ಶೇನ್ ವಾರ್ನ್ ನಿಧನ: ಥಾಯ್ಲೆಂಡ್ ವಿಲ್ಲಾ ತಪಾಸಣೆಗೆ ಫೊರೆನ್ಸಿಕ್ ತಂಡ, ಸ್ನೇಹಿತರಿಂದ ಹೇಳಿಕೆ ಪಡೆಯಲಿರುವ ಪೊಲೀಸ್‌

ಬ್ಯಾಂಕಾಕ್‌: ಶೇನ್ ವಾರ್ನ್ ನಿಧನರಾದ ವಿಲ್ಲಾವನ್ನು ಫೋರೆನ್ಸಿಕ್ ತಂಡವು ಪರಿಶೀಲಿಸುತ್ತದೆ ಎಂದು ಥಾಯ್ಲೆಂಡ್ ಪೊಲೀಸರು ಶನಿವಾರ ಹೇಳಿದ್ದಾರೆ . ತಮ್ಮ ವೈಯಕ್ತಿಕ ಪ್ರವಾಸದ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಕ್ರಿಕೆಟ್‌ ದಂತಕಥೆ ಶೇನ್ ವಾರ್ನ್‌ ಥೈಲ್ಯಾಂಡಿನ ವಿಲ್ಲಾದಲ್ಲಿ ಶುಕ್ರವಾರ ತಮ್ಮ 52 ನೇ ವಯಸ್ಸಿನಲ್ಲಿ ಶಂಕಿತ ಹೃದಯಾಘಾತದಿಂದ ನಿಧನರಾದರು

ಶುಕ್ರವಾರ ಕುಟುಂಬದ ಹೇಳಿಕೆಯು ಶಂಕಿತ ಹೃದಯಾಘಾತದಿಂದ ಶೇನ್ ವಾರ್ನ್ ಮೃತಪಟ್ಟಿದ್ದಾರೆ ಮತ್ತು ವೈದ್ಯರು ಅವರನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸಿದರು ಸಾಧ್ಯವಾಗಲಿಲ್ಲ ಎಂದು ತಿಳಿಸಿದೆ.
ವಿಲ್ಲಾವನ್ನು ಪರಿಶೀಲಿಸಲಾಗುವುದು ಮತ್ತು ಥಾಯ್ಲೆಂಡ್ ಪ್ರವಾಸದಲ್ಲಿ ವಾರ್ನ್ ಅವರ ಜೊತೆಗಿದ್ದ ಸ್ನೇಹಿತರಿಂದಲೂ ಹೇಳಿಕೆಗಳನ್ನು ತೆಗೆದುಕೊಳ್ಳಲು ನಿರ್ಧರಿಸಲಾಗಿದೆ ಎಂದು ಥಾಯ್ ಪೊಲೀಸರು ತಿಳಿಸಿದ್ದಾರೆ. ಸಾವನ್ನು ಒಳಗೊಂಡ ಪ್ರಕರಣದಲ್ಲಿ ಹೇಳಿಕೆಗಳನ್ನು ಕಾನೂನು ಪ್ರಕ್ರಿಯೆಯ ಭಾಗವಾಗಿ ತೆಗೆದುಕೊಳ್ಳಲಾಗುತ್ತದೆ.

ಥಾಯ್ಲೆಂಡ್‌ನ ಪೊಲೀಸರು, ಅದೇ ಕಾಂಪ್ಲೆಕ್ಸ್‌ನಲ್ಲಿ ಉಳಿದುಕೊಂಡಿದ್ದ ಸ್ನೇಹಿತನೊಬ್ಬ ವಾರ್ನ್‌ ಊಟಕ್ಕೆ ಬರದೇ ಇದ್ದಾಗ ಪರೀಶೀಲಸಲು ಹೋದಾಗ ವಾರ್ನ್‌ ವಿಲ್ಲಾದಲ್ಲಿ ಪ್ರಜ್ಞೆ ತಪ್ಪಿ ಬಿದ್ದಿರುವುದನ್ನು ಕಂಡಿದ್ದಾರೆ. ತಕ್ಷಣವೇ ವಾರ್ನ್ ಅವರನ್ನು ಅಂಬ್ಯುಲೆನ್ಸ್ ಮೂಲಕ ಥಾಯ್ ಇಂಟರ್ನ್ಯಾಷನಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೆ ಪುನಶ್ಚೇತನಕ್ಕೆ ಸಾಧ್ಯವಾಗಲಿಲ್ಲ. ನಂತರ ದೇಹವನ್ನು ಶವಪರೀಕ್ಷೆಗಾಗಿ ಕೊಹ್ ಸಮುಯಿ ಆಸ್ಪತ್ರೆಗೆ ವರ್ಗಾಯಿಸಲಾಯಿತು.
ದಿಗ್ಗಜ ಕ್ರಿಕೆಟಿಗನ ಸಾವಿಗೆ ಅಭಿಮಾನಿಗಳು ಮತ್ತು ಕ್ರಿಕೆಟಿಗರು ಸಂತಾಪ ಸೂಚಿಸುತ್ತಿದ್ದಾರೆ. ವಾರ್ನ್ ಅವರ ನಿಧನಕ್ಕೆ ಭಾರತ, ಶ್ರೀಲಂಕಾ, ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ತಂಡಗಳು ಮೊಹಾಲಿ ಮತ್ತು ರಾವಲ್ಪಿಂಡಿಯಲ್ಲಿ ಶನಿವಾರ ನಡೆದ ತಮ್ಮ ಟೆಸ್ಟ್‌ನಲ್ಲಿ ವಾರ್ನ್‌ ಗೌರವಾರ್ಥವಾಗಿ ಕಪ್ಪು ಪಟ್ಟಿಯನ್ನು ಧರಿಸಿ ಸಂತಾಪ ಸೂಚಿಸಿದ್ದಾರೆ.

ಓದಿರಿ :-   1955ರ ಮರ್ಸಿಡಿಸ್-ಬೆಂಜ್ 300 SLR ಕಾರು ಮಾರಾಟವಾದ ದುಬಾರಿ ಕಾರು...ಮೊತ್ತ ಕೇಳಿದರೆ ಬೆಚ್ಚಿ ಬೀಳ್ತೀರಾ..!

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ