ಬೆಕ್ಕು ಕಚ್ಚಿ ಇಬ್ಬರು ಮಹಿಳೆಯರು ಒಂದೇ ದಿನ ಸಾವು..!

ಅಮರಾವತಿ,: ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ಬೆಕ್ಕು ಕಚ್ಚಿ ಇಬ್ಬರು ಮಹಿಳೆಯರು ಮೃತಪಟ್ಟ ಘಟನೆ ವರದಿಯಾಗಿದೆ.
ಮೊವ್ವ ಮಂಡಲದ ವೇಮುಲಮಾಡ ಎಂಬಲ್ಲಿ ಶನಿವಾರ ಕಮಲಾ (64) ಮತ್ತು ನಾಗಮಣಿ (43) ಎಂಬ ಮಹಿಳೆಯರು ಮೃತಪಟ್ಟಿದ್ದು, ಎರಡು ತಿಂಗಳ ಹಿಂದೆ ಅವರಿಗೆ ಬೆಕ್ಕು ಕಚ್ಚಿತ್ತು. ಅವರನ್ನು ಆಸ್ಪತ್ರೆಗೆ ದಾಖಲಿಸಿದ ನಂತರ ಅವರಿಗೆ ಬೆಕ್ಕಿನಿಂದ ರೇಬಿಸ್‌ ತಗುಲಿರುವುದು ವೈದ್ಯರಿಗೆ ಪತ್ತೆಯಾಗಿದೆ.

ಅವರ ಕುಟುಂಬ ಸದಸ್ಯರ ಪ್ರಕಾರ, ಇಬ್ಬರು ಮಹಿಳೆಯರು ಬೆಕ್ಕು ಕಚ್ಚಿದ ನಂತರ ಟಿಟಿ (ಟೆಟನಸ್ ಟಾಕ್ಸಾಯ್ಡ್) ಚುಚ್ಚುಮದ್ದನ್ನು ತೆಗೆದುಕೊಂಡರು ಮತ್ತು ಔಷಧಿಯನ್ನೂ ತೆಗೆದುಕೊಂಡಿದ್ದಾರೆ. ನಂತರ ಅವರು ತಮ್ಮ ಕೆಲಸಗಳನ್ನು ಸಹಜವಾಗಿಯೇ ಯಾವುದೇ ತೊಂದರೆಯಿಲ್ಲದೆ ಮಾಡುತ್ತಿದ್ದರು. ಆದರೆ, ಕೆಲ ದಿನಗಳ ಹಿಂದೆ ಅವರ ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟಿತು ಮತ್ತು ಒಂದೇ ದಿನ ಇಬ್ಬರು ಮಹಿಳೆಯರೂ ಮೃತಪಟ್ಟಿದ್ದಾರೆ.
ಕಮಲಾ ಅವರು ಗುಂಟೂರು ಜಿಲ್ಲೆಯ ಮಂಗಳಗಿರಿಯ ಎನ್‌ಆರ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಶನಿವಾರ ಮುಂಜಾನೆ ಮೃತಪಟ್ಟರೆ, ನಾಗಮಣಿ ಕೆಲವು ಗಂಟೆಗಳ ನಂತರ ವಿಜಯವಾಡದ ಕಾರ್ಪೊರೇಟ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಪ್ರಮುಖ ಸುದ್ದಿ :-   ಪ್ರಮುಖ ಮಾವೋವಾದಿ ನಾಯಕ ಸೇರಿ 29 ಮಂದಿ ಮಾವೋವಾದಿಗಳನ್ನು ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಿದ ಭದ್ರತಾ ಪಡೆಗಳು

ಮಹಿಳೆಯರು ರೇಬಿಸ್‌ನಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಸೋಂಕು ಹರಡಿದ್ದು, ಸೂಕ್ತ ಚಿಕಿತ್ಸೆ ದೊರೆಯದಿರುವುದು ಅವರ ಸಾವಿಗೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.
ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಿವೃತ್ತ ಕಂಡಕ್ಟರ್ ಎಸ್.ಭಾಗ್ಯರಾವ್ ಅವರ ಪತ್ನಿ ಕಮಲಾ ಮತ್ತು ನೋಂದಾಯಿತ ವೈದ್ಯಕೀಯ ವೈದ್ಯ (ಆರ್‌ಎಂಪಿ) ಬಿ.ಬಾಬು ರಾವ್ ಅವರ ಪತ್ನಿ ನಾಗಮಣಿ ಅವರಿಗೆ ಒಂದೇ ಬೆಕ್ಕು ಕಚ್ಚಿದೆ.
ಗ್ರಾಮಸ್ಥರ ಪ್ರಕಾರ, ಈ ಬೆಕ್ಕಿಗೆ ಮೊದಲು ಹುಚ್ಚು ನಾಯಿ ಕಚ್ಚಿದ್ದರಿಂದ ರೇಬಿಸ್ ಸೋಂಕಿಗೆ ಒಳಗಾಗಿತ್ತು. ಯಾಕೆಂದರೆ ಇವರಿಬ್ಬರಿಗೆ ಕಡಿದ ನಂತರ ಬೆಕ್ಕು ಕೂಡ ಸತ್ತುಹೋಯಿತು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement