ಯುರೋಪ್‌ನ ಅತಿದೊಡ್ಡ ಪರಮಾಣು ಸ್ಥಾವರದ ಮೇಲೆ ರಷ್ಯಾ ದಾಳಿ, ಬೆಂಕಿ ಕಾಣಿಸಿಕೊಂಡ ವೀಡಿಯೊ ಹಂಚಿಕೊಂಡ ಉಕ್ರೇನ್ ಅಧ್ಯಕ್ಷ, ವಿಶ್ವಸಂಸ್ಥೆ ತುರ್ತು ಸಭೆ

ನವದೆಹಲಿ: ರಷ್ಯಾವು ಉಕ್ರೇನ್‌ ವಿರುದ್ಧ ತನ್ನ ಹೋರಾಟವನ್ನು ತೀವ್ರಗೊಳಿಸಿದೆ. ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಉಕ್ರೇನ್‌ನ ಪ್ರಮುಖ ಪರಮಾಣು ಸ್ಥಾವರದಲ್ಲಿ ಶುಕ್ರವಾರ ಬೆಂಕಿ ಕಾಣಿಸಿಕೊಂಡಿದೆ. ಯೂಕ್ರೇನ್​ನಲ್ಲಿರುವ ಯುರೋಪ್​ನ ಅತಿ ದೊಡ್ಡ ಪರಮಾಣು ವಿದ್ಯುತ್ ಸ್ಥಾವರ ಝಪೊರಿಝಿಯಾ ಮೇಲೆ ಶೆಲ್​ ದಾಳಿ ನಡೆಸಿರುವುದಾಗಿ ಹತ್ತಿರದ ಪಟ್ಟಣದ ಮೇಯರ್ ತಿಳಿಸಿದ್ದಾರೆ.

ಅಣುಸ್ಥಾವರದ ಮೇಲೆ ರಷ್ಯಾ ದಾಳಿ ಮಾಡಿದ ಬೆನ್ನಲ್ಲೇ ಬ್ರಿಟನ್‌​ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ತುರ್ತು ಸಭೆ ಕರೆದಿದೆ. ರಷ್ಯಾವು ಪರಮಾಣು ಸ್ಥಾವರಗಳನ್ನು ಗುರಿಯಾಗಿಸಿ ದಾಳಿ ಮಾಡಿದ್ದಕ್ಕೆ ಆತಂಕ ವ್ಯಕ್ತಪಡಿಸಿರುವ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಈಗ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತುರ್ತು ಸಭೆ ಕರೆದಿದ್ದಾರೆ.
“ರಷ್ಯಾ ಹೊರತುಪಡಿಸಿ ಬೇರೆ ಯಾವುದೇ ದೇಶವು ಪರಮಾಣು ಶಕ್ತಿ ಘಟಕಗಳ ಮೇಲೆ ದಾಳಿ ನಡೆಸಿಲ್ಲ ಎಂದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಮಾಸ್ಕೋ “ಪರಮಾಣು ಭಯೋತ್ಪಾದನೆಗೆ ಮುಂದಾಗಿದೆ ಹಾಗೂ ಚೆರ್ನೋಬಿಲ್ ದುರಂತವನ್ನು “ಪುನರಾವರ್ತಿಸಲು” ಬಯಸುತ್ತಿದೆ ಎಂದು ಆರೋಪಿಸಿದ್ದಾರೆ.

ರಷ್ಯಾದ ಕ್ಷಿಪಣಿಗಳ ದಾಳಿಯ ನಂತರ ಸ್ಥಾವರದ ಬಳಿ ಬೆಂಕಿ ಕಾಣಿಸಿಕೊಂಡಿದೆ. ಆದರೂ ಸ್ಥಾವರದ ಅಗತ್ಯ ಉಪಕರಣಗಳಿಗೆ ಹಾನಿಯಾಗಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.ಉಕ್ರೇನ್‌ನ ಪರಮಾಣು ವಿದ್ಯುತ್ ಸ್ಥಾವರದ ಮೇಲೆ‌ ರಷ್ಯಾ ದಾಳಿ ಮಾಡಿದ ಬೆನ್ನಲ್ಲೇ ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯೊಂದಿಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮಾತುಕತೆ ನಡೆಸಿದ್ದಾರೆ.

ಯುರೋಪ್‌ನಲ್ಲಿ ಅತಿ ದೊಡ್ಡದಾದ ಜಪೋರಿಜ್ಜ್ಯಾ ಪರಮಾಣು ವಿದ್ಯುತ್ ಸ್ಥಾವರದ ಮೇಲಿನ ದಾಳಿಯು ಹಾನಿಗೊಳಗಾದ ವಿದ್ಯುತ್ ಕೇಂದ್ರದಿಂದ ವಿಕಿರಣ ಸೋರಿಕೆಯಾಗಬಹುದೆಂಬ ಆತಂಕಕ್ಕೆ ಕಾರಣವಾಗಿದೆ.
ರಷ್ಯಾ ಹೊರತುಪಡಿಸಿ ಬೇರೆ ಯಾವುದೇ ದೇಶವು ಪರಮಾಣು ಶಕ್ತಿ ಘಟಕಗಳ ಮೇಲೆ ಗುಂಡು ಹಾರಿಸಿಲ್ಲ. ಇದು ನಮ್ಮ ಇತಿಹಾಸದಲ್ಲಿ ಮೊದಲ ಬಾರಿಗೆ ನಡೆದಿದೆ. ಭಯೋತ್ಪಾದಕ ರಾಷ್ಟ್ರವು ಈಗ ಪರಮಾಣು ಭಯೋತ್ಪಾದನೆಯನ್ನು ಆಶ್ರಯಿಸಿದೆ” ಎಂದು ಝೆಲೆನ್ಸ್ಕಿ ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷ ಜೋ ಬಿಡೆನ್ “ಈ ಪ್ರದೇಶದಲ್ಲಿ ತನ್ನ ಮಿಲಿಟರಿ ಚಟುವಟಿಕೆಗಳನ್ನು ನಿಲ್ಲಿಸಲು ಮತ್ತು ಅಗ್ನಿಶಾಮಕ ಮತ್ತು ತುರ್ತು ಪ್ರತಿಸ್ಪಂದಕರಿಗೆ ಪರಮಾಣು ಸೈಟು ಪ್ರವೇಶಿಸಬೇಕು ಎಂದು ರಷ್ಯಾವನ್ನು ಒತ್ತಾಯಿಸಿದ್ದಾರೆ” ಎಂದು ಶ್ವೇತಭವನವು ಹೇಳಿಕೆಯಲ್ಲಿ ತಿಳಿಸಿದೆ.

ಪ್ರಮುಖ ಸುದ್ದಿ :-   ಮಣಿಪುರ : ಮತಗಟ್ಟೆ ಮೇಲೆ ಗುಂಡಿನ ದಾಳಿ; ದಿಕ್ಕಾ ಪಾಲಾಗಿ ಓಡಿದ ಮತದಾರರು

ಅಣು ಸ್ಥಾವರದ ಮೇಲೆ ದಾಳಿಯಾಗಿದ್ದರೂ ಸ್ಥಳದಲ್ಲಿ ವಿಕಿರಣ ಭದ್ರತೆಯನ್ನು ಖಾತರಿಪಡಿಸಲಾಗಿದೆ ಎಂದು ಅಣು ಸ್ಥಾವರದ ನಿರ್ದೇಶಕ ಯೂಕ್ರೇನ್​ 24 ಮಾಧ್ಯಮಕ್ಕೆ ತಿಳಿಸಿದ್ದಾರೆ.

ಏತನ್ಮಧ್ಯೆ, ಉಕ್ರೇನಿಯನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಅವರು ದಾಳಿಯನ್ನು ನಿಲ್ಲಿಸುವಂತೆ ರಷ್ಯಾದ ಪಡೆಗಳಿಗೆ ಕರೆ ನೀಡಿದ್ದಾರೆ. ಅದು ಸ್ಫೋಟಿಸಿದರೆ, ಅದು ಚೋರ್ನೋಬಿಲ್‌ಗಿಂತ 10 ಪಟ್ಟು ದೊಡ್ಡದಾಗಿರುತ್ತದೆ! ರಷ್ಯನ್ನರು ತಕ್ಷಣವೇ ಬೆಂಕಿಯನ್ನು ನಿಲ್ಲಿಸಬೇಕು, ಅಗ್ನಿಶಾಮಕ ದಳಗಳಿಗೆ ಅನುಮತಿಸಬೇಕು, ಭದ್ರತಾ ವಲಯವನ್ನು ಸ್ಥಾಪಿಸಬೇಕು” ಎಂದು ಕುಲೆಬಾ ಟ್ವೀಟ್ ಮಾಡಿದ್ದಾರೆ.
ಆಗ್ನೇಯ ಉಕ್ರೇನ್‌ನ ಕೈಗಾರಿಕಾ ನಗರವಾದ ಜಪೋರಿಝಿಯಾದಲ್ಲಿನ ಪರಮಾಣು ಸ್ಥಾವರವು ದೇಶದ ಪರಮಾಣು ಶಕ್ತಿಯ ಅಂದಾಜು 40%ರಷ್ಟನ್ನು ಪೂರೈಸುತ್ತದೆ.

ಪೂರ್ವದಲ್ಲಿ ಮಾಸ್ಕೋ ಬೆಂಬಲಿತ ಪ್ರತ್ಯೇಕತಾವಾದಿಗಳನ್ನು ಬೆಂಬಲಿಸಲು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಆಕ್ರಮಣವನ್ನು ಘೋಷಿಸಿದ ಒಂದು ವಾರದ ನಂತರ ಉಕ್ರೇನ್ ತನ್ನ ಅಸ್ತಿತ್ವಕ್ಕಾಗಿ ಹೋರಾಡುತ್ತಿದೆ.
ರಷ್ಯಾದ ಪಡೆಗಳು ದಕ್ಷಿಣ ಉಕ್ರೇನ್‌ನ ಕಪ್ಪು ಸಮುದ್ರದ ಖರ್ಸನ್ ಬಂದರನ್ನು ವಶಪಡಿಸಿಕೊಂಡವು. ನೀರು ಅಥವಾ ವಿದ್ಯುತ್ ಇಲ್ಲದೆ ಇರುವ ಆಯಕಟ್ಟಿನ ಬಂದರು ನಗರವಾದ ಮರಿಯುಪೋಲ್ ಅನ್ನು ರಷ್ಯಾ ಪಡೆಗಳು ಈಗ ಸುತ್ತುವರೆದಿವೆ.

ಪ್ರಮುಖ ಸುದ್ದಿ :-   ಕಾರು ಅಡ್ಡ ಹಾಕಿ ನಟಿ ಹರ್ಷಿಕಾ ಪೂಣಚ್ಚ ದಂಪತಿಗೆ ಕಿರುಕುಳ : "ನಾವು ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನದಲ್ಲಿದ್ದೇವೆಯೇ ಎಂದು ನಟಿ ಪ್ರಶ್ನೆ

ಉಕ್ರೇನ್‌ ಮೇಲಿನ ದಾಳಿಯ ಬಗ್ಗೆ ಇಂದು ಪ್ರತಿಕ್ರಿಯೆ ನೀಡಿರುವ ವ್ಲಾದಿಮಿರ್​ ಪುತಿನ್​, ಯೂಕ್ರೇನ್​ ಮೇಲಿನ ದಾಳಿ ಅಂದುಕೊಂಡಂತೆ ಸಾಗುತ್ತಿದೆ. ರಷ್ಯಾವು ‘ನವ-ನಾಜಿಗಳನ್ನು’ ಬೇರುಸಹಿತ ಕಿತ್ತೊಗೆಯುತ್ತಿದೆ ಎಂದಿರುವ ಪುತಿನ್, ರಷ್ಯಾನ್ನರು ಮತ್ತು ಉಕ್ರೇನಿಯನ್ನರು ಒಂದೇ ಎಂಬ ತನ್ನ ನಂಬಿಕೆಯನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ ಎಂದು ಹೇಳಿದ್ದಾರೆ.
ಕಳೆದ ಗುರುವಾರ ರಷ್ಯಾ ಮಿಲಿಟರಿ ದಾಳಿಯನ್ನು ಪ್ರಾರಂಭಿಸಿದ ನಂತರ, ಒಂದು ಮಿಲಿಯನ್ ನಿರಾಶ್ರಿತರು ಉಕ್ರೇನ್‌ನಿಂದ ಪಲಾಯನ ಮಾಡಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement