ಬೇಲೆಕೇರಿ ಅದಿರು ಪ್ರಕರಣ: ಸಚಿವ ಆನಂದ ಸಿಂಗ್‌, ಜನಾರ್ದನ ರೆಡ್ಡಿ, ನಾಗೇಂದ್ರಗೆ ಜಾಮೀನು

ಅಂಕೋಲಾ : 2009ರಲ್ಲಿ ತಾಲೂಕಿನ ಬೇಲೆಕೇರಿಯಲ್ಲಿ ಅದಿರು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ, ಪ್ರವಾಸೋದ್ಯಮ, ಪರಿಸರ ಮತ್ತು ಜೀವಶಾಸ್ತ್ರ ಸಚಿವ ಆನಂದ್ ಸಿಂಗ್, ಶಾಸಕ ನಾಗೇಂದ್ರ ಅವರಿಗೆ ಸೋಮವಾರ ಅಂಕೋಲಾ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಜಾಮೀನು ನೀಡಿದೆ.
ಬೇಲೆಕೇರಿಯಲ್ಲಿ 2009-10ರ ಅದಿರು ಪ್ರಕರಣಕ್ಕೆ ಆನಂದ ಸಿಂಗ್ ಅವರ ಮಾಲಿಕತ್ವದ ವೈಷ್ಣವಿ ಮಿನರಲ್ಸ್ ಸೇರಿದಂತೆ ಹಲವು ಅದಿರು ಕಂಪನಿಗಳು ಭಾರೀ ಪ್ರಮಾಣದಲ್ಲಿ ಅದಿರು ಸಾಗಿಸಿದ್ದಾರೆ ಎಂಬ ಆರೋಪದ ಮೇಲೆ ಸಿಬ.ಐ ತನಿಖೆ ನಡೆಸಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಸಿಬಿಐ ತಂಡ ಅಂದು ಶಾಸಕರಾಗಿದ್ದ ಆನಂದ್ ಸಿಂಗ್ , ಜನಾರ್ದನ ರೆಡ್ಡಿ, ನಾಗೇಂದ್ರ ಸೇರಿದಂತೆ ನ್ಯಾಯಾಲಯದ ಎದುರು ಹಾಜರಾಗಿ ಜಾಮೀನು ಕೋರಿದ್ದು 11 ಜನರಲ್ಲಿ 7 ಜನರಿಗೆ ಜಾಮೀನು ನೀಡಿದೆ.

ಅದಿರು ಉದ್ಯಮಕ್ಕೆ ಸಂಬಂದಿಸಿದಂತೆ ಚೆನ್ನೈ ಸಿ.ಬಿ.ಐ ತಂಡದಿಂದ ಪ್ರಕರಣ ದಾಖಲಾಗಿತ್ತು. ಬಳಿಕ ಚೆನ್ನೈ ನಲ್ಲಿ ವಿಚಾರಣೆ ನಡೆಸಲಾಗಿದ್ದು ಅದು ಬೇಲೆಕೇರಿಯಲ್ಲಿ ನಡೆದ ಪ್ರಕರಣ ಆಗಿದ್ದರಿಂದ ಅಂಕೋಲಾ ನ್ಯಾಯಾಲಯಕ್ಕೆ ಪ್ರಕರಣ ವರ್ಗಾವಣೆ ಮಾಡಲಾಗಿತ್ತು. ಸೋಮವಾರ ಅವರು ಅಂಕೋಲಾಕ್ಕೆ ಆಗಮಿಸಿ ನ್ಯಾಯಾಲಯದ ಎದುರು ಹಾಜರಾಗಿದ್ದರು. ಅಂಕೋಲಾ ಜೆಎಂಎಫ್ ಸಿ ನ್ಯಾಯಾಲಯ ಜಾಮೀನು ನೀಡಿದೆ.
ಹಿರಿಯ ನ್ಯಾಯವಾದಿ ನಾಗರಾಜ ನಾಯಕ ಮತ್ತು ವಿನೋದ ಶ್ಯಾನಭಾಗ ಆರೋಪಿಗಳ ಪರ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು

ಪ್ರಮುಖ ಸುದ್ದಿ :-   ಶ್ರೀರಂಗಪಟ್ಟಣ: ಐಸ್‌ ಕ್ರೀಂ ತಿಂದ ಬಳಿಕ ಅವಳಿ ಮಕ್ಕಳ ಸಾವು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement