ಉತ್ತರ ಪ್ರದೇಶ, ಮಣಿಪುರ, ಉತ್ತರಾಖಂಡ ಬಿಜೆಪಿಗೆ ಮುನ್ನಡೆ, ಪಂಜಾಬಿನಲ್ಲಿ ಭರ್ಜರಿ ಜಯಭೇರಿಯತ್ತ ಆಪ್‌, ಗೋವಾದಲ್ಲಿ ನೆಕ್‌ಟು ನೆಕ್‌

ಉತ್ತರ ಪ್ರದೇಶದ ಸೇರಿದಂತೆ ಐದು ರಾಜ್ಯಗಳಲ್ಲಿ ಮತ ಎಣಿಕೆ ನಡೆಯುತ್ತಿದ್ದು, ಈವರೆಗೆ ಬಂದ ಮಾಹಿತಿ ಪ್ರಕಾರ. ಉತ್ತರ ಪ್ರದೇಶ, ಉತ್ತರಾಖಂಡ ಹಾಗೂ ಮಣಿಪುರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, ಪಂಜಾಬ್‌ನಲ್ಲಿ ಎಎಪಿ ಭಾಋಈ ಮುನ್ನಡೆ ಪಡೆದಿದೆ. ಗೋವಾದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಮಧ್ಯೆ ನೆಕ್‌ ಟು ನೆಕ್‌ ಫೈಟ್‌ ನಡೆಯುತ್ತಿದೆ.
ಈವರೆಗೆ ಬಂದ ವಿವಿಧ ಕ್ಷೇತ್ರಗಳಲ್ಲಿ ಮುನ್ನಡೆಗಳು ನಿಧನಾವಾಗಿ ಬರಲಾರಂಭಿಸಿದ್ದು, ಮಧ್ಯಾಹ್ನದ ಹೊತ್ತಿಗೆ ಬಹುತೇಕ ಪಳಿತಾಂಶಗಳು ಪ್ರಕಟವಾಗಲಿವೆ.
ಉತ್ತರ ಪ್ರದೇಶದಲ್ಲಿ ಬಿಜೆಪಿ 267 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದರೆ, ಸಮಾಜವಾದಿ ಪಕ್ಷ 123 ಕ್ಷೇತ್ರಗಳಲ್ಲಿ ಲೀಡ್ ಪಡೆದುಕೊಂಡಿದೆ.ಬಿಎಸ್‌ಪಿ-9 ಹಾಗೂ ಕಾಂಗ್ರೆಸ್‌-3 ರಲ್ಲಿ ಮುನ್ನಡೆ ಸಾಧಿಸಿದೆ.
ಪಂಜಾಬಿನಲ್ಲಿ 70ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಎಎಪಿ ಮುನ್ನಡೆ ಸಾಧಿಸಿದೆ. ಇನ್ನು ಕಾಂಗ್ರೆಸ್ ಕೇವಲ ಸುಮಾರು 20 ಸ್ಥಾನಗಳಲ್ಲಷ್ಟೇ ಮುನ್ನಡೆ ಸಾಧಿಸುವಲ್ಲಿ ಶಕ್ತವಾಗಿದೆ. ಎಸ್‌ಎಡಿ 10 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ರೆ, ಬಿಜೆಪಿ ಕೇವಲ 3 ಸ್ಥಾನಗಳಲ್ಲಿ ಮುನ್ನಡೆ ದಾಖಲಿಸಿದೆ.
ಉತ್ತರಾಖಂಡದಲ್ಲಿ ಬಿಜೆಪಿ-48, ಕಾಂಗ್ರೆಸ್‌-17 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ, ಇತರ-4 ಸ್ಥಾನಗಳಲ್ಲಿ ಮುಂದಿದ್ದಾರೆ. ಉತ್ತರಾಖಂಡ್ ವಿಧಾನಸಭಾ ಚುನಾವಣೆ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದೆ. ಇಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿಗಳು ಇಬ್ಬರೂ ಕೂಡ ಹಿನ್ನಡೆ ಸಾಧಿಸಿದ್ದಾರೆ ಎಂದು ತಿಳಿದುಬಂದಿದೆ. ಸದ್ಯದ ಮಾಹಿತಿ ಪ್ರಕಾರ ಬಿಜೆಪಿಯ ಪುಷ್ಕರ್ ಸಿಂಗ್ ಧಾಮಿ ಖಾತಿಮಾದಿಂದ ಹಾಗೂ ಕಾಂಗ್ರೆಸ್​ನ ಹರೀಶ್ ರಾವತ್ ಲಾಲ್​ಕುವಾದಿಂದ ಹಿನ್ನಡೆ ಸಾಧಿಸಿದ್ದಾರೆ
ಮಣಿಪುರದಲ್ಲಿ ಬಿಜೆಪಿ-25, ಕಾಂಗ್ರೆಸ್‌-12, ಎನ್ಪಿಪಿ-10 ಹಾಗೂ ಇತರರು-11 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಗೋವಾದಲ್ಲಿ 19ರಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದರೆ ಕಾಂಗ್ರೆಸ್‌-14 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ಇದು ಮೊದಲಿನ ಮುನ್ನಡೆಯಾಗಿದ್ದು, ಬುತೇಕ ಸ್ಪಷ್ಟಚಿತ್ರಣ ಮಧ್ಯಾಹ್ನ 12ರ ಸುಮಾರಿಗೆ ಸಿಗಬಹುದಾಗಿದೆ. ಬಹುತೇಕ ಫಲಿತಾಂಶಗಳು ಮತಗಟ್ಟೆ ಮಸೀಕ್ಷೆಗಳು ತೋರಿಸಿದಂತೆಯೇ ಆಗುತ್ತಿವೆ.

ಓದಿರಿ :-   ಕಾಶ್ಮೀರ ಟಿವಿ ಕಲಾವಿದೆ ಹತ್ಯೆಯಲ್ಲಿ ಭಾಗಿಯಾಗಿದ್ದ ಇಬ್ಬರು ಲಷ್ಕರ್ ಉಗ್ರರ ಹತ್ಯೆ: ಪೊಲೀಸರು

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

advertisement

ನಿಮ್ಮ ಕಾಮೆಂಟ್ ಬರೆಯಿರಿ