ಲೆಗ್ ಸ್ಪಿನ್ ಮಾಂತ್ರಿಕ ಶಕ್ತಿಯನ್ನು ಪುನರುಜ್ಜೀವನಗೊಳಿಸಿದ ಕ್ರಿಕೆಟ್‌ ದಂತಕಥೆ ಶೇನ್ ವಾರ್ನ್

ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಶೇನ್ ವಾರ್ನ್, ನಿಸ್ಸಂದೇಹವಾಗಿ ಕ್ರಿಕೆಟ್‌ನಲ್ಲಿ ಸ್ಪಿನ್ ಬೌಲಿಂಗ್ ಅನ್ನು ಮರು ವ್ಯಾಖ್ಯಾನಿಸಿದ ಸಾರ್ವಕಾಲಿಕ ಶ್ರೇಷ್ಠರಲ್ಲಿ ಒಬ್ಬರು. 52 ವರ್ಷ ವಯಸ್ಸಿನ ಶೇನ್‌ ವಾರ್ನ್‌ ಥಾಯ್ಲೆಂಡ್‌ನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಅವರ ನಿರ್ವಣೆಯ ಕಂಪನಿ ಹೇಳಿಕೆ ನಂತರ ವಿಶ್ವ ಕ್ರಿಕೆಟ್‌ ಅವರ ಹಠಾತ್‌ ನಿಧನದಿಂದ ದಿಗ್ಭ್ರಮೆಗೆ ಒಳಗಾಗಿದೆ. ಇಡೀ ಕ್ರಿಕೆಟ್ ವಲಯವು ಶೋಕದಲ್ಲಿದೆ ಮತ್ತು ಅಭಿಮಾನಿಗಳು ಆಘಾತಕ್ಕೊಳಗಾಗಿದ್ದಾರೆ.
ಅವರು ಈ ಆಟವನ್ನು ಆಡಿದ ಅತ್ಯಂತ ಅಬ್ಬರದ ಕ್ರಿಕೆಟಿಗರಲ್ಲಿ ಒಬ್ಬರು. ಶೇನ್ ಕೀತ್ ವಾರ್ನ್ ಫೆಬ್ರವರಿ 1992 ರಲ್ಲಿ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಭಾರತದ ವಿರುದ್ಧ ಅಂತರಾಷ್ಟ್ರೀಯ ಪಂದ್ಯಕ್ಕೆ ಪದಾರ್ಪಣೆ ಮಾಡಿದ ನಂತರ ತಮ್ಮ ಅದ್ಭುತ ಸ್ಪಿನ್ ಮೂಲಕ ಕ್ರಿಕೆಟ್ ಜಗತ್ತನ್ನು ಮಂತ್ರಮುಗ್ಧಗೊಳಿಸಿದರು.
ತನ್ನ ಉದ್ದನೆಯ ಹೊಂಬಣ್ಣದ ಕೂದಲು ಮತ್ತು ಬಹುತೇಕ ಕಾವ್ಯಾತ್ಮಕ ಕ್ರಿಯೆಯೊಂದಿಗೆ, ವಾರ್ನ್ ನೂರಾರು ಬ್ಯಾಟರ್‌ಗಳನ್ನು ತನ್ನ ಸ್ಪಿನ್‌ಗೆ ನೃತ್ಯ ಮಾಡುವಂತೆ ಮಾಡಿದರು ಮತ್ತು ಇದಕ್ಕೆ ಅವರು ಜೂನ್ 4, 1993 ರಂದು ಇಂಗ್ಲೆಂಡ್ ಬ್ಯಾಟರ್ ಮೈಕ್ ಗ್ಯಾಟಿಂಗ್‌ಗೆ ಬೌಲ್ ಮಾಡಿದ ಶತಮಾನದ ಬಾಲ್‌ಗಿಂತ ಬೇರೆ ಉದಾಹರಣೆ ಬೇಕಿಲ್ಲ. ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ಮೊದಲ ಆಶಸ್ ಟೆಸ್ಟ್‌ನ ಎರಡನೇ ದಿನದಂದು ವಾರ್ನ್‌ ತಮ್ಮ ಸ್ಪಿನ್‌ನ ಮಾಂತ್ರಿಕ ಶಕ್ತಿಯನ್ನು ತೋರಿಸಿದ್ದರು.

ವಾರ್ನ್ ಕೆಂಪು ಚೆಂಡನ್ನು ಲೆಗ್ ಸ್ಟಂಪ್‌ನ ಹೊರಗೆ ಉತ್ತಮವಾಗಿ ಡ್ರಿಫ್ಟ್ ಮಾಡಿದ ನಂತರ ಚೆಂಡು ಆಫ್ ಸ್ಟಂಪ್‌ನ ಮೇಲ್ಭಾಗವನ್ನು ಬಡಿದಿತ್ತು. ಇದು ಬ್ಯಾಟ್ಸ್‌ಮನ್‌ ಗ್ಯಾಟಿಂಗ್‌ ಅಲ್ಲದೆ, ಇಡೀ ಇಂಗ್ಲಂಡ್‌ ತಂಡವನ್ನೇ ದಿಗ್ಭ್ರಮೆಗೊಳಿಸಿತು. ಅಷ್ಟೇ ಅಲ್ಲ, ಕ್ಷೇತ್ರ ರಕ್ಷಣೆ ಮಾಡುತ್ತಿದ್ದ ಆಸ್ಟ್ರೇಲಿಯಾ ಆಟಗಾರರನ್ನೂ ಕೂಡ ದಿಗ್ಭ್ರಮೆಗೊಳಿಸಿತು. ಆಗ ಇದು ತನ್ನ ಖದರ್‌ ಕಳೆದುಕೊಂಡಿದ್ದ ಲೆಗ್-ಸ್ಪಿನ್‌ನ ಪುನರ್ಜನ್ಮದ ಸಂಕೇತವಾಗಿ ಕಂಡಿತು. ಇದು ಏಕದಿನ ಕ್ರಿಕೆಟ್ಟಿನಿಂದಾಗಿ ಲೆಗ್‌ಸ್ಪಿನ್‌ ನಿಧಾನವಾಗಿ ಸಾಯುತ್ತಿದೆ.
ವಾರ್ನ್‌ನ ಸ್ಪಿನ್‌ ಮೋಡಿ ಗ್ಯಾಟಿಂಗ್‌ನ ವಿಕೆಟ್‌ನ ನಂತರ ಬೆಳೆಯಲು ಪ್ರಾರಂಭಿಸಿತು ಏಕೆಂದರೆ ವಾರ್ನ್‌ ತನ್ನ ಹಿಂದಿನ 11 ಟೆಸ್ಟ್‌ಗಳಲ್ಲಿ ಅ ಪ್ರತಿ ವಿಕೆಟ್‌ಗೆ ಸರಾಸರಿ 30.80 ರನ್‌ಗಳ ಸರಾಸರಿಯಲ್ಲಿ ಕೇವಲ 31 ವಿಕೆಟ್‌ಗಳನ್ನು ಮಾತ್ರ ಪಡೆದಿದ್ದರು.
ಫೆಬ್ರವರಿ 1992 ರಲ್ಲಿ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಭಾರತದ ವಿರುದ್ಧ ಮೈದಾನಕ್ಕಿಳಿದಾಗ ವಾರ್ನ್‌ರ ಚೊಚ್ಚಲ ಪಂದ್ಯವು ವಿಭಿನ್ನವಾಗಿತ್ತು. ಸ್ಪಿನ್ನರ್‌ಗಳ ಮೇಲೆ ಪ್ರಾಬಲ್ಯ ಸಾಧಿಸುವಲ್ಲಿ ಭಾರತೀಯ ಬ್ಯಾಟರ್‌ಗಳು ಎಂದಿಗೂ ಯಾವುದೇ ಸಮಸ್ಯೆಯನ್ನು ಎದುರಿಸಲಿಲ್ಲ ಮತ್ತು ವಾರ್ನ್ ಅವರ ಭವಿಷ್ಯವು ಭಿನ್ನವಾಗಿರಲಿಲ್ಲ.ಆಗ ಕೇವಲ 19 ವರ್ಷದವರಾಗಿದ್ದ ವಾರ್ನ್‌ ರವಿಶಾಸ್ತ್ರಿ ಮತ್ತು ಸಚಿನ್ ತೆಂಡೂಲ್ಕರ್ ಅವರ 196 ರನ್‌ಗಳ ಜೊತೆಯಾಟವನ್ನು ಬೇರ್ಪಡಿಸಿದರು. ಶಾಸ್ತ್ರಿ ಅವರು ವಾರ್ನ್ ಅವರ ಮೊದಲ ಟೆಸ್ಟ್ ವಿಕೆಟ್ ಆದರು. ಆದರೆ ಅವರು ಅಷ್ಟರಲ್ಲಾಗಲೇ 206 ರನ್ ಗಳಿಸಿದ್ದರು. ತೆಂಡೂಲ್ಕರ್ ಸಹ ಔಟಾಗದೆ 148 ರನ್ ಗಳಿಸಿದ್ದರಿಂದ ಆಸ್ಟ್ರೇಲಿಯನ್ ಲೆಗ್ಗಿ ಈ ಪಂದ್ಯದಲ್ಲಿ ಸಂಭ್ರಮಿಸಲು ಸಾಧ್ಯವಾಗಲಿಲ್ಲ ಮತ್ತು ಇತರ ಭಾರತೀಯರು ಕೂಡ ವಾರ್ನ್‌ ವಿರುದ್ಧ ಯಾವುದೇ ತೊಂದರೆ ಎದುರಿಸಲಿಲ್ಲ. 150 ರನ್‌ಗಳಿಗೆ ಒಂದು ವಿಕೆಟ್‌ ಪಡೆದ ಪಂದ್ಯದ ಅಂಕಿಅಂಶಗಳು ಅವನ ಪ್ರತಿಭೆಯ ಬಗ್ಗೆ ಸಂಕೇತವನ್ನು ನೀಡಲಿಲ್ಲ. ಆದರೆ ಆಗಲೇ ಅವರ ಚೆಂಡು ಸ್ಪಿನ್‌ ಆಗುತ್ತಿತ್ತು. ಆದರೆ ಅದಕ್ಕೆ ಗತಿ ಬೇಕಿತ್ತು.
ನಂತರ 1992 ರಲ್ಲಿ, ಶ್ರೀಲಂಕಾ ವಿರುದ್ಧ ಅವರು ತಮ್ಮ ಸ್ಪಿನ್‌ಗೆ ಗತಿ ಕಂಡುಕೊಂಡರು. ಕೊಲಂಬೊದಲ್ಲಿ ಆಸ್ಟ್ರೇಲಿಯಾ ಶ್ರೀಲಂಕಾವನ್ನು ಸೋಲಿಸಿದಾಗ ಅವರು ರನ್ ಬಿಟ್ಟುಕೊಡದೆ ಮೂರು ವಿಕೆಟ್ಟುಗಳನ್ನು ಕಬಳಿಸಿದ್ದರು. ಇದು ಅವರು ಮುಂದೆ ಏನಾಗಬಹುದು ಎಂಬುದರ ಕುರಿತು ಸಾಕಷ್ಟು ಸೂಚನೆಗಳನ್ನು ನೀಡಿತು..
ಅದರ ನಂತರ 1992-93ರ ಸರಣಿಯಲ್ಲಿ ಮೆಲ್ಬೋರ್ನ್ ಟೆಸ್ಟ್‌ನಲ್ಲಿ ಇನ್ನೂ ಬಲಿಷ್ಠ ವೆಸ್ಟ್ ಇಂಡೀಸ್ ವಿರುದ್ಧ ಏಳು ವಿಕೆಟ್ ಪಡೆದರು. ಕೆಲವು ತಿಂಗಳುಗಳ ನಂತರ ಇಂಗ್ಲೆಂಡಿನ ಆಟಗಾರ ಮೈಕ್‌ ಗ್ಯಾಟಿಂಗ್‌ ವಿರುದ್ಧ ಬಾಲ್ ಆಫ್ ದಿ ಸೆಂಚುರಿ ಬಂದಿತ್ತು ಮತ್ತು ಅಲ್ಲಿಯೇ ಕ್ರಿಕೆಟ್‌ ಸ್ಪಿನ್‌ ದಂತಕತೆಯ ಉದಯವಾಯಿತು.

ಅವರ ಮನಸ್ಸಿಗೆ ಮುದ ನೀಡುವ ಲೆಗ್ ಬ್ರೇಕ್‌ಗಳ ಜೊತೆಗೆ, ವಾರ್ನ್ ಅವರ ಶಸ್ತ್ರಾಸ್ತ್ರಗಳಲ್ಲಿ ಫ್ಲಿಪ್ಪರ್‌ಗಳು, ಝೂಟರ್‌ಗಳು, ಸ್ಲೈಡರ್‌ಗಳು ಮತ್ತು ಬ್ಯಾಕ್-ಸ್ಪಿನ್ನಗಳನ್ನು ಸಹ ಹೊಂದಿದ್ದರು. ಆದರೆ ಅವನ ದೊಡ್ಡ ಅಸ್ತ್ರವು ಬ್ಯಾಟರ್‌ ಮನಸ್ಸಿನ ಮೇಲೆ ಮುಂದೆ ಯಾವ ಎಸೆತ ಬರಬಹುದು ಎಂಬುದು ಗೊಂದಲಕ್ಕೀಡಾಗುವುದೇ ಆಗಿತ್ತು.
700 ಟೆಸ್ಟ್ ವಿಕೆಟ್‌ಗಳನ್ನು ತಲುಪಿದ ಮೊದಲ ಕ್ರಿಕೆಟಿಗ ಎಂಬ ಕೀರ್ತಿಗೆ ಪಾತ್ರವಾಗಿದ್ದು ಶೇನ್‌ ವಾರ್ನ್‌, ತನ್ನ ರೆಡ್-ಬಾಲ್ ವೃತ್ತಿಜೀವನವನ್ನು 125 ಪಂದ್ಯಗಳಲ್ಲಿ 708 ವಿಕೆಟ್‌ಗಳೊಂದಿಗೆ ಕೊನೆಗೊಳಿಸಿದರು, ಶ್ರೀಲಂಕಾದ ಇನ್ನೊಬ್ಬ ಸ್ಪಿನ್ ದಂತಕಥೆ ಮುತ್ತಯ್ಯ ಮುರಳೀಧರನ್ (800) ಅವರ ನಂತರ ಎರಡನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯ-ಶ್ರೀಲಂಕಾ ಟೆಸ್ಟ್ ಸರಣಿಯನ್ನು ವಾರ್ನ್-ಮುರಳೀಧರನ್ ಟ್ರೋಫಿಗಾಗಿ ಆಡಲಾಗುತ್ತದೆ, ಇದು ಸ್ಪಿನ್ ಜೋಡಿ ಆಟದ ಮೇಲೆ ಬೀರಿದ ಪ್ರಭಾವಕ್ಕೆ ಉದಾಹರಣೆಯಾಗಿದೆ.

ಅವರು ಬ್ಯಾಟ್‌ನಲ್ಲೂ ಕಳಪೆ ಆಗಿರಲಿಲ್ಲ, 3154 ರನ್‌ಗಳನ್ನು ಹೊಡೆದಿದ್ದಾರೆ. ವಿಶ್ವ ಕ್ರಿಕೆಟ್‌ನ ಬೈಬಲ್ ವಿಸ್ಡನ್‌ನ 20 ನೇ ಶತಮಾನದ ಐದು ಕ್ರಿಕೆಟಿಗರಾಗಿ ಡೊನಾಲ್ಡ್ ಬ್ರಾಡ್‌ಮನ್, ಗಾರ್ಫೀಲ್ಡ್ ಸೋಬರ್ಸ್, ಜ್ಯಾಕ್ ಹಾಬ್ಸ್ ಮತ್ತು ವಿವಿಯನ್ ರಿಚರ್ಡ್ಸ್ ಅವರ ಸುಪ್ರಸಿದ್ಧ ಪಟ್ಟಿಗೆ ವಾರ್ನ್ ಸೇರಿಕೊಂಡರು.
ಸೀಮಿತ ಓವರ್‌ಗಳು ಸಹ ಅವರ ಅಗಾಧ ಕೌಶಲ್ಯಗಳಿಗೆ ಸಾಕ್ಷಿಯಾಗಿದ್ದವು ಮತ್ತು ವಾರ್ನ್ 1999 ರ ಏಕದಿನದ ವಿಶ್ವಕಪ್ ಜಂಟಿ-ಟಾಪ್ ವಿಕೆಟ್-ಟೇಕರ್ ಜೊತೆಗೆ 20ರೊಳಗೆ ನ್ಯೂಜಿಲೆಂಡ್‌ನ ಜಿಯೋಫ್ ಅಲಾಟ್ ಅವರೊಂದಿಗೆ ವೃತ್ತಿ ಜೀವನ ಮುಗಿಸಿದರು. ಪಾಕಿಸ್ತಾನದ ವಿರುದ್ಧದ ಫೈನಲ್‌ನಲ್ಲಿ 33 ರನ್‌ಗಳಿಗೆ ಅವರ ನಾಲ್ಕು ವಿಕೆಟ್‌ಗಳು ಆಸ್ಟ್ರೇಲಿಯಾ ತಮ್ಮ ಎರಡನೇ ವಿಶ್ವಕಪ್ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದವು ಮತ್ತು ಅವರನ್ನು ಪಂದ್ಯಶ್ರೇಷ್ಠ ಎಂದು ಹೆಸರಿಸಲಾಯಿತು.
ವಾರ್ನ್‌ನ ಫೇವರಿಟ್‌ ಬೌಲರ್‌ ಆಸ್ಟ್ರೇಲಿಯನ್ ಸ್ಪೀಡ್‌ಸ್ಟರ್ ಡೆನ್ನಿಸ್ ಲಿಲ್ಲಿ ಆಗಿದ್ದರು ಮತ್ತು ಅವರು ನ್ಯೂಜಿಲೆಂಡ್ ವಿರುದ್ಧ 1999-2000 ಋತುವಿನಲ್ಲಿ ತಮ್ಮ ಫೇವರಿಟ್‌ ಆಟಗಾರನ 355 ಟೆಸ್ಟ್ ವಿಕೆಟ್‌ಗಳನ್ನು ಮೀರಿಸಿದರು. ಅವರು ಏಕದಿನದ ಪಂದ್ಯದಲ್ಲಿ 293 ವಿಕೆಟ್ ಪಡೆದರು ಮತ್ತು 1,018 ರನ್ ಗಳಿಸಿದ್ದಾರೆ.
“ಗೋ ವಾರ್ನಿ” ಎಂಬುದು ಆಟದಲ್ಲಿ ಇತರ ಆಟಗಾರರ ಕೂಗಾಗಿತ್ತು. ವಾರ್ನ್‌ ತನ್ನ ಸಣ್ಣ ರನ್-ಅಪ್ ಅನ್ನು ಪ್ರಾರಂಭಿಸಿದಾಗಲೆಲ್ಲಾ ಅವರ ತಂಡದ ಸದಸ್ಯರು ಮತ್ತು ಲಕ್ಷಾಂತರ ಅಭಿಮಾನಿಗಳಿಗೆ ಈ ದಿಗ್ಗಜ ಸದಾ ನೀರಿಕ್ಷೆಯನ್ನು ಸಾಕಾರ ಮಾಡುವ ಆಟಗಾರನಾಗಿದ್ದ.. “ಗೋ ವಾರ್ನಿ” ಕರೆ ಇದುವರೆಗೆ ಅತ್ಯಂತ ಸಾಂಪ್ರದಾಯಿಕ ಕ್ರಿಕೆಟ್ ಪಠಣವಾಗಿ ಉಳಿದಿದೆ.

*ಸಾರ್ವಕಾಲಿಕ ಶ್ರೇಷ್ಠ ಲೆಗ್ ಸ್ಪಿನ್ನರ್, ವಾರ್ನ್ ತಮ್ಮ 15 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಆಸ್ಟ್ರೇಲಿಯನ್ ಕ್ರಿಕೆಟ್ ತಂಡಕ್ಕಾಗಿ 708 ಟೆಸ್ಟ್ ವಿಕೆಟ್‌ಗಳನ್ನು ಪಡೆದರು.
* ವಾರ್ನ್ 1992 ರಲ್ಲಿ ಸಿಡ್ನಿಯಲ್ಲಿ ಭಾರತದ ವಿರುದ್ಧ ಟೆಸ್ಟ್ ಪಾದಾರ್ಪಣೆ ಮಾಡಿದರು ಮತ್ತು ಮುಂದಿನ ವರ್ಷ ಮಾರ್ಚ್‌ನಲ್ಲಿ ವೆಲ್ಲಿಂಗ್ಟನ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಏಕದಿನದ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದರು.
* ವಾರ್ನ್ 194 ಪಂದ್ಯಗಳಲ್ಲಿ 293 ವಿಕೆಟ್‌ಗಳೊಂದಿಗೆ ತನ್ನ ಏಕದಿನದ ಪಂದ್ಯದ ವೃತ್ತಿಜೀವನವನ್ನು ಮುಗಿಸಿದರು.
* ಅವರು ಟೆಸ್ಟ್ ಇತಿಹಾಸದಲ್ಲಿ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದವರಾಗಿದ್ದರು ಮತ್ತು ಶ್ರೀಲಂಕಾದ ಆಫ್ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಅವರು 800 ವಿಕೆಟ್‌ಗಳೊಂದಿಗೆ ಹೆಚ್ಚು ವಿಕೆಟ್‌ಗಳನ್ನು ಪಡೆದವರಾಗಿದ್ದಾರೆ.
* 2007 ರಲ್ಲಿ, ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ಕ್ರಿಕೆಟ್ ಉಭಯ ತಂಡಗಳ ನಡುವಿನ ಟೆಸ್ಟ್ ಸರಣಿಯನ್ನು – ವಾರ್ನ್ ಮುರಳೀಧರನ್ ಟ್ರೋಫಿ – ಇಬ್ಬರ ಗೌರವಾರ್ಥವಾಗಿ ಹೆಸರಿಸಿತು.
* ವಾರ್ನ್ ಅವರು 1992 ಮತ್ತು 2007 ರ ನಡುವಿನ 15 ವರ್ಷಗಳ ವೃತ್ತಿಜೀವನದಲ್ಲಿ ಅವರ ಅಪ್ರತಿಮ ಸಾಧನೆಗಳಿಗಾಗಿ ವಿಸ್ಡನ್‌ನ ಶತಮಾನದ ಐದು ಕ್ರಿಕೆಟಿಗರಲ್ಲಿ ಒಬ್ಬರೆಂದು ಹೆಸರಿಸಲ್ಪಟ್ಟರು.
* 2013 ರಲ್ಲಿ, ಅವರನ್ನು ICC ಹಾಲ್ ಆಫ್ ಫೇಮ್‌ಗೆ ಸೇರಿಸಲಾಯಿತು.
* ಅವರು 1999 ರಲ್ಲಿ ಆಸ್ಟ್ರೇಲಿಯಾಕ್ಕೆ ವಿಶ್ವಕಪ್ ಗೆಲ್ಲಲು ಸಹಾಯ ಮಾಡಿದರು ಮತ್ತು ಆಶಸ್ ಕ್ರಿಕೆಟ್‌ನಲ್ಲಿ ಇತರ ಯಾವುದೇ ಬೌಲರ್‌ಗಳಿಗಿಂತ ಹೆಚ್ಚು ವಿಕೆಟ್‌ಗಳನ್ನು ಪಡೆದರು, ಇದು 195 ರಷ್ಟಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ, ವಾರ್ನ್ ಈವೆಂಟ್‌ನ ಉದ್ಘಾಟನಾ ಆವೃತ್ತಿಯಲ್ಲಿ ಐಪಿಎಲ್‌ (IPL) ತಂಡದ ರಾಜಸ್ಥಾನ ರಾಯಲ್ಸ್‌ ನಾಯಕರಾಗಿ ತಂಡವನ್ನು ಆ ವರ್ಷದ ಐಪಿಎಲ್‌ ಚಾಂಪಿಯನ್‌ ಆಗಿ ಮಾಡಿದರು. ತರಬೇತುದಾರರಾಗಿ ಸಾಕಷ್ಟು ಗಮನ ಸೆಳೆದರು.
ಮೈದಾನದ ಒಳಗೆ ಮತ್ತು ಹೊರಗೆ ಒಂದು ಅಬ್ಬರದ ವ್ಯಕ್ತಿತ್ವ, ವಾರ್ನ್ ಅವರು ಟಿವಿ ನಿರೂಪಕರಾಗಿ ಯಶಸ್ಸನ್ನು ಕಂಡುಕೊಂಡರು ಮತ್ತು ಆಟದ ತೀಕ್ಷ್ಣವಾದ ವಿಶ್ಲೇಷಕರಲ್ಲಿ ಒಬ್ಬರು ಎಂದು ಪರಿಗಣಿಸಲ್ಪಟ್ಟರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement