ರೈತನ ಮಗನ ಹೆಸರಿನ ಬ್ಯಾಂಕ್‌ ಖಾತೆಯಿಂದ 290 ಕೋಟಿ ರೂ. ವ್ಯವಹಾರ!. ಐಟಿ ಇಲಾಖೆಯಿಂದ ಬಂದ ನೋಟಿಸ್ ನೋಡಿ ಶಾಕ್‌..!

ಖಾಂಡ್ವಾ (ಮಧ್ಯಪ್ರದೇಶ): ಖಾಂಡ್ವಾ ಜಿಲ್ಲೆಯ ಚಿಕ್ಕ ದೇಶಗಾಂವ ಗ್ರಾಮದ ರೈತನ ಮಗನಾದ ಪ್ರವೀಣ ರಾಥೋಡ್ ಅವರು ತಮ್ಮ ಬ್ಯಾಂಕ್ ಖಾತೆಯಿಂದ ಸುಮಾರು 290 ಕೋಟಿ ರೂ.ಗಳ ವ್ಯವಹಾರ ನಡೆಸಿರುವ ಕುರಿತು ಆದಾಯ ತೆರಿಗೆ ಇಲಾಖೆಯಿಂದ ಶೋಕಾಸ್ ನೋಟಿಸ್ ಪಡೆದ ನಂತರ ಶಾಕ್‌ ಆಗಿದ್ದಾರೆ..!
2,90,39,36,817 ರೂ.ಗಳ ವ್ಯವಹಾರವನ್ನು ತಮ್ಮ ಬ್ಯಾಂಕ್‌ ಖಾತೆಯಿಂದ ಮಾಡಿರುವುದಕ್ಕೆ ಮಾರ್ಚ್ 15 ರಂದು ಆದಾಯ ತೆರಿಗೆ ಅಧಿಕಾರಿಗಳ ಮುಂದೆ ಹಾಜರಾಗುವಂತೆ ಇಲಾಖೆ ಸೂಚಿಸಿದೆ ಎಂದು ಫ್ರೀ ಪ್ರೆಸ್‌ ಜರ್ನಲ್‌.ಕಾಮ್‌ ವರದಿ ಮಾಡಿದೆ.

ವರದಿ ಪ್ರಕಾರ, ಇಷ್ಟೊಂದು ಮೊತ್ತದ ವಹಿವಾಟಿನ ಬಗ್ಗೆ ಸುಳಿವಿಲ್ಲದ ಕಾರಣ ಪ್ರವೀಣ ಅವರು ನೋಟಿಸ್‌ ನೋಡಿ ಶಾಕ್‌ ಆಗಿದ್ದಾರೆ. ಈಗ ಅವರು ಆದಾಯ ತೆರಿಗೆ ಇಲಾಖೆ ಕಚೇರಿಯಿಂದ ಹಿಡಿದು ಸ್ಥಳೀಯ ಪೊಲೀಸರ ವರೆಗೂ ಓಡುತ್ತಿದ್ದಾರೆ. ಇತ್ತೀಚೆಗೆ ಅವರು ಇಂದೋರ್ ಪೊಲೀಸ್ ಕಮಿಷನರ್ ಕಚೇರಿಗೂ ಭೇಟಿ ನೀಡಿದ್ದರು.
ಆದಾಯ ತೆರಿಗೆ ಇಲಾಖೆ ನೋಟಿಸ್ ಪ್ರಕಾರ, ಈ ಮೊತ್ತವನ್ನು ಮುಂಬೈನ ಖಾಸಗಿ ಬ್ಯಾಂಕ್‌ನ 9130200XXXXX993 ಮತ್ತು 9130200 XXXXX409 ಎಂಬ ಎರಡು ಚಾಲ್ತಿ ಖಾತೆಗಳಲ್ಲಿ ವಹಿವಾಟು ಮಾಡಲಾಗಿದೆ ಎಂದು ತಿಳಿಸಲಾಗಿದೆ. ಸಣ್ಣ ರೈತನ ಮಗನಾಗಿರುವ ಪ್ರವೀಣ ಅವರು ತಾವು ಏಕೆ ಈ ತೊಂದರೆ ಎದುರಿಸುತ್ತಿದ್ದೇನೆ ಎಂಬುದು ತನಗೆ ಅರ್ಥವಾಗುತ್ತಿಲ್ಲ ಎಂದು ಹೇಳಿದ್ದಾರೆ.

ಓದಿರಿ :-   ನಾಳೆ ಭಾರತದ ಅತಿದೊಡ್ಡ ಡ್ರೋನ್‌ ಫೆಸ್ಟಿವಲ್‌ ಉದ್ಘಾಟನೆ ಮಾಡಲಿರುವ ಪ್ರಧಾನಿ ಮೋದಿ

ಮಾರ್ಚ್-ಏಪ್ರಿಲ್ 2021 ರಲ್ಲಿ ಆದಾಯ ತೆರಿಗೆ ಇಲಾಖೆಯಿಂದ ಮೊದಲ ನೋಟೀಸ್ ಸಿಕ್ಕಿತು ಮತ್ತು ಆ ಸಮಯದಲ್ಲಿ ಅದು ತಮಾಷೆ ಎಂದು ತಾನು ಭಾವಿಸಿದ್ದೆ, ಆದರೆ ಆರು ತಿಂಗಳ ನಂತರ ನವೆಂಬರ್ 2021 ರಲ್ಲಿ, 290 ಕೋಟಿ ರೂಪಾಯಿಗಳ ವ್ಯವಹಾರವನ್ನು ಉಲ್ಲೇಖಿಸಿ ಎರಡನೇ ನೋಟಿಸ್ ತನಗೆ ಬಂತು ಎಂದು ಪ್ರವೀಣ್ ಹೇಳಿದ್ದಾರೆ. ಮುಂಬೈನಲ್ಲಿ ಅವರ ಹೆಸರಿನಲ್ಲಿ ಎರಡು ಬ್ಯಾಂಕ್ ಖಾತೆಗಳು ಕಾರ್ಯನಿರ್ವಹಿಸುತ್ತಿವೆ. ಏನು ನಡೆಯುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ವಿಫಲವಾದ ಅವರು ಖಾಂಡ್ವಾದ ಆದಾಯ ತೆರಿಗೆ ಕಚೇರಿಗೆ ಧಾವಿಸಿ ಅಲ್ಲಿದ್ದ ಅಧಿಕಾರಿಗಳ ಬಳಿ ಎಲ್ಲವನ್ನೂ ವಿವರಿಸಿದ್ದಾರೆ.

ನೋಟಿಸ್‌ನಲ್ಲಿ ಹೇಳಿದ ಬ್ಯಾಂಕ್‌ನಲ್ಲಿ ಅವರು ಖಾತೆಯನ್ನೇ ಹೊಂದಿಲ್ಲ ಹಾಗೂ ಅವರು ಮುಂಬೈಗೂ ಹೋಗಿಲ್ಲ, ಆದ್ದರಿಂದ ಅವರು ಈ ವಹಿವಾಟುಗಳನ್ನು ಮಾಡುವ ಪ್ರಶ್ನೆಯೇ ಇಲ್ಲ ಎಂದು ಅಧಿಕಾರಿಗಳಿಗೆ ವಿವರಣೆ ನೀಡಿದ್ದಾರೆ. ನಂತರ ಈ ಬಗ್ಗೆ ಪೊಲೀಸ್ ದೂರು ನೀಡುವಂತೆ ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ಖಾಂಡ್ವಾ ಪೊಲೀಸರು ವಿಷಯ ಮುಂಬೈಗೆ ಸಂಬಂಧಿಸಿರುವುದರಿಂದ ಈ ವಿಷಯದಲ್ಲಿ ಏನೂ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ ಎಂದು ಪ್ರವೀಣ ಹೇಳಿದ್ದಾರೆ.

ಪೊಲೀಸರಿಂದ ಯಾವುದೇ ಸಹಾಯವನ್ನು ಪಡೆಯಲು ವಿಫಲವಾದ ಪ್ರವೀಣ, ತನ್ನ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕ್ ಖಾತೆಗಳ ಹೆಚ್ಚಿನ ವಿವರಗಳನ್ನು ಪಡೆಯಲು ಖಾಂಡ್ವಾದ ಬ್ಯಾಂಕ್ ಕಚೇರಿಗೆ ಭೇಟಿ ನೀಡಿದ್ದಾನೆ. ಇಲ್ಲಿ, ಈ ಖಾತೆಗಳನ್ನು 2013 ರಲ್ಲಿ ತೆರೆಯಲಾಗಿದೆ ಮತ್ತು ಅದರಲ್ಲಿ ಕೆಲವು ವ್ಯವಹಾರಗಳನ್ನು ಮಾಡಿದ ನಂತರ ಕೆಲವು ಸಮಯದ ನಂತರ ಮುಚ್ಚಲಾಗಿದೆ ಎಂದು ಅವರು ಬ್ಯಾಂಕಿನವರು ಅವರಿಗೆ ಮಾಹಿತಿ ನೀಡಿದ್ದಾರೆ. ಈ ಖಾತೆಗೆ ಪ್ರವೀಣ್‌ ಅವರ ಪ್ಯಾನ್‌ ಕಾರ್ಡ್‌ ಅಟ್ಯಾಚ್‌ ಆಗಿದ್ದು, ನಂತರ ಖಾಂಡ್ವಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಗೆ ತೆರಳಿದ ಅವರು, ಈ ಕುರಿತು ದೂರು ದಾಖಲಿಸುವಂತೆ ಕೋರಿದ್ದಾರೆ.
ಅವರ ಸಂಕಟವನ್ನು ಹೆಚ್ಚಿಸುವ ಸಲುವಾಗಿ, ಲಾಕ್‌ಡೌನ್ ಸಮಯದಲ್ಲಿ, ಅವರ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿತು, ಅದರಲ್ಲಿ ಅವರ ಎಲ್ಲಾ ವಸ್ತುಗಳು ಸುಟ್ಟುಹೋಗಿವೆ. ಅವರು ತಮ್ಮ ದಾಖಲೆಗಳನ್ನು ಎಲ್ಲಿ ಸಲ್ಲಿಸಿದ್ದಾರೆಂದು ಅವರಿಗೆ ನೆನಪಿಲ್ಲ. ಆದರೆ ನೋಟಿಸ್‌ ಬಂದ ಬ್ಯಾಂಕ್‌ನಲ್ಲಿ ಅವರು ಖಾತೆ ತೆರೆದಿಲ್ಲ. ಇವರ ಹೆಸರಿನಲ್ಲಿ ಯಾರೋ ವಂಚನೆಯಿಂದ ಖಾತೆ ತೆರೆದು ಇಷ್ಟು ದೊಡ್ಡ ಮೊತ್ತದ ವಹಿವಾಟು ನಡೆಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ತನಗೆ ನ್ಯಾಯ ದೊರಕಿಸಿಕೊಡುವಂತೆ ಅವರು ಪೊಲೀಸರಿಗೆ ಮನವಿ ಮಾಡಿದ್ದಾರೆ.

ಓದಿರಿ :-   ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಮಾಜಿ ಸಿಎಂ ಓಂ ಪ್ರಕಾಶ್ ಚೌತಾಲಾಗೆ 4 ವರ್ಷ ಜೈಲು ಶಿಕ್ಷೆ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

advertisement

ನಿಮ್ಮ ಕಾಮೆಂಟ್ ಬರೆಯಿರಿ