ಹೃದಯ ವಿದ್ರಾವಕ ಘಟನೆ: 2 ವರ್ಷದ ಮಗುವನ್ನು ಕೊಂದ ಬೆಕ್ಕು…!

ಜಬಲ್‌ಪುರ (ಮಧ್ಯಪ್ರದೇಶ): ಜಬಲ್‌ಪುರದ ಬರೇಲಾದಲ್ಲಿ ನಡೆದ ಹೃದಯ ವಿದ್ರಾವಕ ಘಟನೆಯೊಂದು ಎಲ್ಲರನ್ನೂ ಬೆಚ್ಚಿಬೀಳಿಸಿದೆ.
ಭೀಕರ ಘಟನೆಯೊಂದರಲ್ಲಿ ಬೆಕ್ಕೊಂದು ಎರಡು ವರ್ಷದ ಬಾಲಕನ ಮೇಲೆ ದಾಳಿ ಮಾಡಿ ಕೊಂದು ಹಾಕಿರುವ ಘಟನೆ ಜಬಲ್‌ಪುರ ಜಿಲ್ಲೆಯ ಬರೇಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ. ಜಿಲ್ಲೆಯ ಮಹಗೋನ್ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ವರದಿಗಳು ತಿಳಿಸಿವೆ.

ವರದಿಗಳ ಪ್ರಕಾರ, ಶುಕ್ರವಾರ ಮಧ್ಯಾಹ್ನ ದಿವಾನ್ ರಜಾಕ್ ಎಂದು ಗುರುತಿಸಲಾದ ಬಾಲಕ ತನ್ನ ಮನೆಯ ಮುಂದೆ ಆಟವಾಡುತ್ತಿದ್ದಾಗ ಬೆಕ್ಕು ಬಾಲಕನ ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ. ಗಾಯಗೊಂಡ ಬಾಲಕನನ್ನು ಅಕ್ಕಪಕ್ಕದವರು ರಕ್ಷಿಸಿದ್ದಾರೆ. ಕಚ್ಚಿದ ಗಾಯಗಳಿಂದ ರಕ್ತಸ್ರಾವವಾಗುತ್ತಿದ್ದ ಬಾಲಕನನ್ನು ಕುಟುಂಬಸ್ಥರು ಜಬಲ್‌ಪುರ ವೈದ್ಯಕೀಯ ಕಾಲೇಜಿಗೆ ಕರೆದೊಯದ್ದರು, ಶುಕ್ರವಾರ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.

ಈ ಘಟನೆ ಕುರಿತು ವೈದ್ಯಕೀಯ ಕಾಲೇಜು ವೈದ್ಯರು ಹೇಳುವಂತೆ, ಮಗು ಆಸ್ಪತ್ರೆಗೆ ಬರುವಷ್ಟರಲ್ಲಿ ಸಾಕಷ್ಟು ರಕ್ತ ಸ್ರಾವವಾಗಿತ್ತು ಇದರೊಂದಿಗೆ ಮಗುವಿನ ದೇಹದಲ್ಲಿ ಸೋಂಕು ಕೂಡ ಹೆಚ್ಚಿತ್ತು. ಹೀಗಾಗಿ ಮಗುವನ್ನು ಉಳಿಸಲಾಗಲಿಲ್ಲ.  ಶವಪರೀಕ್ಷೆಯ ನಂತರ ಬಾಲಕನ ಶವವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ ಮತ್ತು ತನಿಖೆ ನಡೆಯುತ್ತಿದೆ ಎಂದು ಬರೇಲಾ ಪೊಲೀಸ್ ಠಾಣೆಯ ಉಸ್ತುವಾರಿ ಜಿತೇಂದ್ರ ಯಾದವ್ ಹೇಳಿದ್ದಾರೆ.

ಓದಿರಿ :-   ಬಿಜೆಪಿ ಸೇರಿದ ಮಾಜಿ ಕಾಂಗ್ರೆಸ್ ನಾಯಕ ಸುನಿಲ್ ಜಾಖರ್

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 2

advertisement

ನಿಮ್ಮ ಕಾಮೆಂಟ್ ಬರೆಯಿರಿ