ಮಾರಿಯುಪೋಲ್‌ನ ಪೂರ್ವದ ಪ್ರದೇಶ ವಶಪಡಿಸಿಕೊಂಡ ರಷ್ಯಾದ ಪಡೆಗಳು : ಉಕ್ರೇನ್‌ ರಕ್ಷಣಾ ಸಚಿವಾಲಯ

ಕೀವ್‌: ಮಾರಿಯುಪೋಲ್‌ನ ಪೂರ್ವ ಹೊರವಲಯದಲ್ಲಿರುವ ಪ್ರದೇಶವನ್ನು ರಷ್ಯಾದ ಪಡೆಗಳು ವಶಪಡಿಸಿಕೊಂಡಿವೆ ಎಂದು ಉಕ್ರೇನ್ ರಕ್ಷಣಾ ಸಚಿವಾಲಯ ಶನಿವಾರ ತಿಳಿಸಿದೆ.
ಫೆಬ್ರವರಿ 24 ರಂದು ಉಕ್ರೇನ್ ಆಕ್ರಮಣದ ಆರಂಭದಿಂದಲೂ 4,30,000 ನಿವಾಸಿಗಳಿಗೆ ನೆಲೆಯಾಗಿರುವ ಆಯಕಟ್ಟಿನ ಬಂದರು ನಗರವಾದ ಮಾರಿಯುಪೋಲ್‌ ನಿಯಂತ್ರಣವು ಈಗ ರಷ್ಯಾದ ಆದ್ಯತೆಯಾಗಿದೆ.
ಮರಿಯುಪೋಲ್ ನಿವಾಸಿಗಳು ಒಂದು ವಾರದಿಂದ ವಿದ್ಯುತ್, ಗ್ಯಾಸ್ ಅಥವಾ ನೀರು ಇಲ್ಲದೆ ವಾಸಿಸುತ್ತಿದ್ದಾರೆ. ಮರಿಯುಪೋಲ್‌ನ ಮುತ್ತಿಗೆ ಈಗಾಗಲೇ 1,582 ಜನರನ್ನು ಬಲಿ ತೆಗೆದುಕೊಂಡಿದೆ ಎಂದು ಮಾರಿಯುಪೋಲ್‌ನ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ನಗರದಲ್ಲಿ ಮಾನವೀಯ ದುರಂತವಿದ್ದು, ಸತ್ತವರ ಅಂತ್ಯಸಂಸ್ಕಾರವೂ ನಡೆಯುತ್ತಿಲ್ಲ’ ಎಂದು ಮರಿಯುಪೋಲ್ ಮೇಯರ್ ಕಚೇರಿ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಬುಧವಾರ, ಉಕ್ರೇನ್ ಸರ್ಕಾರವು ಮಾರಿಯುಪೋಲ್‌ನಲ್ಲಿನ ಹೆರಿಗೆ ಆಸ್ಪತ್ರೆಯ ಮೇಲೆ ರಷ್ಯಾ ಶೆಲ್ ದಾಳಿ ಮಾಡಿದೆ ಎಂದು ಆರೋಪಿಸಿತು, ಇದರ ಪರಿಣಾಮವಾಗಿ ಮೂವರು ಮೃತಪಟ್ಟಿದ್ದಾರೆ.
ವಿಶ್ವಸಂಸ್ಥೆಯ ಉಕ್ರೇನ್‌ನ ಬಿಕ್ಕಟ್ಟು ಸಂಯೋಜಕ ಅಮೀನ್ ಅವದ್, ಅಸೋಸಿಯೇಟೆಡ್ ಪ್ರೆಸ್‌ಗೆ ಸಹಾಯ ಬೆಂಗಾವಲು ಪಡೆಗಳು ಮಾರಿಯುಪೋಲ್‌ಗೆ ಪ್ರವೇಶಿಸಲು ಅತ್ಯಂತ ಕಷ್ಟಕರವಾಗಿದೆ ಎಂದು ಹೇಳಿದ್ದಾರೆ. ನೆರವು ಸಾಗಿಸುವ ಇಂತಹ ಅನೇಕ ಬೆಂಗಾವಲುಗಳು ರಷ್ಯಾದ ಶೆಲ್‌ಗಳಿಂದ ಗುರಿಯಾಗಿವೆ.
ಶನಿವಾರದ ತನ್ನ ಹೇಳಿಕೆಯಲ್ಲಿ, ಉಕ್ರೇನ್‌ನ ರಕ್ಷಣಾ ಸಚಿವಾಲಯವು “ಪೋಲಿಸ್ಯಾ, ಸಿವರ್ಸ್ಕಿ ಮತ್ತು ಪಿವ್ಡೆನ್ನೊಬುಜ್ಸ್ಕಿ ದಿಕ್ಕುಗಳಲ್ಲಿ” ರಷ್ಯಾದ ಪಡೆಗಳು “ದೊಡ್ಡ ನಷ್ಟ” ಅನುಭವಿಸಿದೆ ಎಂದು ಹೇಳಿದೆ.
ವರದಿಗಳ ಪ್ರಕಾರ, ಉಕ್ರೇನಿಯನ್ ನಗರಗಳಾದ ಕೀವ್, ಖಾರ್ಕಿವ್, ಚೆರ್ನಿಹಿವ್, ಸುಮಿ ಮತ್ತು ಮರಿಯುಪೋಲ್ ರಷ್ಯಾದ ಭಾರೀ ಶೆಲ್ ದಾಳಿಯ ನಡೆಯುತ್ತಿದೆ.

ಓದಿರಿ :-   1955ರ ಮರ್ಸಿಡಿಸ್-ಬೆಂಜ್ 300 SLR ಕಾರು ಮಾರಾಟವಾದ ದುಬಾರಿ ಕಾರು...ಮೊತ್ತ ಕೇಳಿದರೆ ಬೆಚ್ಚಿ ಬೀಳ್ತೀರಾ..!

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ