ಪಂಜಾಬ್: ಸಚಿವರಾಗಿ 10 ಶಾಸಕರಿಂದ ಇಂದು ಪ್ರಮಾಣ ವಚನ ಸ್ವೀಕಾರ

ಚಂಡೀಗಡ: ಪಂಜಾಬ್‌ನ ಕ್ಯಾಬಿನೆಟ್ ಮಂತ್ರಿಗಳಾಗಿ ಒಟ್ಟು 10 ಶಾಸಕರು ಸಚಿವರಾಗಿ ಮಾರ್ಚ್ 19 ರ ಶನಿವಾರ ಬೆಳಿಗ್ಗೆ 11 ಗಂಟೆಗೆ ಚಂಡೀಗಡದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಎಎಪಿ ಶಾಸಕರಾದ ಹರ್ಪಾಲ್ ಸಿಂಗ್ ಚೀಮಾ, ಡಾ. ಬಲ್ಜಿತ್ ಕೌರ್, ಹರ್ಭಜನ್ ಸಿಂಗ್ ಇಟಿಒ ಮತ್ತು ಡಾ ವಿಜಯ್ ಸಿಂಗ್ಲಾ ಅವರು ನಾಳೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವುದು ಖಚಿತವಾಗಿದೆ.
ಅಲ್ಲದೆ, ಕೋಟ್ ಕಪುರ ವಿಧಾನಸಭಾ ಕ್ಷೇತ್ರದ ಎಎಪಿ ಶಾಸಕ ಕುಲ್ತಾರ್ ಸಿಂಗ್ ಸಂಧ್ವಾನ್ ಅವರು ಪಂಜಾಬ್ ವಿಧಾನಸಭೆಯ ಸ್ಪೀಕರ್ ಆಗುವ ಸಾಧ್ಯತೆಯಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ನಾಳೆ ಪ್ರಮಾಣ ವಚನ ಸ್ವೀಕರಿಸಲಿರುವ 10 ಪಂಜಾಬ್ ಸಚಿವರ ಪಟ್ಟಿ ಇಲ್ಲಿದೆ:
ಹರ್ಪಾಲ್ ಸಿಂಗ್ ಚೀಮಾ
ಡಾ ಬಲ್ಜಿತ್ ಕೌರ್
ಹರ್ಭಜನ್ ಸಿಂಗ್ ಇಟಿಒ
ಡಾ ವಿಜಯ್ ಸಿಂಗ್ಲಾ
ಗುರ್ಮೀರ್ ಸಿಂಗ್ ಮೀತ್‌ ಹೈರ್
ಹರ್ಜೋತ್ ಸಿಂಗ್ ಬೈನ್ಸ್
ಲಾಲ್ ಚಂದ್ ಕತರುಚಕ್
ಕುಲದೀಪ್ ಸಿಂಗ್ ಧಲಿವಾಲ್
ಲಾಲ್ಜಿತ್ ಸಿಂಗ್ ಭುಲ್ಲರ್
ಬ್ರಾಮ್ ಶಂಕರ್ (ಜಿಂಪಾ)
ಇತ್ತೀಚೆಗಷ್ಟೇ ನಡೆದ ಪಂಜಾಬ್ ವಿಧಾನಸಭಾ ಚುನಾವಣೆಯ ಎಎಪಿ ನಾಯಕ ಭಗವಂತ ಮಾನ್‌ ಅವರು ಮಾರ್ಚ್ 16 ರಂದು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಎಎಪಿ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಎಎಪಿ 92 ಸ್ಥಾನಗಳನ್ನು ಗೆಲ್ಲುವ ಮೂಲಕ ಪ್ರಚಂಡ ವಿಜಯವನ್ನು ದಾಖಲಿಸಿದೆ.

ಓದಿರಿ :-   ವೇಶ್ಯಾವಾಟಿಕೆ ಕಾನೂನುಬದ್ಧ, ವಯಸ್ಕ- ಒಪ್ಪಿಗೆಯ ಲೈಂಗಿಕ ಕಾರ್ಯಕರ್ತರ ಮೇಲೆ ಪೊಲೀಸರು ಕ್ರಿಮಿನಲ್ ಕ್ರಮ ಕೈಗೊಳ್ಳುವಂತಿಲ್ಲ : ಸುಪ್ರೀಂಕೋರ್ಟ್ ಮಹತ್ವದ ಆದೇಶ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ