ಪಾಕಿಸ್ತಾನದ ಮಸೀದಿಯಲ್ಲಿ ಸ್ಫೋಟ: ಸಾವಿನ ಸಂಖ್ಯೆ 56 ಕ್ಕೆ ಏರಿಕೆ, 190 ಕ್ಕೂ ಹೆಚ್ಚು ಜನರಿಗೆ ಗಾಯ

ಪೇಶಾವರ: ಶುಕ್ರವಾರದ ಪ್ರಾರ್ಥನೆಯ ಸಮಯದಲ್ಲಿ ಪಾಕಿಸ್ತಾನದ ವಾಯವ್ಯ ನಗರವಾದ ಪೇಶಾವರ್‌ನಲ್ಲಿರುವ ಶಿಯಾ ಮುಸ್ಲಿಂ ಮಸೀದಿಯೊಳಗೆ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, ಸಾವಿನ ಸಂಖ್ಯೆ 56ಕ್ಕೆ ಏರಿದ್ದು, 194 ಜನರು ಗಾಯಗೊಂಡಿದ್ದಾರೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿಯ ಹೊಣೆಯನ್ನು ತಕ್ಷಣವೇ ಯಾವುದೇ ಉಗ್ರಗಾಮಿ ಸಂಘಟನೆ ಹೊತ್ತುಕೊಂಡಿಲ್ಲ. ಇಸ್ಲಾಮಿಕ್ ಸ್ಟೇಟ್ ಗುಂಪು ಮತ್ತು ಪಾಕಿಸ್ತಾನಿ ತಾಲಿಬಾನ್ ಎರಡೂ – ಅಫ್ಘಾನಿಸ್ತಾನದ ತಾಲಿಬಾನ್‌ನಿಂದ ಪ್ರತ್ಯೇಕವಾದ ಉಗ್ರಗಾಮಿ ಗುಂಪು – ಈ ಹಿಂದೆ ನೆರೆಯ ಅಫ್ಘಾನಿಸ್ತಾನದ ಗಡಿಯ ಸಮೀಪದಲ್ಲಿರುವ ಪ್ರದೇಶದಲ್ಲಿ ಇದೇ ರೀತಿಯ ದಾಳಿಗಳನ್ನು ನಡೆಸಿದೆ.

ಪೇಶಾವರದ ಹಳೆಯ ನಗರದಲ್ಲಿರುವ ಮಸೀದಿಯ ಹೊರಗೆ ಇಬ್ಬರು ಶಸ್ತ್ರಸಜ್ಜಿತ ದಾಳಿಕೋರರು ಪೊಲೀಸರ ಮೇಲೆ ಗುಂಡು ಹಾರಿಸಿದಾಗ ಹಿಂಸಾಚಾರ ಪ್ರಾರಂಭವಾಯಿತು ಎಂದು ಪೇಶಾವರ ಪೊಲೀಸ್ ಮುಖ್ಯಸ್ಥ ಮುಹಮ್ಮದ್ ಎಜಾಜ್ ಖಾನ್ ಹೇಳಿದ್ದಾರೆ. ಗುಂಡಿನ ಚಕಮಕಿಯಲ್ಲಿ ಒಬ್ಬ ದಾಳಿಕೋರ ಮತ್ತು ಒಬ್ಬ ಪೋಲೀಸರು ಮೃತಪಟ್ಟರು. ಇನ್ನೊಬ್ಬ ಪೊಲೀಸ್ ಅಧಿಕಾರಿ ಗಾಯಗೊಂಡರು. ಉಳಿದ ಮತ್ತೊಬ್ಬ ದಾಳಿಕೋರ ಮಸೀದಿಯೊಳಗೆ ಓಡಿ ಬಾಂಬ್ ಸ್ಫೋಟಿಸಿದ್ದಾನೆ ಎಂದು ಅವರು ತಿಳಿಸಿದ್ದಾರೆ.
ಪೇಶಾವರದ ಲೇಡಿ ರೀಡಿಂಗ್ ಆಸ್ಪತ್ರೆಯ ವಕ್ತಾರ ಅಸಿಮ್ ಖಾನ್ ಪ್ರಕಾರ, ಗಾಯಾಳುಗಳಲ್ಲಿ ಅನೇಕರ ಸ್ಥಿತಿ ಗಂಭೀರವಾಗಿದೆ. ಹಲವಾರು ಕೈಕಾಲುಗಳು ಕತ್ತರಿಲ್ಪಟ್ಟಿವೆ, ಕ ಇತರರು ಬಾಂಬ್‌ ಸಿಡಿತದ ಚೂರುಗಳಿಂದ ಗಾಯಗೊಂಡಿದ್ದಾರೆ.

ಶುಕ್ರವಾರದ ಪ್ರಾರ್ಥನೆಗಾಗಿ ಕುಚಾ ರಿಸಲ್ದಾರ್ ಮಸೀದಿಯಲ್ಲಿ ಭಕ್ತರು ಜಮಾಯಿಸುತ್ತಿದ್ದಾಗ ಸ್ಫೋಟ ಸಂಭವಿಸಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ವಹೀದ್ ಖಾನ್ ಹೇಳಿದ್ದಾರೆ. ಗಾಯಾಳುಗಳಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.
ಸ್ಫೋಟದ ಸಮಯದಲ್ಲಿ ಕನಿಷ್ಠ 150 ಮಂದಿ ಮಸೀದಿಯೊಳಗೆ ಇದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಶಯಾನ್ ಹೈದರ್ ಎಂಬ ಸಾಕ್ಷಿಯು ಮಸೀದಿಯನ್ನು ಪ್ರವೇಶಿಸಲು ತಯಾರಿ ನಡೆಸುತ್ತಿದ್ದಾಗ ಪ್ರಬಲ ಸ್ಫೋಟದಿಂದ ಆತ ಬೀದಿಗೆ ಹಾರಿ ಬಿದ್ದಿದ್ದಾನೆ.

ನಾನು ನನ್ನ ಕಣ್ಣುಗಳನ್ನು ತೆರೆದಾಗ ಎಲ್ಲೆಡೆ ಧೂಳು ಮತ್ತು ದೇಹಗಳು ಇದ್ದವು” ಎಂದು ಅವರು ಹೇಳಿದ್ದಾರೆ.
ಲೇಡಿ ರೀಡಿಂಗ್ ಹಾಸ್ಪಿಟಲ್ ಎಮರ್ಜೆನ್ಸಿ ವಿಭಾಗದಲ್ಲಿ ಅನೇಕ ಗಾಯಾಳುಗಳನ್ನು ಆಪರೇಷನ್ ಥಿಯೇಟರ್‌ಗಳಿಗೆ ಸ್ಥಳಾಂತರಿಸಲು ವೈದ್ಯರು ಹರಸಾಹಸ ಪಡುತ್ತಿದ್ದರಿಂದ ಅವ್ಯವಸ್ಥೆ ಉಂಟಾಯಿತು. ನೂರಾರು ಸಂಬಂಧಿಕರು ತುರ್ತು ಚಿಕಿತ್ಸಾ ವಿಭಾಗದ ಹೊರಗೆ ಜಮಾಯಿಸಿದ್ದರು, ಅವರಲ್ಲಿ ಹಲವರು ಅಳುತ್ತಿದ್ದರು ಮತ್ತು ಎದೆ ಎದೆ ಬಡಿದುಕೊಳ್ಳುತ್ತಿದ್ದರು.
ಕುಚಾ ರಿಸಾಲ್ದಾರ್ ಮಸೀದಿಯು ಈ ಪ್ರದೇಶದಲ್ಲಿ ಅತ್ಯಂತ ಹಳೆಯದಾಗಿದೆ, ಇದು 1947 ರಲ್ಲಿ ಭಾರತ ಉಪಖಂಡದ ಮುಸ್ಲಿಮರಿಗೆ ಪ್ರತ್ಯೇಕ ತಾಯ್ನಾಡಾಗಿ ಪಾಕಿಸ್ತಾನವನ್ನು ರಚಿಸುವ ಮೊದಲೇ ಇದು ಇತ್ತು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement