ಕೀವ್‌ಗೆ ಹೊರಟ ಮೂರು ಪೂರ್ವ ಯುರೋಪಿಯನ್ ಪ್ರಧಾನ ಮಂತ್ರಿಗಳು…!

ಮಾಸ್ಕೋ(ರಷ್ಯಾ): ರಷ್ಯಾದ ಆಕ್ರಮಣ ಮುಂದುವರೆದಿದ್ದು, ಉಕ್ರೇನ್ ಸ್ಥಿತಿ ಗಂಭೀರವಾಗುತ್ತ ಸಾಗಿದೆ. ಹೀಗಾಗಿ ಯೂರೋಪಿನ ಮೂರು ದೇಶಗಳ ಪ್ರಧಾನಿ ಮಂತ್ರಿಗಳು ಉಕ್ರೇನ್​​ಗೆ ಆಗಮಿಸಿದ್ದು, ರಾಜಧಾನಿ ಕೀವ್​ನತ್ತ ತೆರಳಿದ್ದಾರೆ ಎಂದು ಪೋಲೆಂಡ್ ಪ್ರಧಾನಮಂತ್ರಿಗಳ ಕಚೇರಿ ಟ್ವೀಟ್ ಮೂಲಕ ಮಾಹಿತಿ ನೀಡಿದೆ.
ಪೋಲೆಂಡ್ ಪ್ರಧಾನಿ ಮಾಟ್ಯೂಸ್ಜ್ ಮೊರಾವಿಕಿ ಮತ್ತು ಉಪ ಪ್ರಧಾನಿ ಜರೋಸ್ಲಾವ್ ಕಾಸಿನ್ಸ್ಕಿ, ಜೆಕ್ ರಾಷ್ಟ್ರದ ಪ್ರಧಾನಿ ಪೆಟ್ರ್ ಫಿಯಾಲಾ ಮತ್ತು ಸ್ಲೊವೇನಿಯಾದ ಪ್ರಧಾನಿ ಜಾನೆಜ್ ಜಾನ್ಸಾ ಅವರು ಉಕ್ರೇನ್‌ಗೆ ಆಗಮಿಸಿ ಕೀವ್‌ಗೆ ತೆರಳಿದ್ದಾರೆ ಎಂದು ಪೋಲೆಂಡ್ ಮಾಹಿತಿ ನೀಡಿದೆ.
ವ್‌ನಲ್ಲಿ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತು ಪ್ರಧಾನಿ ಡೆನಿಸ್ ಶ್ಮಿಹಾಲ್ ಅವರನ್ನು ಭೇಟಿ ಮಾಡಲು ಈ ನಾಯಕರು ಸಿದ್ಧರಾಗಿದ್ದಾರೆ. ಉಕ್ರೇನ್‌ನ ಸಾರ್ವಭೌಮತ್ವ ಮತ್ತು ಸ್ವಾತಂತ್ರ್ಯಕ್ಕೆ ಯುರೋಪಿಯನ್ ಒಕ್ಕೂಟ ನಿಸ್ಸಂದೇಹವಾಗಿ ಬೆಂಬಲ ನೀಡುವುದು ಮತ್ತು ಹಲವಾರು ಕ್ರಮಗಳನ್ನು ಕೈಗೊಳ್ಳುವುದು ಸೇರಿದಂತೆ ಹಲವಾರು ವಿಚಾರಗಳ ಬಗ್ಗೆ ಚರ್ಚಿಸಲಾಗುತ್ತದೆ.
ಪೋಲೆಂಡ್​ ಸರ್ಕಾರದ ವಕ್ತಾರ ಪಿಯೋಟರ್ ಮುಲ್ಲರ್ ಪ್ರಕಾರ, ಶಾಂತಿಗಾಗಿ ಉಕ್ರೇನ್​ಗೆ ಬೆಂಬಲ ವ್ಯಕ್ತಪಡಿಸುವ ಸಲುವಾಗಿ ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಚಾರ್ಲ್ಸ್ ಮೈಕೆಲ್ ಮತ್ತು ಯುರೋಪಿಯನ್ ಕಮಿಷನ್ ಅಧ್ಯಕ್ಷ ಉರ್ಸುಲಾ ವಾನ್ ಡೆರ್ ಲೇಯೆನ್ ಅವರೊಂದಿಗೆ ಸಮಾಲೋಚಿಸಿದ ನಂತರ ಉಕ್ರೇನ್ ಅಧ್ಯಕ್ಷ ಮತ್ತು ಪ್ರಧಾನಮಂತ್ರಿ ಜೊತೆಗೆ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.ಸುಮಾರು ಒಂದು ಗಂಟೆಯ ಹಿಂದೆ, ಪ್ರಧಾನಿ, ಉಪ ಪ್ರಧಾನಮಂತ್ರಿ ಜರೋಸ್ಲಾವ್ ಕಾಸಿನ್ಸ್ಕಿ ಮತ್ತು ಜೆಕ್ ರಿಪಬ್ಲಿಕ್ ಮತ್ತು ಸ್ಲೊವೇನಿಯಾದ ಪ್ರಧಾನ ಮಂತ್ರಿಗಳಿರುವ ರೈಲು ಪೋಲೆಂಡ್-ಉಕ್ರೇನಿಯನ್ ಗಡಿಯನ್ನು ದಾಟಿದೆ ಎಂದು ಪೋಲೆಂಡ್ ಪ್ರಧಾನಮಂತ್ರಿಗಳ ಕಚೇರಿ ಟ್ವೀಟ್ ಮಾಡಿದೆ ಎಂದು ಆರ್‌ಟಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕೀ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement