ತೊಡುಪ್ಪುಳ: ಆಸ್ತಿ ವಿಚಾರಕ್ಕೆ ಸಂಬಂಧಿಸಿದ ಕೌಟುಂಬಿಕ ಕಲಹ ಶನಿವಾರ ದುರಂತ ಅಂತ್ಯ ಕಂಡಿದ್ದು, ವೃದ್ಧ ತಂದೆಯೇ ಮಗ ಮತ್ತು ಆತನ ಕುಟುಂಬ ಮಲಗಿದ್ದ ಕೋಣೆಗೆ ಬೀಗ ಹಾಕಿ ಕಿಟಕಿಯ ಮೂಲಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸಜೀವ ದಹನ ಮಾಡಿ ಹತ್ಯೆಗೈದ ದಾರುಣ ಘಟನೆ ವರದಿಯಾಗಿದೆ.
ಶುಕ್ರವಾರ ಮಧ್ಯರಾತ್ರಿ 12:45ಕ್ಕೆ ಚೀನಿಕುಝಿಯಿಲ್‌ನಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಮಹಮ್ಮದ್ ಫೈಸಲ್ (45), ಪತ್ನಿ ಶೀಬಾ (45), ಪುತ್ರಿಯರಾದ ಮೆಹರ್ (16) ಮತ್ತು ಹಸ್ನಾ (13) ಎಂದು ಗುರುತಿಸಲಾಗಿದೆ. ಬೆಂಕಿ ಇಟ್ಟ ಆರೋಪಿ ಹಮೀದ್(79) ಎಂಬವರನ್ನು ಬಂಧಿಸಲಾಗಿದೆ.
advertisement
9535127775 / 9901837775 / 6364528715 / 08362775155 / https://icsmpucollege.com/
ಮೃತ ಫೈಸಲ್ ಜೀವನ ನಿರ್ವಹಣೆಗಾಗಿ ದಿನಸಿ ಅಂಗಡಿ ಇಟ್ಟುಕೊಂಡಿದ್ದನು. ಫೈಸಲ್ ಮತ್ತು ಆತನ ತಂದೆ ಹಮೀದ್ ಹಲವು ವರ್ಷಗಳಿಂದ ಬೇರೆ ಬೇರೆಯಾಗಿ ವಾಸವಾಗಿದ್ದರು. ಆಸ್ತಿ ಹಂಚಿಕೆ ವಿಚಾರವಾಗಿ ಇವರಿಬ್ಬರಲ್ಲಿ ಹಿಂದಿನಿಂದಲೂ ಜಗಳ ನಡೆಯುತ್ತಿತ್ತು ಎಂದು ಹೇಳಲಾಗಿದ್ದು, ಹಮೀದ್‌ನ ನೆರೆಹೊರೆಯವರು ಹೇಳುವ ಪ್ರಕಾರ, ಆರೋಪಿ ಹಮೀದ್ ಜಗಳವನ್ನು ಕೊನೆಗೊಳಿಸಲು ತನ್ನ ಮಗನ ಕುಟುಂಬವನ್ನು ‘ಮುಗಿಸುವ’ ಬಗ್ಗೆ ಮಾತನಾಡಿದ್ದ. ಆದರೆ ಆತ ಇಷ್ಟು ದೊಡ್ಡ ದುರಂತಕ್ಕೆ ಕಾರಣವಾಗುತ್ತಾನೆ ಎಂದು ಯಾರೂ ಊಹಿಸಿರಲಿಲ್ಲ.
ಶುಕ್ರವಾರವೂ ಮಗ ಮತ್ತು ಹಮೀದ್ ನಡುವೆ ಮತ್ತೊಂದುಜಗಳ ನಡೆದಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ದೂಡಾಡಿಕೊಂಡಿದ್ದಾರೆ.
ಹತ್ಯೆ ಮಾಡುವುದನ್ನು ಚೆನ್ನಾಗಿ ಯೋಜಿಸಿ ಮಾಡಲಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ಪೊಲೀಸರು ಹೇಳಿದ್ದಾರೆ. ಕುಟುಂಬವು ಸ್ನಾನಗೃಹದ ಟ್ಯಾಪ್ ನೀರಿನಿಂದ ಬೆಂಕಿಯನ್ನು ನಂದಿಸಲು ಅವಕಾಶ ಇರಬಾರದು ಎಂದು ಪೆಟ್ರೋಲ್ ಸುರಿದು ಬೆಂಕಿ ಇಡುವ ಮೊದಲು ಹಮೀದ್ ನೀರಿನ ತೊಟ್ಟಿಯನ್ನು ಖಾಲಿ ಮಾಡಿದ್ದ. ಅಲ್ಲದೆ, ಅಲ್ಲದೆ ತನ್ನ ಮಗ ಹಾಗೂ ಆತನ ಕುಟುಂಬ ಪರಾರಿಯಾಗದಂತೆ ಮಾಡಲು ಅವರ ಕೊಠಡಿಗೆ ಹೊರಗಿನಿಂದ ಬೀಗ ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಕಿ ಹೊತ್ತಿಕೊಂಡಾಗ, ಫಸಲ್ ಸಹಾಯಕ್ಕಾಗಿ ತನ್ನ ನೆರೆಯ ರಾಹುಲ್‌ಗೆ ಫೋನ್ ಮಾಡಿದ. ರಾಹುಲ್ ಎಂಬಾತ ಮುಖ್ಯ ದ್ವಾರ ಮತ್ತು ಮಲಗುವ ಕೋಣೆಯ ಬಾಗಿಲು ಒಡೆದರೂ, ಕುಟುಂಬದ ಕೋಣೆ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿ ಬಿಟ್ಟಿತ್ತು. ಅಲ್ಲದೆ, ಹಮೀದ್ ಹೆಚ್ಚಿನ ಪೆಟ್ರೋಲ್ ಬಾಟಲಿಗಳನ್ನು ಬೆಂಕಿಗೆ ಎಸೆಯುತ್ತಿದ್ದನು. ಫಸಲ್, ಪತ್ನಿ ಮತ್ತು ಅವರ ಇಬ್ಬರು ಹದಿಹರೆಯದ ಹೆಣ್ಣುಮಕ್ಕಳು ಅಟ್ಯಾಚ್ಡ್ ಬಾತ್‌ರೂಮ್‌ಗೆ ನುಸುಳಿದ್ದರು, ಅವರು ಅಂತಿಮವಾಗಿ ಬೆಂಕಿಯಿಂದ ಆಹುತಿಯಾಗುವವರೆಗೂ ಸಹಾಯಕ್ಕಾಗಿ ಕಿರುಚುತ್ತಿದ್ದರು. ಆದರೆ ಎಷ್ಟೇ ಪ್ರಯತ್ನಿಸಿದರೂ ಬಾಗಿಲು ಒಡೆದು ಒಳಗೆ ಪ್ರವೇಶಿಸಿದರೂ ಹಮೀದ್ ಅವರ ರೂಮನ್ನೂ ಲಾಕ್ ಮಾಡಿದ್ದ. ಅದನ್ನು ಒಡೆದು ಬೆಂಕಿ ಕೆನ್ನಾಲಿಗೆ ದಾಟಿಕೊಂಡು ಹೋಗುವುದು ತಡವಾಗಿತ್ತು. ಅಷ್ಟರಲ್ಲಾಗಲೇ ಅವರು ಸಜೀವವಾಗಿಯೇ ದಹನವಾಗಿದ್ದರುʼ
ಪೊಲೀಸರು ಆರೋಪಯನ್ನು ಬಂಧಿಸಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ