ಪದ್ಮಶ್ರೀ’ ಪಡೆಯುವಾಗ ರಾಷ್ಟ್ರಪತಿ, ಪ್ರಧಾನಿಗೆ ನೆಲಕ್ಕೆ ಬಗ್ಗಿ ವಂದಿಸಿದ ಯೋಗ ದಂತಕಥೆ 125 ವರ್ಷದ ಸ್ವಾಮಿ ಶಿವಾನಂದರು..!: ಹೃದಯಸ್ಪರ್ಶಿ ವೀಡಿಯೊ ವೀಕ್ಷಿಸಿ

ನವದೆಹಲಿ: 2022ನೇ ಸಾಲಿನ ದೇಶದ ಅತ್ಯುನ್ನತ ಪದ್ಮ ಪ್ರಶಸ್ತಿಗಳನ್ನು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ರಾಷ್ಟ್ರಪತಿ ಭವನದಲ್ಲಿ ಪ್ರದಾನ ಮಾಡಿದರು. ಈ ವೇಳೆ ಪ್ರಶಸ್ತಿ ಸ್ವೀಕಾರ ಮಾಡಿರುವ 125 ವರ್ಷದ ಸ್ವಾಮಿ ಶಿವಾನಂದರ ಹೃದಯಸ್ಪರ್ಶಿ ವಿಡಿಯೋ ಎಲ್ಲರ ಮನಗೆದ್ದಿದೆ.

ಯೋಗ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ 125 ವರ್ಷದ ಯೋಗ ಪಟು ಸ್ವಾಮಿ ಶಿವಾನಂದ ಅವರಿಗೆ ಸೋಮವಾರ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶಿವಾನಂದ ಅವರು ಬಹುಶಃ ದೇಶದ ಇತಿಹಾಸದಲ್ಲಿ ಅತ್ಯಂತ ಹಿರಿಯ ಪದ್ಮ ಪ್ರಶಸ್ತಿ ವಿಜೇತರಾಗಿದ್ದಾರೆ ಮತ್ತು ಅವರನ್ನು ‘ಯೋಗ ಸೇವಕ’ ಎಂದು ಪರಿಗಣಿಸಲಾಗಿದೆ.

ಪ್ರಶಸ್ತಿ ಪಡೆದುಕೊಳ್ಳಲು ಅವರ ಹೆಸರು ಘೋಷಣೆ ಮಾಡುತ್ತಿದ್ದಂತೆ ಎದ್ದು ನಿಂತು ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್​ ಅವರಿಗೆ ನಮಸ್ಕರಿಸಿರುವ ದೇಶದ ಅತ್ಯಂತ ಹಿರಿಯ ವ್ಯಕ್ತಿ, ಪ್ರಶಸ್ತಿ ಪಡೆದುಕೊಂಡ ನಂತರ ಸಹ ಸಿಬ್ಬಂದಿಯನ್ನು ಲೆಕ್ಕಿಸದೇ ಮೋದಿ ಅವರ ಬಳಿ ತೆರಳಿ ಅವರಿಗೆ ನಮಸ್ಕಾರ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಮೋದಿ ಕೂಡಾ ನಮಸ್ಕಾರ ಮಾಡಿದರು.

ವೀಡಿಯೋದಲ್ಲಿ ಸ್ವಾಮಿ ಶಿವಾನಂದ ಅವರು ಗೌರವ ಸೂಚಕವಾಗಿ ಪ್ರಶಸ್ತಿ ಸ್ವೀಕರಿಸುವ ಮುನ್ನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಮಸ್ಕರಿಸುತ್ತಿರುವುದನ್ನು ಕಾಣಬಹುದು.
ಸ್ವಾಮಿ ಶಿವಾನಂದರು ತಮ್ಮ ವಿನಮ್ರ ನಡೆಯಿಂದ ಖ್ಯಾತಿ ಪಡೆದಿದ್ದು, ಈಗಲೂ ಯೋಗದ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಮೂರು ದಶಕಗಳಿಂದ ಕಾಶಿಯ ಘಾಟ್‌ಗಳಲ್ಲಿ ಯೋಗವನ್ನು ಅಭ್ಯಾಸ ಮಾಡುತ್ತಿದ್ದಾರೆ ಮತ್ತು ಕಲಿಸುತ್ತಿದ್ದಾರೆ.

ಓದಿರಿ :-   ದೆಹಲಿ ವಿಮಾನ ನಿಲ್ದಾಣದಲ್ಲಿ ತ್ರಿವರ್ಣ ಧ್ವಜದ ಮೇಲೆ ನಿಂತು ನಮಾಜ್ ಮಾಡಿದ ವ್ಯಕ್ತಿಯ ಬಂಧನ, ಜಾಮೀನಿನ ಮೇಲೆ ಬಿಡುಗಡೆ

 

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 2

advertisement

ನಿಮ್ಮ ಕಾಮೆಂಟ್ ಬರೆಯಿರಿ