ಭಾರತದ ಎಲ್ಲ ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವವರೆಗೆ ಉಕ್ರೇನ್‌ ತೊರೆಯುವುದಿಲ್ಲ ಎಂದ ಡಾ. ಪೃಥ್ವಿರಾಜ್ ಘೋಷ್

ನವದೆಹಲಿ: ಜನರು ಉಕ್ರೇನ್ ತೊರೆಯಲು ಪ್ರಯತ್ನಿಸುತ್ತಿರುವ ಸಮಯದಲ್ಲಿ, ಕೋಲ್ಕತ್ತಾದ 37 ವರ್ಷದ ಭಾರತೀಯ ವೈದ್ಯರೊಬ್ಬರು ಯುದ್ಧ ಪೀಡಿತ ದೇಶವನ್ನು ತೊರೆಯದಿರಲು ನಿರ್ಧರಿಸಿದ್ದಾರೆ…! ಉಕ್ರೇನ್‌ನಲ್ಲಿ ವೈದ್ಯ ಮತ್ತು ವಿದ್ಯಾರ್ಥಿ ಸಲಹೆಗಾರರಾಗಿರುವ ಡಾ ಪೃಥ್ವಿರಾಜ್ ಘೋಷ್ ಅವರು ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಅಲ್ಲಿಯೇ ಉಳಿಯಲು ನಿರ್ಧರಿಸಿದ್ದಾರೆ.

ನಾನು ಇಲ್ಲಿ ಕೀವ್‌ನಲ್ಲಿ ಸಿಲುಕಿಕೊಂಡಿಲ್ಲ, ನಾನು ಹೊರಡುತ್ತಿಲ್ಲ ಅಷ್ಟೆ. ನಾನು ಉಕ್ರೇನ್‌ನಿಂದ ಸುಮಾರು 350 ವಿದ್ಯಾರ್ಥಿಗಳನ್ನು ಸ್ಥಳಾಂತರಿಸಿದ್ದೇನೆ. ಅವರು ಕೀವ್‌ನಲ್ಲಿ ನನ್ನ ವಿದ್ಯಾರ್ಥಿಗಳು. ತೊರೆದ ಇತರ ಸಂಯೋಜಕರು ವಿವಿಧ ಭಾಗಗಳಲ್ಲಿ ಸಿಲುಕಿರುವ ವಿಶೇಷವಾಗಿ ಸುಮಿಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ನನ್ನನ್ನು ಕೇಳಿದ್ದಾರೆ ಎಂದು ಡಾ ಘೋಷ್ ಉಲ್ಲೇಖಿಸಿ ಇಂಡಿಯಾ ಟುಡೆ ವರದಿ ಮಾಡಿದೆ.
ಘೋಷ್ ಪ್ರಕಾರ, ಕದನ ವಿರಾಮವು , ನಿರ್ದಿಷ್ಟವಾಗಿ ಕೇವಲ ವಿದ್ಯಾರ್ಥಿಗಳಿಗೆ ಮಾತ್ರ ಅಲ್ಲ, ಇದು ದೇಶದ ಜನ ಸಾಮಾನ್ಯರಿಗೆ ಮತ್ತು ಇದರಿಂದ ಖಾರ್ಕಿವ್‌ನಲ್ಲಿದ್ದ ಸುಮಾರು 2,000 ವಿದ್ಯಾರ್ಥಿಗಳು ಹೊರಡಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.

ಘೋಷ್ ಅವರ ಬಗ್ಗೆ ಹೆಮ್ಮೆಪಡುವ ಅವರ ಹೆತ್ತವರು, ಪ್ರತಿಕ್ರಯಿಸಿದ್ದಾರೆ. ತನ್ನ ಮಗ ಮತ್ತು ವಿದ್ಯಾರ್ಥಿಗಳ ಸುರಕ್ಷಿತ ಮರಳುವಿಕೆಗಾಗಿ ಪ್ರತಿದಿನ ದೇವರನ್ನು ಪ್ರಾರ್ಥಿಸುತ್ತೇನೆ ಎಂದು ಅವರ ತಾಯಿ ಬ್ರತಾತಿ ಹೇಳಿದ್ದಾರೆ.
ತಂದೆ ಪ್ರದೀಪ್ ಘೋಷ್ ಈ ಯುವ ವಿದ್ಯಾರ್ಥಿಗಳು ಪೃಥ್ವಿಯನ್ನು ಹಿರಿಯ ಸಹೋದರ ಎಂದು ಪರಿಗಣಿಸಿದ್ದಾರೆ ಎಂದು ಹೇಳಿದರು.
“ವಿದ್ಯಾರ್ಥಿಗಳಿಗೆ ಅಲ್ಲಿ ಯಾರೂ ಇಲ್ಲ, ಅವರು ಅವನನ್ನು ತಮ್ಮ ಗಾರ್ಡಿಯನ್ ಎಂದು ಪರಿಗಣಿಸುತ್ತಾರೆ, ಅವನು ಹೇಗೆ ಅವರನ್ನು ಬಿಟ್ಟು ಹೋಗುತ್ತಾನೆ?” ಪ್ರದೀಪ್ ಹೇಳಿದರು. ಪೃಥ್ವಿ ಕೇವಲ ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಅವರು ಹೇಳುತ್ತಾರೆ.
ನನ್ನ ಪೋಷಕರು ಚಿಂತಿತರಾಗಿದ್ದಾರೆ, ನನಗೆ ಅರ್ಥವಾಗಿದೆ, ಆದರೆ ಇದು ನನ್ನ ಜವಾಬ್ದಾರಿಯಾಗಿದೆ. ನಾನು ವಿದ್ಯಾರ್ಥಿಗಳನ್ನು ನೋಡಿಕೊಳ್ಳುತ್ತೇನೆ ಎಂದು ಪೋಷಕರಿಗೆ ಭರವಸೆ ನೀಡಿದ್ದೇನೆ. ನಾನು ಸ್ವಲ್ಪ ಚಿಕ್ಕವನಾಗಿದ್ದಾಗ 2013-2014 ರ ಅವಧಿಯಲ್ಲಿ ಬಿಕ್ಕಟ್ಟನ್ನು ಎದುರಿಸಿದ್ದೇನೆ ಮತ್ತು ಅದೇ ರೀತಿ ಮಾಡಿದ್ದೇನೆ. ಈಗ, ಇದನ್ನು ನಿಭಾಯಿಸಲು ನಾನು ಹೆಚ್ಚು ಪ್ರಬುದ್ಧನಾಗಿದ್ದೇನೆ ಎಂದು ಪೃಥ್ವಿ ಘೋಷ್‌ ಹೇಳಿದರು.

ಓದಿರಿ :-   ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಮಾಜಿ ಸಿಎಂ ಓಂ ಪ್ರಕಾಶ್ ಚೌತಾಲಾಗೆ 4 ವರ್ಷ ಜೈಲು ಶಿಕ್ಷೆ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ