ವರ್ಲ್ಡ್​ ಹ್ಯಾಪಿನೆಸ್​ ದೇಶಗಳ ಪಟ್ಟಿ: ಫಿನ್​ಲ್ಯಾಂಡ್​ ಅತ್ಯಂತ ಸುಖಿ ದೇಶವಾದರೆ ಅಫ್ಘಾನಿಸ್ತಾನ ಅತ್ಯಂತ ‘ಅತೃಪ್ತಿಕರ’ ದೇಶ.. ಭಾರತ..?

ಹೆಲ್ಸಿಂಕಿ: ವೈಯಕ್ತಿಕ ಯೋಗಕ್ಷೇಮ, ವೈಯಕ್ತಿಕ ಸ್ವಾತಂತ್ರ್ಯ ಹಾಗೂ ಸಾಮಾಜಿಕ ಬೆಂಬಲದ ಮಾನದಂಡಗಳ ಮೇಲೆ ನಿರ್ಧರಿಸಲಾಗುವ ಅತ್ಯಂತ ಸಂತೋಷದಾಯಕ ದೇಶದ ಪಟ್ಟಿಯಲ್ಲಿ ಫಿನ್​ಲ್ಯಾಂಡ್​ ಅತ್ಯಂತ ಸಂತೋಷದಾಯಕ ದೇಶವಾಗಿ ಹೊರಹೊಮ್ಮಿದೆ.

ಈ ಪುಟ್ಟ ದೇಶ ಸತತವಾಗಿ ಐದನೇ ಬಾರಿಗೆ ಈ ಪಟ್ಟವನ್ನು ತನ್ನದಾಗಿಸಿಕೊಂಡಿದೆ. ಈ ಪಟ್ಟಿಯಲ್ಲಿ ಅತ್ಯಂತ ಹೆಚ್ಚು ಅತೃಪ್ತಿಕರ ದೇಶ ಎಂದು ಅಫ್ಘಾನಿಸ್ತಾನ ಕರೆಯಿಸಿಕೊಂಡರೆ, ಲೆಬನಾನ್​ ನಂತರದ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿ ಝಿಂಬಾಬ್ವೆ ಇದೆ.
ಶುಕ್ರವಾರ ಬಿಡುಗಡೆಯಾದ ವರ್ಲ್ಡ್​ ಹ್ಯಾಪಿನೆಸ್​ ಪಟ್ಟಿಯಲ್ಲಿ ಉತ್ತರ ಯುರೋಪ್​ ದೇಶಗಳು ಮುನ್ನಡೆ ಸಾಧಿಸಿವೆ. ಫಿನ್​ಲ್ಯಾಂಡ್​ ಅತ್ಯಂತ ಸುಖಿ ದೇಶವಾಗಿದ್ದರೆ ಐಸ್ಲ್ಯಾಂಡಿಕ್, ಸ್ವಿಸ್ ಮತ್ತು ಹಾಲಂಡ್‌ ನಂತರದ ಸ್ಥಾನ ಪಡೆದುಕೊಂಡಿವೆ.

ಶುಕ್ರವಾರ ವಿಶ್ವಸಂಸ್ಥೆಯು ಬಿಡುಗಡೆ ಮಾಡಿದ ವರ್ಲ್ಡ್ ಹ್ಯಾಪಿನೆಸ್ ರಿಪೋರ್ಟ್ 2022 ರಲ್ಲಿ ಭಾರತ ಪಟ್ಟಿಯ ಮೇಲ್ಭಾಗಕ್ಕಿಂತ ಕೆಳಭಾಗಕ್ಕೆ ಹತ್ತಿರದಲ್ಲಿದೆ.
ಗಮನಾರ್ಹವಾಗಿ, ಭಾರತವು ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ ಮತ್ತು ಶ್ರೀಲಂಕಾದಂತಹ ದೇಶಗಳಿಗಿಂತ ಕೆಳಗಿದೆ. 146 ಶ್ರೇಯಾಂಕಿತ ದೇಶಗಳಲ್ಲಿ ಭಾರತವು ನಂ. 136 ನೇ ಸ್ಥಾನದಲ್ಲಿದೆ. ನೇಪಾಳ 84 ನೇ ಸ್ಥಾನದಲ್ಲಿದೆ, ಬಾಂಗ್ಲಾದೇಶ 94, ಪಾಕಿಸ್ತಾನ 121 ಮತ್ತು ಶ್ರೀಲಂಕಾ 127ನೇ ಸ್ಥಾನದಲ್ಲಿದೆ.

ಪ್ರಮುಖ ಸುದ್ದಿ :-   ರಾಜ್‌ ಕುಂದ್ರಾಗೆ ಸೇರಿದ ₹97 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇ.ಡಿ.

ಇನ್ನು ಪಟ್ಟಿಯಲ್ಲಿ ಅಮೆರಿಕ 16ನೇ ಸ್ಥಾನದಲ್ಲಿದ್ದರೆ, ಬ್ರಿಟನ್​ 15, ಫ್ರಾನ್ಸ್​ 20 ನೇ ಸ್ಥಾನದಲ್ಲಿದೆ. ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ಆಕ್ರಮಿಸಿಕೊಂಡ ಬಳಿಕ ದೇಶ ಆರ್ಥಿಕವಾಗಿ ನಷ್ಟ ಅನುಭವಿಸಿದ್ದಲ್ಲದೇ ವೈಯಕ್ತಿಕ ಸ್ವಾತಂತ್ರ್ಯ ಹರಣವಾಗಿದ್ದರಿಂದ ಈ ದೇಶ ಪಟ್ಟಿಯಲ್ಲಿ ಕೊನೆ ಸ್ಥಾನ ಪಡೆದಿದೆ. ಇದಲ್ಲದೇ, ಆರ್ಥಿಕ ಬಿಕ್ಕಟ್ಟಿಗೆ ಗುರಿಯಾಗಿರುವ ಲೆಬನಾನ್​, ವೆನಿಜುವೆಲಾ ನಂತರದ ಅತ್ಯಂತ ಅತೃಪ್ತ ದೇಶಗಳಾಗಿವೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement