರಗತಿಯೊಳಗೆ ಹೇಳುತ್ತಿದ್ದ ಸರ್ಕಾರಿ ಶಾಲಾ ಶಿಕ್ಷಕನ ಬಂಧನ

ಚೆಕ್‌ಪೋಸ್ಟ್‌ಗಳಲ್ಲಿ ತಾತ್ಕಾಲಿಕ ವಸತಿ ಮತ್ತು ವಿಶ್ರಾಂತಿಗಾಗಿ ಸ್ಥಳಗಳನ್ನು ಸ್ಥಾಪಿಸಲಾಗಿದೆ ಎಂದು ಮಿಜಿಂಟ್ಸೆವ್ ಹೇಳಿದರು. ನಿರಾಶ್ರಿತರಿಗೆ ಬಿಸಿ ಊಟವನ್ನು ಒದಗಿಸಲಾಗುವುದು; ಔಷಧ ಸಂಗ್ರಹದೊಂದಿಗೆ ಮೊಬೈಲ್ ಕ್ಲಿನಿಕ್‌ಗಳನ್ನು ಸಹ ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು.
ರಷ್ಯಾದ ಮಿಲಿಟರಿ ವಿಮಾನಗಳು ಸೇರಿದಂತೆ ವಿಮಾನದ ಮೂಲಕ ತಮ್ಮ ತಾಯ್ನಾಡಿಗೆ ಮರಳಲು ಸ್ಥಳಾಂತರವಾಗುವವರನ್ನು ನಂತರ ಬೆಲ್ಗೊರೊಡ್ ನಗರಕ್ಕೆ ಸಾಗಿಸಲಾಗುತ್ತದೆ” ಎಂದು ಜನರಲ್ ಹೇಳಿದರು.
ಉಕ್ರೇನ್‌ನಿಂದ ಭಾರತೀಯರನ್ನು ಸ್ಥಳಾಂತರಿಸಲು ರಷ್ಯಾ, ರೊಮೇನಿಯಾ, ಪೋಲೆಂಡ್, ಹಂಗೇರಿ, ಸ್ಲೋವಾಕಿಯಾ ಮತ್ತು ಮೊಲ್ಡೊವಾ ಸೇರಿದಂತೆ ಪ್ರದೇಶದ ದೇಶಗಳೊಂದಿಗೆ ಭಾರತ ಪರಿಣಾಮಕಾರಿಯಾಗಿ ಸಮನ್ವಯ ಸಾಧಿಸುತ್ತಿದೆ ಎಂದು ಗುರುವಾರ ನವದೆಹಲಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಅವರು ಉಕ್ರೇನ್‌ನಲ್ಲಿ ವಿಶೇಷ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗ ಫೆಬ್ರವರಿ 24 ರಿಂದ ಉಕ್ರೇನಿಯನ್ ವಾಯುಪ್ರದೇಶವನ್ನು ಸ್ಥಗಿತಗೊಳಿಸಿರುವುದರಿಂದ ಉಕ್ರೇನ್‌ನ ಪಶ್ಚಿಮ ನೆರೆಯ ದೇಶಗಳಾದ ರೊಮೇನಿಯಾ, ಹಂಗೇರಿ ಮತ್ತು ಪೋಲೆಂಡ್‌ನಿಂದ ವಿಶೇಷ ವಿಮಾನಗಳ ಮೂಲಕ ಭಾರತವು ತನ್ನ ನಾಗರಿಕರನ್ನು ಸ್ಥಳಾಂತರಿಸುತ್ತಿದೆ.
ಮಂಗಳವಾರ ಖಾರ್ಕಿವ್ (ಖಾರ್ಕೊವ್) ನಲ್ಲಿ ಶೆಲ್ ದಾಳಿಯಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬ ಸಾವಿಗೀಡಾದ ನಂತರ ವಿವಿಧ ಸಂಘರ್ಷ ವಲಯಗಳಿಂದ ಭಾರತೀಯರನ್ನು ಸುರಕ್ಷಿತವಾಗಿ ರವಾನಿಸಲು ಭಾರತವು ರಷ್ಯಾವನ್ನು ಕೇಳಿಕೊಂಡಿತ್ತು. ಅದರ ಬೆನ್ನಿಗೆ ಈ ಬೆಳವಣಿಗೆಗಳು ಬಂದಿವೆ.

ಪ್ರಮುಖ ಸುದ್ದಿ :-   ವ್ಯಕ್ತಿಯೊಬ್ಬರ ಖಾತೆಗೆ ಜಮೆಯಾಯ್ತು ಬರೋಬ್ಬರಿ 9900 ಕೋಟಿ ರೂ....! ಮುಂದಾಗಿದ್ದೇನು..?

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement