ಸೆಮಿಕಂಡಕ್ಟರ್ ಅವಲಂಬಿಸಿದ ಉದ್ಯಮಗಳಿಗೆ ಮತ್ತಷ್ಟು ಸಂಕಷ್ಟ

ಕೋವಿಡ್-19ನಿಂದ ನಲುಗಿಹೋಗಿದ್ದ ಸೆಮಿಕಂಡಕ್ಟರ್ ಉದ್ಯಮಕ್ಕೆ ರಷ್ಯಾ-ಉಕ್ರೇನ್ ಯುದ್ಧ ಮತ್ತಷ್ಟು ಪೆಟ್ಟು ನೀಡಿದೆ.

ಇತ್ತೀಚಿನ ದಿನಗಳಲ್ಲಿ ದಿನಬಳಕೆಯ ಬಹುತೇಕ ಉಪಕರಣಗಳಲ್ಲಿ ಸೆಮಿಕಂಡಕ್ಟರ್ ಬಳಕೆಯಾಗುತ್ತಿದೆ. ವಾಹನಗಳು, ವಾಶಿಂಗ್ ಮಶಿನ್, ಕಂಪ್ಯೂಟರ್, ಲ್ಯಾಪ್ ಟಾಪ್, ಮೊಬೈಲ್… ಹೀಗೆ ಅನೇಕ ಉಪಕರಣಗಳಿಗೆ ಸೆಮಿಕಂಡಕ್ಟರ್ ಬೇಕು. ಕೋವಿಡ್-19 ಸಮಯದಲ್ಲಿ ಸೆಮಿಕಂಡಕ್ಟರ್ ಉದ್ಯಮಕ್ಕೆ ಭಾರೀ ಹೊಡೆತ ಬಿತ್ತು. ಭಾರಿ ಪ್ರಮಾಣದಲ್ಲಿ ಸೆಮಿ ಕಂಡಕ್ಟರ್ ಕೊರತೆ ಉಂಟಾಗಿ, ಹಲವು ಕ್ಷೇತ್ರಗಳಲ್ಲಿ ಉತ್ಪಾದನೆಗೆ ತೊಡಕುಂಟಾಗಿತ್ತು. 2022ರ ಮಧ್ಯಂತರದಲ್ಲಿ ಈ ಕೊರತೆ ನೀಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಈಗ ರಷ್ಯಾ-ಉಕ್ರೇನ್ ಯುದ್ಧದಿಂದ ಉತ್ಪಾದನೆ ಮೇಲೆ ಭಾರಿ ಹೊಡೆತ ಬಿದ್ದಿದೆ.

ರಷ್ಯಾ, ಯುಕ್ರೇನ್, ತೈವಾನ್, ಚೀನಾ, ದಕ್ಷಿಣ ಕೊರಿಯಾ ಪ್ರಮುಖ ಸೆಮಿಕಂಡಕ್ಟರ್ ಉತ್ಪಾದಕ ದೇಶಗಳು. ಇಡೀ ವಿಶ್ವಕ್ಕೆ ಈ ದೇಶಗಳಿಂದ ದೊಡ್ಡ ಪ್ರಮಾಣದಲ್ಲಿ ಸೆಮಿಕಂಡಕ್ಟರ್  ಪೂರೈಕೆಯಾಗುತ್ತದೆ. ಉಕ್ರೇನ್ ಸೆಮಿಕಂಡಕ್ಟರ್ ಗೆ ಬೇಕಾದ ಕಚ್ಚಾವಸ್ತುಗಳನ್ನು ದೊಡ್ಡ ಪ್ರಮಾಣದಲ್ಲಿ ಪೂರೈಕೆ ಮಾಡುತ್ತಿತ್ತು. ಮೆಮರಿ ಮತ್ತು ಸೆನ್ಸಾರ್ ಚಿಪ್ ಗಳಲ್ಲಿ ಬಳಸುವ ಸೆಮಿಕಂಡಕ್ಟರ್ ಗಳು ರಷ್ಯಾದಲ್ಲಿ ಉತ್ಪಾದನೆಯಾಗುತ್ತವೆ. ಜಗತ್ತಿನ ಶೇ. 45ರಷ್ಟು ಪೂರೈಕೆ ಇಲ್ಲಿಂದಲೇ ಆಗುತ್ತಿದೆ. ಹೀಗಾಗಿ ಸೆಮಿಕಂಡಕ್ಟರ್ ಅವಲಂಬಿಸಿದ ಉದ್ಯಮಗಳ ಸಂಕಷ್ಟ ಮತ್ತಷ್ಟು ಕಾಲ ಮುಂದುವರಿಯುವ ಸಾಧ್ಯತೆ ಇದೆ. ಜತೆಗೆ ಬೆಲೆಯೂ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement