ಮಣಿಪುರದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಜೆಡಿಯು ಬೆಂಬಲ

ಇಂಫಾಲ: ಮಣಿಪುರದ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಗೆಲುವು ಸಾಧಿಸಿರುವ ಬಿಜೆಪಿಗೆ ಜೆಡಿಯು ಬೆಂಬಲ ಘೋಷಿಸಿದೆ.
ನಾಗಾ ಪೀಪಲ್ಸ್ ಫ್ರಂಟ್ (ಎನ್‌ಪಿಎಫ್) ಜೊತೆ ಬಿಜೆಪಿ ಮೈತ್ರಿಯನ್ನು ಮುಂದುವರೆಸಲಿದೆ ಎಂದು ಹಾಲಿ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ತಿಳಿಸಿದ್ದಾರೆ.

ಈ ನಡುವೆ ಮಣಿಪುರದಲ್ಲಿ ಶೇ 10.77ರಷ್ಟು ಮತ ಗಳಿಕೆ ಮೂಲಕ 6 ಸ್ಥಾನ ಗೆದ್ದಿರುವ ಜನತಾ ದಳ(ಸಂಯುಕ್ತ) ಪಕ್ಷವು ಈಗ ಬಿಜೆಪಿಗೆ ಬೆಂಬಲ ಘೋಷಿಸಿದೆ. ಈಗಾಗಲೇ ಎನ್ ಪಿ ಎಫ್ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಬಿರೇನ್ ಸಿಂಗ್, ಮುಂದಿನ ಸರ್ಕಾರದಲ್ಲಿ ಎನ್‌ಪಿಪಿ ನಮ್ಮೊಂದಿಗೆ ಇರುತ್ತದೆ ಎಂದು ನಾನು ಭಾವಿಸುವುದಿಲ್ಲ ಎಂದು ಹೇಳಿದ್ದಾರೆ. ಜೆಡಿಯು ಶಾಸಕರಿಗೆ ಸಚಿವರಾಗುವ ಅವಕಾಶ ಲಭ್ಯವಾಗಲಿವೆ.
ನಿತೀಶ್ ಕುಮಾರ್ ಅವರ ಜನತಾ ದಳ (ಯುನೈಟೆಡ್) 22 ವರ್ಷಗಳ ನಂತರ ಮಣಿಪುರದಲ್ಲಿ ತನ್ನ ಮೊದಲ ಗೆಲುವು ದಾಖಲಿಸಿದೆ. ಎನ್‌ಪಿಎಫ್‌ ಹಾಗೂ ಎನ್‌ಪಿಪಿ ಎರಡೂ ಪಕ್ಷಗಳು ಬಿಜೆಪಿ ನೇತೃತ್ವದ ಪ್ರಸ್ತುತ ಆಡಳಿತ ಮೈತ್ರಿಕೂಟದ ಭಾಗವಾಗಿದೆ. ಆದಾಗ್ಯೂ, ಎರಡೂ ಪಕ್ಷಗಳು ಬಿಜೆಪಿಯೊಂದಿಗೆ ಯಾವುದೇ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿಲ್ಲ. ಎಲ್ಲಾ 60 ಸ್ಥಾನಗಳಲ್ಲಿ ಏಕಾಂಗಿಯಾಗಲು ಸ್ಪರ್ಧಿಸಿತ್ತು.
ಜೆಡಿಯು ಬೆಂಬಲ ಪತ್ರ:

ಓದಿರಿ :-   ಕೃಷ್ಣ ಜನ್ಮಭೂಮಿ ಪ್ರಕರಣ: ಮಸೀದಿ ತೆರವು ಕೋರಿದ್ದ ಅರ್ಜಿ ವಿಚಾರಣೆ ಯೋಗ್ಯ ಎಂದ ಮಥುರಾ ಜಿಲ್ಲಾ ನ್ಯಾಯಾಲಯ

ಮಣಿಪುರದ ಜನರ ಹಿತದೃಷ್ಟಿಯಿಂದ ಸರ್ಕಾರ ರಚನೆಯಲ್ಲಿ ಬಿಜೆಪಿಗೆ ಬೆಂಬಲ ನೀಡಲು ಜೆಡಿಯು ನಿರ್ಧರಿಸಿದೆ ಎಂದು ಜೆಡಿಯು ಶಾಸಕರು ಪತ್ರದಲ್ಲಿ ಬರೆದಿದ್ದಾರೆ. “ಪಕ್ಷದಲ್ಲಿ ಬಂದ ಜನಾದೇಶವನ್ನು ಗೌರವಿಸಲು ಮತ್ತು ಜನರ ಭರವಸೆ ಮತ್ತು ಆಕಾಂಕ್ಷೆಗಳನ್ನು ಈಡೇರಿಸಲು ಜೆಡಿಯು ಬಿಜೆಪಿಗೆ ಮನವಿ ಮಾಡಲು ಬಯಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಇದೇ ವೇಳೆ ರಾಜ್ಯ ವಿಧಾನಸಭೆಯಲ್ಲಿ ಪಕ್ಷವನ್ನು ಪ್ರತಿನಿಧಿಸಲು ಜೆಡಿಯು ಖುಮುಚ್ಚಮ್ ಜೋಯ್ಕಿಸನ್ ಸಿಂಗ್ ಅವರನ್ನು ತಮ್ಮ ನಾಯಕರನ್ನಾಗಿ ಆಯ್ಕೆ ಮಾಡಿದೆ.
ಏತನ್ಮಧ್ಯೆ, ಮಣಿಪುರದಲ್ಲಿ ಕಾಂಗ್ರೆಸ್ ತನ್ನ ಅತ್ಯಂತ ಕಳಪೆ ಪ್ರದರ್ಶನವನ್ನು ದಾಖಲಿಸಿದೆ. 2017 ರ ಚುನಾವಣೆಯಲ್ಲಿ ಏಕೈಕ ದೊಡ್ಡ ಪಕ್ಷದ ಸ್ಥಾನಮಾನವನ್ನು ಹೊಂದಿದ್ದ ದೇಶದ ಪುರಾತನ ಪಕ್ಷ 2022ರ ಚುನಾವಣೆಯಲ್ಲಿ ಕೇವಲ 5 ಸ್ಥಾನಗಳಿಗೆ ಕುಸಿದಿದೆ. ಈ ಹಿಂದಿನ ಚುನಾವಣೆಗಳಿಗಿಂತ 17 ಸ್ಥಾನಗಳನ್ನು ಕಡಿಮೆ ಗಳಿಸಿದೆ, ಆದರೂ ಮೂರು ಬಾರಿ ಮಾಜಿ ಮುಖ್ಯಮಂತ್ರಿ ಒಕ್ರಾಮ್ ಇಬೋಬಿ ಸಿಂಗ್ ಮತ್ತು ಅವರ ಮಗ ಓ ಸುರ್ಜಾಕುಮಾರ್ ಕ್ರಮವಾಗಿ ತೌಬಲ್ ಮತ್ತು ಖಂಗಾಬೋ ಕ್ಷೇತ್ರಗಳಿಂದ ಜಯಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
60 ಸ್ಥಾನಗಳ ವಿಧಾನಸಭೆಯಲ್ಲಿ ಬಿಜೆಪಿ 32 ಸ್ಥಾನ, ಜನತಾ ದಳ (ಯುನೈಟೆಡ್) 6, ಕಾಂಗ್ರೆಸ್ 5, ಎನ್ ಪಿ ಪಿ 7, ಎನ್ ಪಿಎಫ್ 5, ಕುಕಿ ಪೀಪಲ್ಸ್ ಮೈತ್ರಿಕೂಟ 2 ಸ್ಥಾನ ಗೆದ್ದುಕೊಂಡಿವೆ.

ಓದಿರಿ :-   ರೋಡ್ ರೇಜ್ ಪ್ರಕರಣ: ನವಜೋತ್ ಸಿಂಗ್ ಸಿಧುಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದ ಸುಪ್ರೀಂ ಕೋರ್ಟ್

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

advertisement

ನಿಮ್ಮ ಕಾಮೆಂಟ್ ಬರೆಯಿರಿ