ಶೇನ್ ವಾರ್ನ್ ಬದುಕಿಸಲು ಸ್ನೇಹಿತರು ’20 ನಿಮಿಷಗಳ ಕಾಲ ಹೋರಾಡಿದರು’: ಪೊಲೀಸರು

ಬ್ಯಾಂಕಾಕ್‌: ಆಸ್ಟ್ರೇಲಿಯಾದ ದಂತಕಥೆ ಶೇನ್ ವಾರ್ನ್ 52 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಶುಕ್ರವಾರ, ಮಾರ್ಚ್ 4 ರಂದು ನಿಧನರಾಗಿದ್ದಾರೆ, ಅವರಿಗೆ ಹೃದಯಾಘಾತವಾದಾಗ ಅವರ ನಾಲ್ವರು ಸ್ನೇಹಿತರು 20 ನಿಮಿಷಗಳ ಕಾಲ ಅವರ ಜೀವವನ್ನು ಉಳಿಸಲು ಪ್ರಯತ್ನಪಟ್ಟರು ಎಂದು ಥಾಯ್ ಪೊಲೀಸರು ತಿಳಿಸಿದ್ದಾರೆ.
ವಾರ್ನ್ ಮತ್ತು ಇತರ ಮೂವರು ಸ್ನೇಹಿತರು ಕೊಹ್ ಸಮುಯಿಯಲ್ಲಿರುವ ಖಾಸಗಿ ವಿಲ್ಲಾದಲ್ಲಿ ಉಳಿದುಕೊಂಡಿದ್ದರು ಮತ್ತು ಮಾಜಿ ಕ್ರಿಕೆಟಿಗ ಭೋಜನಕ್ಕೆ ಬಾರದ ಹಿನ್ನೆಲೆಯಲ್ಲಿ ಅವರಲ್ಲಿ ಒಬ್ಬರು ಅವರ ಬಗ್ಗೆ ವಿಚಾರಿಸಲು ಹೋದಾಗ ವಿಷಯ ಗೊತ್ತಾಗಿದೆ ಎಂದು ಥಾಯ್ ಪೊಲೀಸರು ಹೇಳಿದ್ದಾರೆ.

ವಾರ್ನ್‌ “ಸ್ನೇಹಿತ ತಕ್ಷಣವೇ ಸಿಪಿಆರ್ ಮಾಡಿದ್ದಾರೆ ಮತ್ತು ಆಂಬ್ಯುಲೆನ್ಸ್‌ಗೆ ಕರೆ ಮಾಡಿದ್ದಾರೆ” ಎಂದು ಬೋ ಪುಟ್ ಪೋಲೀಸ್ ಅಧಿಕಾರಿ ಚಾಚಾವಿನ್ ನಕ್ಮುಸಿಕ್ ಫೋನ್ ಮೂಲಕ ರಾಯಿಟರ್ಸ್‌ಗೆ ತಿಳಿಸಿದ್ದಾರೆ.
“ನಂತರ ತುರ್ತು ಪ್ರತಿಕ್ರಿಯೆ ಘಟಕವು ಆಗಮಿಸಿತು ಮತ್ತು 10-20 ನಿಮಿಷಗಳ ಕಾಲ ಮತ್ತೊಂದು ಸಿಪಿಆರ್ ಮಾಡಿದೆ. ನಂತರ ಥಾಯ್ ಇಂಟರ್ನ್ಯಾಷನಲ್ ಆಸ್ಪತ್ರೆಯಿಂದ ಆಂಬ್ಯುಲೆನ್ಸ್ ಬಂದು ಅವರನ್ನು ಕರೆದೊಯದಿದೆ. . ಅವರು ಐದು ನಿಮಿಷಗಳ ಕಾಲ ಸಿಪಿಆರ್ ಮಾಡಿದರು ಮತ್ತು ನಂತರ ಅವರು ನಿಧನರಾದರು ಎಂದು ಘೋಷಿಸಲಾಯಿತು. ಅವರು ಸಾವಿನ ಕಾರಣವನ್ನು ತಿಳಿದಿರಲಿಲ್ಲ ಆದರೆ ಅದನ್ನು ಅನುಮಾನಾಸ್ಪದ ಎಂದು ಪರಿಗಣಿಸಲಿಲ್ಲ ಎಂದು ತಿಳಿಸಿದ್ದಾರೆ.
ಆಸ್ಟ್ರೇಲಿಯಾದ ವಿದೇಶಾಂಗ ಸಚಿವ ಮಾರಿಸ್ ಪೇನ್, ಅಧಿಕಾರಿಗಳು ಥೈಲ್ಯಾಂಡ್‌ನಲ್ಲಿರುವ ವಾರ್ನ್ ಅವರ ಸ್ನೇಹಿತರೊಂದಿಗೆ ಮಾತನಾಡಿದ್ದಾರೆ ಮತ್ತು ಹೆಚ್ಚಿನ ನೆರವು ನೀಡಲು ಶನಿವಾರ ಕೊಹ್ ಸಮುಯಿಗೆ ಪ್ರಯಾಣಿಸಲಿದ್ದಾರೆ ಎಂದು ಹೇಳಿದರು.
“(ನಾವು) ಅವರ ಮರಣದ ನಂತರದ ವ್ಯವಸ್ಥೆಗಳನ್ನು ಖಚಿತಪಡಿಸಲು ಥಾಯ್ ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ, ಅವರ ವಾಪಸಾತಿಗೆ ಸಹಾಯ ಮಾಡುತ್ತೇವೆ ಮತ್ತು ಅವರಿಗೆ ಇತರ ಸಹಾಯವನ್ನು ಒದಗಿಸುತ್ತೇವೆ” ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
74 ನೇ ವಯಸ್ಸಿನಲ್ಲಿ ಶುಕ್ರವಾರ ನಿಧನರಾದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ ದಿಗ್ಗಜ, ವಿಕೆಟ್ ಕೀಪರ್ ರಾಡ್ ಮಾರ್ಷ್ ಅವರಿಗೆ ವಾರ್ನ್ ಸಂತಾಪ ಸೂಚಿಸಿ ಕೊನೆಯ ಟ್ವೀಟ್ ಮಾಡಿದ್ದಾರೆ.
ಲೆಗ್-ಸ್ಪಿನ್ ಕಲೆಯನ್ನು ಪುನರುಜ್ಜೀವನಗೊಳಿಸಿದ ಕೀರ್ತಿಗೆ ಪಾತ್ರರಾದ ವಾರ್ನ್ ಅವರು 1992 ರಲ್ಲಿ ಭಾರತದ ವಿರುದ್ಧ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದರು ಮತ್ತು ಅವರು ತಮ್ಮ 15 ವರ್ಷಗಳ ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ಕೊನೆಗೊಳಿಸುವ ಹೊತ್ತಿಗೆ, ಕ್ರಿಕೆಟ್‌ ಆಟದ ಶ್ರೇಷ್ಠರಲ್ಲಿ ಒಬ್ಬರಾಗಿ ತಮ್ಮನ್ನು ತಾವು ಸ್ಥಾಪಿಸಿಕೊಂಡಿದ್ದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 3

advertisement

ನಿಮ್ಮ ಕಾಮೆಂಟ್ ಬರೆಯಿರಿ