ಶಿರಸಿ ಮಾರಿಕಾಂಬಾ ಜಾತ್ರೆ: ನಿನ್ನೆ ಗಾಳಿ ಮಳೆಗೆ ಜಾತ್ರೆಪೇಟೆ ಅಸ್ತವ್ಯಸ್ಥ…ಇಂದು ಕಾಲಿಡಲಾಗದಷ್ಟು ಜನ..!

ಶಿರಸಿ: ನಿನ್ನೆ, ಶುಕ್ರವಾರ ಗಾಳಿಮಳೆಯಿಂದ ಅಸ್ತವ್ಯಸ್ಥವಾಗಿದ್ದ ರಾಜ್ಯದ ಅತಿದೊಡ್ಡ ಜಾತ್ರೆಯಾದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಶ್ರೀ ಮಾರಿಕಾಂಬಾ ಜಾತ್ರೆಗೆ ಶನಿವಾರ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು.
ದೇವಿ ದರ್ಶನಕ್ಕೆ ಭಾರೀ ಸರತಿ ಸಾಲು ನಿರ್ಮಾಣವಾಗಿತ್ತು.ಇಲ್ಲಿನ ಬಿಡಕಿ ಬೈಲಿನ ದೇವಿ ಗದ್ದುಗೆ ಬಳಿ ಬೆಳ್ಳಂಬೆಳಗ್ಗೆಯೇ ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದರು. ಮಧ್ಯಾಹ್ನ ಬಿರುಬಿಸಿಲಿನ್ನು ಲೆಕ್ಕಿಸದೆ ಸಾಲು ಗಟ್ಟಿ ನಿಂತ ಭಕ್ತರ ಸಾಲು ಸಂಜೆಯಾಗುತ್ತಿದ್ದಂತೆ ಬೆಳೆಯುತ್ತಲೇ ಇತ್ತು. ಗದ್ದುಗೆಯಿಂದ ಬನವಾಸಿ ರಸ್ತೆ ವರೆಗೂ ಸಾಲುಗಟ್ಟಿದ್ದು ಕಂಡುಬಂತು. ಉಡಿ ಸೇವೆ ಸೇರಿದಂತೆ ನಾನಾ ಹರಕೆಗಳನ್ನು ಸಲ್ಲಿಸಲು ಭಕ್ತರು ತಾ ಮುಂದು ನಾ ಮುಂದು ಎಂದು ನುಗ್ಗುತ್ತಿದ್ದುದು ಸಾಮಾನ್ಯವಾಗಿತ್ತು. ಶುಕ್ರವಾರದ ಗಾಳಿಮಳೆಗೆ ಜಾತ್ರೆ ಅಸ್ತವ್ಯಸ್ಥವಾಗಿದ್ದೇ ಸುಳ್ಳು ಎಂಬಂತೆ ಶನಿವಾರ ಜನರು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಆಗಮಿಸಿದ್ದರು. ಶುಕ್ರವಾರದ ಗಾಳಿಯ ತೀವ್ರತೆಗೆ ಜಾತ್ರಾ ಚಪ್ಪರ ಹಾಗೂ ಅಂಗಡಿ ಮುಂಗಟ್ಟಯಗಳು ತಗಡುಗಳು ಹಾರಿ ಹೋಗಿದ್ದವು. ಅಂಗಡಿಕಾರರು ತಮ್ಮ ಅಂಗಡಿಗಳು ಕಂಬಗಳು ಗಾಳಿಯ ರಭಸಕ್ಕೆ ಎಸೆಯಲ್ಪಡದಂತೆ ಹಿಡಿದುಕೊಂಡು ಕುಳಿತಿದ್ದರು.. ಜಾತ್ರೆ ಪೇಟೆ ಮಳೆ ಹಾಗೂ ಗಾಳಿಯಿಂದಾಗಿ ಕಳೆಗುಂದಿತ್ತು. ಜನರು ಕಾಣುತ್ತಿರಲಿಲ್ಲ. ಇದಕ್ಕೆ ತದ್ವಿರುದ್ಧವಾಗಿ ಶನಿವಾರ ಜಾತ್ರೆ ಪೇಟೆಯಲ್ಲಿ ಕೈಕಾಲು ಹಾಕಿಲಿಕ್ಕೇ ಸ್ಥಳವಿಲ್ಲದಷ್ಟು ಜನಜಂಗುಳಿಯಿಂದ ಕೂಡಿತ್ತು.

ಪ್ರಮುಖ ಸುದ್ದಿ :-   ನೇಹಾ ಹಿರೇಮಠ ಕೊಲೆ ಪ್ರಕರಣ: ಆರೋಪಿ ಫಯಾಜ್‌ ಆರು ದಿನ ಸಿಐಡಿ ಕಸ್ಟಡಿಗೆ

ಪೊಲೀಸ ಉತ್ತಮ ಕಾರ್ಯಾಚರಣೆ:
ಜಾತ್ರೆಯ ಜನ ಜಂಗುಳಿಯಲ್ಲಿ ಮಕ್ಕಳಲ್ಲದೆ ಹಿರಿಯರೂ ಕಾಣೆಯಾಗುವುದು ಸಾಮಾನ್ಯ. ಇದೇ ಕಾರಣಕ್ಕೆ ಪೊಲೀಸ್ ಇಲಾಖೆಯಿಂದ ಹೆಲ್ಪ್ ಲೈನ್ ಆರಂಭಿಸಲಾಗಿದೆ. ಮಾರಿಕಾಂಬಾ ಜಾತ್ರೆಯಲ್ಲಿ ಇದುವರೆಗೆ ಕಾಣೆಯಾದ 33 ಜನರನ್ನು ಹೈಲ್ಪ್ ಲೈನ್ ಪಡೆ ಪತ್ತೆ ಹಚ್ಚಿ ಸಂಬಂಧ ಪಟ್ಟವರಿಗೆ ತಲುಪಿಸಲು ಯಶಸ್ವಿಯಾಗಿದೆ. 22 ಬಾಲಕರು, ಐವರು ಬಾಲಕಿಯರು, ಒಬ್ಬ ಬುದ್ಧಿಮಾಂದ್ಯ, ಐವರು ಹಿರಿಯ ನಾಗರಿಕರು ಕಾಣೆಯಾಗಿದ್ದರು.

ಮುಂದುವರಿದ ಅನ್ನ ಪ್ರಸಾದ ಸೇವೆ:
ಜಾತ್ರೆಗೆ ಬರುವ ಭಕ್ತರಿಗೆ ನಗರದ ಹಲವೆಡೆ ಅನ್ನ ಪ್ರಸಾದ ವಿತರಣೆಗೆ ವ್ಯವಸ್ಥೆ ಮಾಡಲಾಗಿತ್ತು. ಮುಖ್ಯವಾಗಿ ಮಾರಿಕಾಂಬಾ ದೇವಾಲಯದ ವತಿಯಿಂದ ಆಯೋಜಿಸಿದ್ದ ಪ್ರಸಾದ ಸೇವೆಯಲ್ಲಿ 12 ಸಾವಿರಕ್ಕು ಹೆಚ್ಚು ಭಕ್ತರು ಊಟ ಮಾಡಿದರು. ರಾಘವೇಂದ್ರ ವೃತ್ತದ ಬಳಿ ಗೆಳೆಯರ ಬಳಗ ಆಯೋಜಿಸಿದ್ದ ಅನ್ನದಾನ ಸೇವೆ  ಉಣ್ಣೆಮಠ ಗಲ್ಲಿಯಲ್ಲಿ ಸಹ ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸಿದರು.  ಭಕ್ತರು ಪಾಲ್ಗೊಂಡಿದ್ದರು. ನಗರದ ಹೊಸಪೇಟೆ ರಸ್ತೆ, ಶಿವಾಜಿ ವೃತ್ತ ಸೇರಿದಂತೆ ಹಲವೆಡೆ ತೆರೆದ ಅರವಟಿಗೆಯಲ್ಲಿ ನೀರು, ಪಾನಕ, ಮಜ್ಜಿಗೆ ನೀಡಿ ಸೇವಾಕಾರ್ಯದಲ್ಲಿ ಭಕ್ತರು ಭಾಗಿಯಾದರು.

ಪ್ರಮುಖ ಸುದ್ದಿ :-   ಸುಳ್ಳು ಚುನಾವಣಾ ಅಫಿಡವಿಟ್‌ ಪ್ರಕರಣ : ಬಿಜೆಪಿ ಶಾಸಕ ಗರುಡಾಚಾರಗೆ ವಿಧಿಸಿದ್ದ ಜೈಲು ಶಿಕ್ಷೆ ರದ್ದುಮಾಡಿದ ಹೈಕೋರ್ಟ್

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement