ಭಾರತ-ಶ್ರೀಲಂಕಾ ಮೊದಲ ಟೆಸ್ಟ್‌: ಕಪಿಲ್ ದೇವ್ ಹಿಂದಿಕ್ಕಿ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ 2ನೇ ಅತಿಹೆಚ್ಚು ವಿಕೆಟ್ ಪಡೆದ ಬೌಲರ್ ಆದ ಅಶ್ವಿನ್

ಮೊಹಾಲಿ: ಭಾರತ ಕ್ರಿಕೆಟ್‌ ತಂಡದ ಲೆಗ್‌ ಸ್ಪಿನ್ನರ್‌ ರವಿಚಂದ್ರನ್ ಅಶ್ವಿನ್ ಭಾನುವಾರ ಶ್ರೀಲಂಕಾ ವಿರುದ್ಧ ಮೊಹಾಲಿಯಲ್ಲಿ ನಡೆಯುತ್ತಿರುವ ಸರಣಿ-ಆರಂಭಿಕ ಟೆಸ್ಟ್ ಪಂದ್ಯದ 3ನೇ ದಿನದಂದು ಕಪಿಲ್ ದೇವ್ ಅವರನ್ನು ಹಿಂದಿಕ್ಕಿ ಭಾರತದ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ.
ಇದು ಅಶ್ವಿನ್ ಅವರ ಟೆಸ್ಟ್‌ ವೃತ್ತಿಜೀವನದ ವಿಕೆಟ್‌ ಸಂಖ್ಯೆಯನ್ನು 435ಕ್ಕೆ ಒಯ್ದಿದೆ. ಮತ್ತು ಕಪಿಲ್ ದೇವ್‌ ಅವರು ಹೆಸರಿಗೆ 434 ವಿಕೆಟ್‌ಗಳನ್ನು ಪಡೆದಿದ್ದಾರೆ.

ಅಶ್ವಿನ್ ಮೂರನೇ ದಿನದ 2ನೇ ಸೆಷನ್‌ನಲ್ಲಿ ಶ್ರೀಲಂಕಾ ಬ್ಯಾಟರ್ ಪಾಥುಮ್ ನಿಸ್ಸಾಂಕಾ ಅವರ ವಿಕೆಟ್ ಪಡೆದ ನಂತರ ಕಪಿಲ್ ದೇವ್‌ ಅವರ ಜೊತೆಗೆ ಸಮಬಲ ಸಾಧಿಸಿದರು. ಟೀ ನಂತರ ಚರಿತ್ ಅಸಲಂಕಾ ಅವರನ್ನು ಔಟ್ ಮಾಡುವ ಮೂಲಕ ಅಶ್ವಿನ್‌ 435ನೇ ಟೆಸ್ಟ್ ವಿಕೆಟ್ ಪಡೆದರು ಹಾಗೂ ಅತಿ ಹೆಚ್ಚು ವಿಕೆಟ್‌ ಪಡೆದ ಭಾರತದ ಎರಡನೇ ಬೌಲರ್‌ ಎನಿಸಿಕೊಂಡರು. ಶನಿವಾರ ನ್ಯೂಜಿಲೆಂಡ್‌ನ ರಿಚರ್ಡ್ ಹ್ಯಾಡ್ಲಿ (431) ಮತ್ತು ಶ್ರೀಲಂಕಾದ ರಂಗನಾ ಹೆರಾತ್ (432) ಅವರನ್ನು ಹಿಂದಿಕ್ಕಿ ಸಾರ್ವಕಾಲಿಕ 9 ನೇ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದರು.

ಪ್ರಮುಖ ಸುದ್ದಿ :-   ಇವರು ಭಾರತದ ಅತ್ಯಂತ ಶ್ರೀಮಂತ ಅಭ್ಯರ್ಥಿ : ತೆಲುಗು ದೇಶಂ ಪಕ್ಷದ ಇವರ ಆಸ್ತಿ 5,785 ಕೋಟಿ ರೂಪಾಯಿ...!

ಅನಿಲ ಕುಂಬ್ಳೆ ಭಾರತದ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ ಆಗಿದ್ದಾರೆ. 35 ವರ್ಷ ವಯಸ್ಸಿನ ಅಶ್ವಿನ್‌ ಮೊದಲು ಶ್ರೀಲಂಕಾದ ಮೊದಲ ಇನ್ನಿಂಗ್ಸ್‌ನಲ್ಲಿ ಬೌಲ್ ಮಾಡಿದ 20 ಓವರ್‌ಗಳಲ್ಲಿ 2/49 ಅಂಕಿಗಳನ್ನು ದಾಖಲಿಸಿದ್ದರು.
ಟೆಸ್ಟ್ ಕ್ರಿಕೆಟ್‌ನಲ್ಲಿ 400ಕ್ಕೂ ಹೆಚ್ಚು ವಿಕೆಟ್ ಪಡೆದ ಭಾರತದ ನಾಲ್ಕನೇ ಬೌಲರ್ ಅಶ್ವಿನ್. ಮೊಹಾಲಿಯಲ್ಲಿ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಟೆಸ್ಟ್‌ನಲ್ಲಿ ಸಕ್ರಿಯ ಟೆಸ್ಟ್ ಕ್ರಿಕೆಟಿಗರಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ ವೇಗದ ಬೌಲಿಂಗ್ ಜೋಡಿ ಜೇಮ್ಸ್ ಆಂಡರ್ಸನ್ (640) ಹಾಗೂ ಸ್ಟುವರ್ಟ್ ಬ್ರಾಡ್ (537) ನಂತರ ಅಶ್ವಿನ್ ಮೂರನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.

ಅತಿ ಹೆಚ್ಚು ವಿಕೆಟ್‌ ಪಡೆದ ಮೊದಲ ಹತ್ತು ಬೌಲರ್‌ಗಳು…

ಮುತ್ತಯ್ಯ ಮುರಳೀಧರನ್ – 133 ಟೆಸ್ಟ್‌ಗಳಲ್ಲಿ 800
ಶೇನ್ ವಾರ್ನ್ – 145 ಟೆಸ್ಟ್‌ಗಳಲ್ಲಿ 708
ಜೇಮ್ಸ್ ಆಂಡರ್ಸನ್ – 169 ಟೆಸ್ಟ್‌ಗಳಲ್ಲಿ 640
ಅನಿಲ್ ಕುಂಬ್ಳೆ – 132 ಟೆಸ್ಟ್‌ಗಳಲ್ಲಿ 619
ಗ್ಲೆನ್ ಮೆಕ್‌ಗ್ರಾತ್ – 124 ಟೆಸ್ಟ್‌ಗಳಲ್ಲಿ 563
ಸ್ಟುವರ್ಟ್ ಬ್ರಾಡ್ – 152 ಟೆಸ್ಟ್‌ಗಳಲ್ಲಿ 537
ಕರ್ಟ್ನಿ ವಾಲ್ಷ್ – 132 ಟೆಸ್ಟ್‌ಗಳಲ್ಲಿ 519
ಡೇಲ್ ಸ್ಟೇನ್ – 93 ಟೆಸ್ಟ್‌ಗಳಲ್ಲಿ 439
ಆರ್ ಅಶ್ವಿನ್ – 85 ಟೆಸ್ಟ್‌ಗಳಲ್ಲಿ 435*

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ: ಮತದಾನಕ್ಕೂ ಮುನ್ನವೇ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ...!

2011ರ ನವೆಂಬರ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ದೆಹಲಿಯಲ್ಲಿ ಟೆಸ್ಟ್‌ಗೆ ಪದಾರ್ಪಣೆ ಮಾಡಿದ ಅಶ್ವಿನ್, 85 ಟೆಸ್ಟ್‌ಗಳಲ್ಲಿ 52.6 ಸ್ಟ್ರೈಕ್ ರೇಟ್ ಮತ್ತು 24.33 ಸರಾಸರಿಯಲ್ಲಿ 435 ವಿಕೆಟ್‌ಗಳನ್ನು ಪಡೆದಿದ್ದಾರೆ. ಚೆಂಡಿನೊಂದಿಗಿನ ಅವರ ಅಪ್ರತಿಮ ಸಾಧನೆಯ ಹೊರತಾಗಿ, ಅಶ್ವಿನ್ ಅವರ ಬ್ಯಾಟಿಂಗ್‌ನ ಸಾಮರ್ಥ್ಯಕ್ಕೂ ಹೆಸರುವಾಸಿಯಾಗಿದ್ದಾರೆ, ಅವರ ಹೆಸರಿಗೆ ಐದು ಶತಕಗಳೊಂದಿಗೆ 27.15 ಸರಾಸರಿಯಲ್ಲಿ 2905 ರನ್ ಗಳಿಸಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement