ಸಹಾನುಭೂತಿಯ ಉತ್ತುಂಗ… ಸೆರೆ ಸಿಕ್ಕ ತನ್ನ ವೈರಿ ರಷ್ಯಾ ಸೈನಿಕನಿಗೆ ಬ್ರೆಡ್‌ ನೀಡಿ ಸಂತೈಸಿ, ಯೋಧನ ತಾಯಿಗೆ ವೀಡಿಯೊ ಕರೆ ಮಾಡಿದ ಉಕ್ರೇನಿನ ಮಹಾತಾಯಿ…! ಕಣ್ಣೀರು ಹಾಕಿದ ಯೋಧ..!! ವೀಕ್ಷಿಸಿ

ಕೀವ್‌ (ಉಕ್ರೇನ್‌): ಉಕ್ರೇನ್​ ಮೇಲೆ ದಾಳಿ ಮಾಡಲು ಬಂದು ಸೆರೆ ಸಿಕ್ಕು ಯುದ್ಧ ಖೈದಿಯಾದ ಹಾಗೂ ಹಸಿವಿನಿಂದ ಬಳಲಿದ್ದ ರಷ್ಯಾದ ಯೋಧನಿಗೆ ರಷ್ಯಾದಿಂದ ತೀವ್ರ ಹಾನಿಗೊಳಗಾಗಿ ಜೀವನವೇ ದುಸ್ತರವಾಗಿರುವ ಉಕ್ರೇನ್‌ ತಾಯಂದಿರುವ ಚಹಾ ಮತ್ತು ಬ್ರೆಡ್​ ನೀಡಿ ಸಂತೈಸಿ ಸಹಾನುಭೂತಿ ತೋರಿದ್ದಾರೆ. ಅಲ್ಲದೆ, ಅಳುತ್ತಿರುವ ಸೈನಿಕನ ತಾಯಿಗೆ ಕರೆ ಮಾಡಿ ನಿಮ್ಮ ಮಗ ಆರೋಗ್ಯವಾಗಿದ್ದಾನೆ ಎಂಬ ಮಾಹಿತಿ ನೀಡಿ ತಾಯಂದಿರು ಮಾನವೀಯತೆ ತೋರಿದ ವಿದ್ಯಮಾನ ಉಕ್ರೇನ್‌ನ ಯುದ್ಧ ಭೂಮಿಯಲ್ಲಿ ನಡೆದ ಬಗ್ಗೆ ವರದಿಯಾಗಿದೆ.

ಸೆರೆಹಿಡಿಯಲಾದ ರಷ್ಯಾದ ಸೈನಿಕ ಚಹಾವನ್ನು ಹೀರುವಾಗ ಕಣ್ಣೀರು ಸುರಿಸುತ್ತಿರುವುದನ್ನು ತೋರಿಸುವ ವೀಡಿಯೊವೊಂದು ಈಗ ವೈರಲ್‌ ಆಗಿದೆ.
ಪರಿಶೀಲಿಸದ ವೀಡಿಯೊವು ನಿರಾಶೆಗೊಂಡ ಸೈನಿಕನು ಶರಣಾದ ನಂತರ, ಹಲವಾರು ಜನರು ಮತ್ತು ಕಾರುಗಳಿಂದ ಸುತ್ತುವರೆದಿರುವುದನ್ನು ತೋರಿಸುತ್ತದೆ. ಸೆರೆ ಸಿಕ್ಕ ರಷ್ಯಾ ಸೈನಿಕ ತನ್ನ ತಾಯಿಯೊಂದಿಗೆ ವೀಡಿಯೊ ಕರೆಯಲ್ಲಿ ಇದ್ದಾಗ ಮಹಿಳೆ ಸೆಲ್‌ಫೋನ್ ಹಿಡಿದಿದ್ದಾರೆ ಹಾಗೂ ಆತ ಸೈನಿಕ ಚಹಾ ಹೀರುತ್ತಾ ಮತ್ತು ಬ್ರೆಡ್‌ ಅನ್ನು ತಿನ್ನುತ್ತಿದ್ದಾನೆ. ಎಲ್ಲವೂ ಸರಿಯಿದೆ, ದೇವರು ನಿಮ್ಮೊಂದಿಗಿದ್ದಾನೆ. ನಿಮ್ಮ ಮಗ ಜೀವಂತವಾಗಿದ್ದಾನೆ, ಹೆದರಬೇಡಿ ಎಂದು ಆ ಮಹಿಳೆಯರು ಸೈನಿಕನ ತಾಯಿಗೆ ಹೇಳಿ ಧೈರ್ಯ ತುಂಬಿದ್ದಾರೆ.

ತನ್ನ ದೇಶದ ಮೇಲೆಯೇ ರಷ್ಯಾದ ಯೋಧ ದಾಳಿ ಮಾಡಲು ಬಂದು ಸೆರೆ ಸಿಕ್ಕರೂ ಉಕ್ರೇನ್​ ಮಹಿಳೆ ಆತನನ್ನು ಸಂತೈಸಿ ಅಕ್ಕರೆ ತೋರಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದನ್ನು ಯುದ್ಧಕಾಲದಲ್ಲಿ ಮಾನವ ಸಹಾನುಭೂತಿಯ ದೊಡ್ಡ ವಿದ್ಯಮಾನ ಎಂದು ಬಣ್ಣಿಸಲಾಗಿದೆ
ಉಕ್ರೇನ್‌ ತಾಯಂದಿರ ಸಹಾನುಭೂತಿಯನ್ನು ರಷ್ಯಾ ಅಧ್ಯಕ್ಷ ಪುತಿನ್ ಅವರ ಕ್ರೂರತೆಗೆ ಹೋಲಿಸಿ ಎಂದು ಬಜ್‌ಫೀಡ್ ವರದಿಗಾರ ಕ್ರಿಸ್ಟೋಫರ್ ಮಿಲ್ಲರ್ ಬರೆದಿದ್ದಾರೆ. ಅವರು ವೈರಲ್ ಕ್ಲಿಪ್ ಅನ್ನು ಟ್ವಿಟರ್‌ಗೆ ಹಂಚಿಕೊಂಡಿದ್ದಾರೆ.

ಅಮೆರಿಕದ ದಿ ಸನ್‌ ವರದಿ ಪ್ರಕಾರ, ಅವರು ಯಾಕೆ ಇಲ್ಲಿದ್ದಾರೆ ಎಂದು ತಿಳಿದಿಲ್ಲ” ಎಂದು ಸೈನಿಕರು ಉಕ್ರೇನಿಯನ್ ಭಾಷೆಯಲ್ಲಿ ಹೇಳುವುದನ್ನುಕೇಳಬಹುದು. ಇದು ಅವರ ತಪ್ಪು ಅಲ್ಲ” ಎಂದು ಉಕ್ರೇನಿಯನ್ ಭಾಷೆಯಲ್ಲಿ ಸೈನಿಕನ ಸುತ್ತುವರಿದವರು ಹೇಳುತ್ತಾರೆ.
ಸೈನಿಕನು ತನ್ನ ತಾಯಿಗೆ ಮಾಡಿದ ವೀಡಿಯೊ ಕರೆಯಲ್ಲಿ ಅಳುತ್ತಾನೆ. ಅವನು ತಿನ್ನುವಾಗ ಮತ್ತು ಚಹಾ ಕುಡಿಯುವಾಗ ತನ್ನ ಸಂಯಮವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುವುದನ್ನು ಹೊರತುಪಡಿಸಿ ಏನನ್ನೂ ಹೇಳುವುದಿಲ್ಲ, ಅವನು ತಾಯಿಗೆ ಮುತ್ತು ಕೊಡುವುದರ ಮೂಲಕ ವೀಡಿಯೊ ಕೊನೆಗೊಳ್ಳುತ್ತದೆ.
ರಷ್ಯಾದ ಸೈನಿಕರು ತಾವೇ ತಮ್ಮ ವಾಹನಗಳನ್ನು ಹಾಳುಮಾಡುತ್ತಿದ್ದಾರೆ ಮತ್ತು ಶರಣಾಗುತ್ತಿದ್ದಾರೆ ಎಂಬ ವರದಿಗಳ ನಡುವೆ ಈ ಕ್ಲಿಪ್ ಹೊರಬಿದ್ದಿದೆ.
ಈ ಅದ್ಭುತ ಜನರು ಯುದ್ಧದ ಸಮಯದಲ್ಲಿ ತೀವ್ರ ಹಾನಿಗೊಳಗಾದರೂ ತಮ್ಮ ಮಾನವೀಯತೆಯನ್ನು ಕಳೆದುಕೊಂಡಿಲ್ಲ. ದೇವರು ಅವರನ್ನು ಮತ್ತು ಯುವ ಸೈನಿಕನನ್ನು ಆಶೀರ್ವದಿಸಲಿ ಎಂದು ಅನೇಕರು ಈ ವೀಡಿಯೊಕ್ಕೆ ಪ್ರತಿಕ್ರಿಯಿಸಿದ್ದಾರೆ.
ಉಕ್ರೇನ್​ನಲ್ಲಿ ಸೆರೆ ಸಿಕ್ಕ ರಷ್ಯಾದ ಸೈನಿಕರನ್ನು ಅವರ ತಾಯಂದಿರು ಕೀವ್​ಗೆ ಬಂದು ಬಿಡಿಸಿಕೊಂಡು ಹೋಗಬಹುದು ಎಂದು ಉಕ್ರೇನ್​ ಸರ್ಕಾರ ಆಫರ್​ ಮಾಡಿದೆ. ಅಲ್ಲದೇ ಈ ಪ್ರಕ್ರಿಯೆಗಾಗಿ ಇ-ಮೇಲ್​ ಮತ್ತು ಸಹಾಯವಾಣಿಗಳನ್ನು ಆರಂಭಿಸಿದೆ. ತಮ್ಮ ಮಗ ಸೆರೆಯಾದ ಬಗ್ಗೆ ಪುರಾವೆಗಳ ಸಮೇತ ಬಂದು ಮಾಹಿತಿ ನೀಡಿದಲ್ಲಿ ಅಂಥವರನ್ನು ನಿಮ್ಮೊಟ್ಟಿಗೆ ಕೊಡಲಾಗುವುದು ಎಂದು ಉಕ್ರೇನ್​ ತಿಳಿಸಿದೆ.
ನಾವು ಉಕ್ರೇನಿಯನ್ನರು, ವ್ಲಾಡಿಮಿರ್​ ಪುತಿನ್​ರ ಫ್ಯಾಸಿಸ್ಟ್​ಗಳಂತೆ ವರ್ತಿಸುವುದಿಲ್ಲ. ಮತ್ತು ಅಮಾಯಕ ಮಕ್ಕಳು ಮತ್ತು ತಾಯಿಂದಿರ ವಿರುದ್ಧ ನಾವು ಹೋರಾಟ ಮಾಡುವುದಿಲ್ಲ ಎಂದು ಅಲ್ಲಿನ ಸರ್ಕಾರ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್​ ಹಂಚಿಕೊಂಡಿದೆ.

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement