ಉಕ್ರೇನ್‌ನಿಂದ ಕರ್ನಾಟಕದ 372 ವಿದ್ಯಾರ್ಥಿಗಳು ವಾಪಸ್‌

ಬೆಂಗಳೂರು : ಉಕ್ರೇನ್‌ನಿಂದ ಈವರೆಗೆ ಕರ್ನಾಟಕಕ್ಕೆ ಈವರೆಗೆ 372 ವಿದ್ಯಾರ್ಥಿಗಳು ಹಿಂತಿರುಗಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್‌ ರಾಜನ್‌ ತಿಳಿಸಿದ್ದಾರೆ.

ಶನಿವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು, 300ಕ್ಕೂ ಹೆಚ್ಚು ಜನರು ಆಗಮಿಸುವುದು ಬಾಕಿ ಇದೆ. ಶನಿವಾರ 84 ವಿದ್ಯಾರ್ಥಿಗಳು ಆಗಮಿಸಿದ್ದಾರೆ. ವಾಪಸ್‌ ಬಂದವರಿಗೆ ದೆಹಲಿಯ ಕರ್ನಾಟಕ ಭವನದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ. ಸಿಲುಕಿಕೊಂಡಿರುವ ವಿದ್ಯಾರ್ಥಿಗಳ ಜೊತೆ ನಿರಂತರ ಸಂಪರ್ಕ ದಲ್ಲಿದ್ದೇವೆ ಎಂದು ತಿಳಿಸಿದ್ದಾರೆ.

ಉಕ್ರೇನ್‌ ಗಡಿಗೆ ಬರಲು ಭಾರತೀಯ ವಿದ್ಯಾರ್ಥಿಗಳನ್ನು ಬಸ್‌ ವ್ಯವಸ್ಥೆ ಕಲ್ಪಿಸುವ ಮೂಲಕ ಗಡಿಗೆ ಕರೆತರಲಾಗುತ್ತಿದೆ. ಉಕ್ರೇನ್‌ನ ಪಿಸೋಚಿನ್‌ ಮತ್ತು ಬೊಬ್ಬಾಯಿ ಪ್ರದೇಶದಿಂದ ಬಸ್‌ ಮೂಲಕ ಪೋಲೆಂಡ್‌ಗೆ ಕರೆತಂದು ಅಲ್ಲಿಂದ ಭಾರತಕ್ಕೆ ಕರೆತರಲಾಗುತ್ತದೆ. ಸುಮಿ ಪ್ರದೇಶಕ್ಕೆ ಬಸ್‌ ಕಲ್ಪಿಸುವುದು ಕಷ್ಟವಾದರೂ ಪ್ರಯತ್ನ ಮುಂದುವರಿದಿದೆ ಎಂದು ಹೇಳಿದರು.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement