ಇಸ್ರೇಲ್​ನಲ್ಲಿ ಎರಡು ಹೊಸ ಕೊವಿಡ್ ರೂಪಾಂತರಿ ವೈರಸ್ ಪತ್ತೆ; ಇದು ಪ್ರಪಂಚದಾದ್ಯಂತ ಇನ್ನೂ ‘ಗೊತ್ತಿರದ’ ಸ್ಟ್ರೈನ್, ಹೆಚ್ಚಿದ ಆತಂಕ

ನವದೆಹಲಿ: ಎರಡು ವರ್ಷಗಳಿಂದ ಜಗತ್ತನ್ನೇ ಕಂಗೆಡಿಸಿರುವ ಕೊರೊನಾವೈರಸ್​ ಈಗಾಗಲೇ ಅನೇಕ ರೂಪಾಂತರಗಳನ್ನು ಪಡೆದಿದೆ. ಕೊವಿಡ್-19ನಿಂದ ಪಾರಾಗಲು ವಿಶ್ವಾದ್ಯಂತ ಕೊರೊನಾ ಲಸಿಕೆಗಳನ್ನು ಪಡೆದ ನಂತರ ಈಗ ರೋಗ ನಿಯಂತ್ರಣಕ್ಕೆ ಬರುತ್ತಿರುವಾಗಲೇ ಈಗ ಯಾರಿಗೂ ತಿಳಿದಿಲ್ಲದ ಹೊಸ ಕೊವಿಡ್ ರೂಪಾಂತರಿಯ 2 ಪ್ರಕರಣಗಳು ಇಸ್ರೇಲ್​ನಲ್ಲಿ ಕಾಣಿಸಿಕೊಂಡಿದ್ದು, ಆತಂಕಕ್ಕೆ ಕಾರಣವಾಗಿದೆ.
ಇಸ್ರೇಲ್‌ನಲ್ಲಿ ಕಂಡುಬಂದ ಹೊಸ ಕೊವಿಡ್ ರೂಪಾಂತರಿಯ ಎರಡು ಪ್ರಕರಣಗಳು COVID-BA.1 ಮತ್ತು BA.2ನ ಓಮಿಕ್ರಾನ್ ಆವೃತ್ತಿಯ ಎರಡು ಉಪ-ವ್ಯತ್ಯಯಗಳ ಸಂಯೋಜನೆಯಾಗಿದೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ಹೇಳಿದೆ. ಇಸ್ರೇಲ್‌ನ ಬೆನ್ ಗುರಿಯನ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಇಬ್ಬರು ಪ್ರಯಾಣಿಕರಿಗೆ ಕೊವಿಡ್ ಪರೀಕ್ಷೆ ಮಾಡಿದಾಗ ಈ ಹೊಸ ಸ್ಟ್ರೈನ್‌ ತಗುಲಿರುವುದು ಪತ್ತೆಯಾಗಿದೆ. ಹೆಚ್ಚು ಗೊತ್ತಿರದ ಈ ಹೊಸ ಕೊವಿಡ್ ರೂಪಾಂತರಿಯ ಬಗ್ಗೆ ಬೇರೆ ದೇಶಗಳೂ ಎಚ್ಚರಿಕೆಯಿಂದಿರಲು ಇಸ್ರೇಲ್ ಸೂಚಿಸಿದೆ.
ಇಸ್ರೇಲ್​ನಲ್ಲಿ ಹೊಸ ಕೋವಿಡ್‌ ರೂಪಾಂತರ ಸೋಂಕಿಗೆ ಒಳಗಾದ ಇಬ್ಬರು ರೋಗಿಗಳು ಜ್ವರ, ತಲೆನೋವು ಮತ್ತು ಸ್ನಾಯು ಡಿಸ್ಟ್ರೋಫಿಯಗಳಿಂದ ಬಳಲುತ್ತಿದ್ದರು. ಈ ರೂಪಾಂತರದ ಬಗ್ಗೆ ವಿಶ್ವಕ್ಕೆ ಇನ್ನೂ ತಿಳಿದಿಲ್ಲ. ಕೊರೊನಾ ರೂಪಾಂತರಿಯ 2 ಪ್ರಕರಣಗಳು ಇಲ್ಲಿಯವರೆಗೆ ಪತ್ತೆಯಾಗಿವೆ, ಜ್ವರ, ತಲೆನೋವು ಮತ್ತು ಸ್ನಾಯು ಡಿಸ್ಟ್ರೋಫಿಯದಿಂದ ಅವರು ಬಳಲುತ್ತಿದ್ದರು. ಇದಕ್ಕೆ ವಿಶೇಷ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿಲ್ಲ ಎಂದು ಇಸ್ರೇಲ್‌ನ ಆರೋಗ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಪ್ರಮುಖ ಸುದ್ದಿ :-   ದಾಖಲೆಯ 613 ದಿನಗಳ ಕಾಲ ಕೋವಿಡ್‌ ಜೊತೆ ಜೀವಿಸಿದ್ದ 72 ವರ್ಷದ ವ್ಯಕ್ತಿ ; ಸಾಯುವ ಮೊದಲು ಆತನ ದೇಹದಲ್ಲಿ ಕೊರೊನಾ ವೈರಸ್‌ 50ಕ್ಕೂ ಹೆಚ್ಚು ಬಾರಿ ರೂಪಾಂತರಗೊಂಡಿತ್ತು..!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement