ಬಜೆಟ್‌ ಮಂಡನೆಗೂ ಬಂತು ಗೋವಿನ ಸಗಣಿ..! ಬಜೆಟ್ ಮಂಡಿಸಲು ಗೋವಿನ ಸಗಣಿಯಿಂದ ತಯಾರಿಸಿದ ಬ್ರೀಫ್‌ಕೇಸ್‌ನೊಂದಿಗೆ ಆಗಮಿಸಿದ ಛತ್ತೀಸ್‌ಗಢ ಸಿಎಂ..!

ರಾಯ್ಪುರ: ಛತ್ತೀಸ್‌ಗಢ ವಿಧಾನಸಭೆಯಲ್ಲಿ ಬುಧವಾರ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ರಾಜ್ಯ ಬಜೆಟ್ ಮಂಡಿಸಲು ಹಸುವಿನ ಸಗಣಿಯಿಂದ ತಯಾರಿಸಿದ ಬ್ರೀಫ್‌ಕೇಸ್‌ನೊಂದಿಗೆ ಆಗಮಿಸಿದರು..!
2022-23ರ ಆರ್ಥಿಕ ವರ್ಷಕ್ಕೆ ರಾಜ್ಯ ಬಜೆಟ್ ಮಂಡಿಸಲು ಭೂಪೇಶ್ ಬಾಘೇಲ್ ಬುಧವಾರ ಛತ್ತೀಸ್‌ಗಢ ವಿಧಾನಸಭೆಯನ್ನು ತಲುಪಿದರು. ಹಸುವಿನ ಸಗಣಿಯಿಂದ ಮಾಡಿದ ಚೌಕಾಕಾರದ ಬ್ರೀಫ್‌ಕೇಸ್‌ ಹಿಡಿದುಕೊಂಡು ಅವನು ಪ್ರವೇಶಿಸಿದರು. ಬಾಘೆಲ್ ತನ್ನ ಕಚೇರಿಯಲ್ಲಿ ಸಹ ಈ ಬ್ರೀಫ್‌ಕೇಸ್‌ನೊಂದಿಗೆ ಪೋಸ್ ಕೊಟ್ಟರು.
ಛತ್ತೀಸ್‌ಗಢ ವಿಧಾನಸಭೆಯ ಬಜೆಟ್ ಅಧಿವೇಶನ ಸೋಮವಾರ ಆರಂಭಗೊಂಡಿದ್ದು, 2022-23ನೇ ಸಾಲಿನ ರಾಜ್ಯದ ಬಜೆಟ್ ಅನ್ನು ಬುಧವಾರ ಸದನದಲ್ಲಿ ಮಂಡಿಸಲಾಯಿತು.

ಇದಕ್ಕೂ ಮುನ್ನ ಭೂಪೇಶ್ ಬಘೇಲ್ ಅವರು ಕೃಷಿಯನ್ನು ಹೆಚ್ಚು ಲಾಭದಾಯಕವಾಗಿಸಲು ಕ್ರಮಗಳನ್ನು ಕೈಗೊಂಡರು ಮತ್ತು ಬಿಡಾಡಿ ದನಗಳ ಸಮಸ್ಯೆ ಪರಿಹರಿಸಲು ಹಾಗೂಸಾವಯವ ಕೃಷಿಯನ್ನು ಉತ್ತೇಜಿಸಿಸಲು ಕ್ರಮಗಳನ್ನು ತೆಗೆದುಕೊಂಡಿದ್ದರು.

2020 ರಲ್ಲಿ, ಕಾಂಗ್ರೆಸ್ ಆಡಳಿತದ ಛತ್ತೀಸ್‌ಗಢ ಸರ್ಕಾರವು ಹಸು ಸಾಕಣೆದಾರರು ಮತ್ತು ರೈತರಿಂದ ಹಸುವಿನ ಸಗಣಿ ಸಂಗ್ರಹಿಸುವುದಾಗಿ ಘೋಷಿಸಿತ್ತು. ಈ ಮೂಲಕ ಛತ್ತೀಸ್‌ಗಢ ದೇಶದ ಮೊದಲ ರಾಜ್ಯವಾಯಿತು.
ಗೋಧನ್ ನ್ಯಾಯ್ ಯೋಜನೆಯು ಜಾನುವಾರು ಮಾಲೀಕರಿಗೆ ಸಗಣಿ ಸಂಗ್ರಹಣೆಯ ಮೂಲಕ ಆದಾಯದ ಬೆಂಬಲವನ್ನು ಒದಗಿಸುವ ಉದ್ದೇಶವನ್ನು ಹೊಂದಿದ್ದು, ರಾಜ್ಯದಲ್ಲಿನ ರಾಸಾಯನಿಕ ಗೊಬ್ಬರಗಳ ಕೊರತೆಯನ್ನು ಪರಿಹರಿಸಲು ಭೂಪೇಶ್ ಬಘೇಲ್ ಸರ್ಕಾರವು ವರ್ಮಿಕಾಂಪೋಸ್ಟ್‌ಗೆ ಒತ್ತು ನೀಡುತ್ತಿದೆ.
ಭೂಪೇಶ್ ಬಘೇಲ್ ಮಾತ್ರವಲ್ಲ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಉನ್ನತ ನಾಯಕರು ಗ್ರಾಮೀಣ ಆರ್ಥಿಕತೆಯನ್ನು ಹೆಚ್ಚಿಸಲು ಗೋವಿನ ಸಗಣಿ ಬಳಕೆಯನ್ನು ಅನೇಕ ಸಲ ಪ್ರಸ್ತಾಪಿಸಿದ್ದಾರೆ.

ಪ್ರಮುಖ ಸುದ್ದಿ :-   ಶಿಂಧೆ ಬಣದ ಶಿವಸೇನೆ ಸೇರಿದ ಬಾಲಿವುಡ್‌ ನಟ ಗೋವಿಂದ : 14 ವರ್ಷಗಳ ವನವಾಸದ ನಂತರ ರಾಜಕೀಯಕ್ಕೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement