ಬಸವಣ್ಣನ ಮೂರ್ತಿ ಹಾಲು ಕುಡಿದ ವದಂತಿ: ದೇಗುಲಕ್ಕೆ ರಾತ್ರಿಯೇ ತಂಡೋಪತಂಡವಾಗಿ ಆಗಮಿಸಿದ ಜನ..!

ಬಾಗಲಕೋಟೆ: ಬಸವಣ್ಣನ ಮೂರ್ತಿ ಹಾಲು ಕುಡಿಯುತ್ತಿದೆ ಎಂಬ ವದಂತಿ ರಾತ್ರೋರಾತ್ರಿ ಹರಡಿ, ತಂಡೋಪ ತಂಡವಾಗಿ ಜನರು ದೇವಸ್ಥಾನದ ಕಡೆ ಆಗಮಿಸಿದ ಘಟನೆ ಜಿಲ್ಲೆಯ ಗುಳೇದಗುಡ್ಡ ಪಟಣ್ಣದಲ್ಲಿ ನಡೆದ ಬಗ್ಗೆ ವರದಿಯಾಗಿದೆ.

ನಿನ್ನೆ ರಾತ್ರಿ ಜನರು ಬಸಪ್ಪನ ಪವಾಡ ನೋಡಬೇಕು ಎಂದು ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು.ಗುಳೇದಗುಡ್ಡದ ಅರಳಿಕಟ್ಟಿ ಬಸವಣ್ಣನ ದೇಗುಲದಲ್ಲಿ ಈ ಘಟನೆ ನಡೆದಿದೆ. ಪಟ್ಟಣದ ಅರಳಿಕಟ್ಟೆ ಬಸಪ್ಪ ಹಾಲು ಕುಡಿಯುತ್ತಿದ್ದಾನೆ ಎಂದು ಪಟ್ಟಣದಲ್ಲಿ ಶನಿವಾರ ಸಂಜೆ ನಂತರ ಸುದ್ದಿ ಹಬ್ಬಿದೆ.

ಬಸವಣ್ಣ ಹಾಲು ಕುಡಿಯುತ್ತಿದೆ ಎನ್ನುವ ವದಂತಿ ಹರಡುತ್ತಿದ್ದಂತೆ ಇದನ್ನು ನಂಬಿದ ಜನರು ತಂಡೋಪತಂಡೋವಾಗಿ ಹಾಲು ಹಿಡಿದುಕೊಂಡು ಬಂದು ಚಮಚದಲ್ಲಿ ಬಸವಣ್ಣನಿಗೆ ಹಾಲು‌ ಕುಡಿಸಲು ಆರಂಭಿಸಿದರು. ಕೆಲವರು ಕುತೂಹಲಕ್ಕಾಗಿ ಇದನ್ನು ಬಸವಣ್ಣನ ಪವಾಡ ಎಂದೆಲ್ಲ ಹೇಳುತ್ತಿದ್ದಾರೆ. ಕೊನೆಗೆ ಪೊಲೀಸರು ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement