ಗೂಡಿಗೆ ನುಗ್ಗಿದ ದೈತ್ಯಾಕಾರದ ಕರಡಿಯನ್ನೇ ಹೆದರಿಸಿ ಓಡಿಸಿದ ಎರಡು ಸಾಕು ಹಂದಿಗಳು..! ದೃಶ್ಯ ಸಿಸಿಟಿಯಲ್ಲಿ ಸೆರೆ..

ಅಮೆರಿಕದ ಕನೆಕ್ಟಿಕಟ್‌ನಲ್ಲಿ ತಮ್ಮ ಆವರಣಕ್ಕೆ ಬಂದ ದೈತ್ಯ ಕರಡಿಯೊಂದಿಗೆ ಎರಡು ಹಂದಿಗಳು ಹೋರಾಟ ನಡೆಸಿ ಅದನ್ನು ಓಡಿಸಿರುವ ಘಟನೆ ವೀಡಿಯೊದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕಪ್ಪು ಕರಡಿ ಆವರಣದ ಬೇಲಿಯನ್ನು ದಾಟಿ ಒಳನುಗ್ಗಿದ್ದನ್ನು ವೀಡಿಯೊದಲ್ಲಿ ಮತ್ತು ಹಂದಿಗಳಲ್ಲಿ ಒಂದು ಕರಡಿಯ ಮೇಲೆ ಆಕ್ರಮಣ ಮಾಡುವುದರೊಂದಿಗೆ ಇದು ಪ್ರಾರಂಭವಾಗುತ್ತದೆ. ಬಿಳಿ ಹಂದಿ ತನ್ನ ಎಲ್ಲಾ ಶಕ್ತಿಯನ್ನೂ ಒಗ್ಗೂಡಿಸಿ ಕರಡಿಯನ್ನು ಹಿಂದಕ್ಕೆ ತಳ್ಳುವುದು ಕಂಡುಬರುತ್ತದೆ. ಗೂಡಿನಲ್ಲಿದ್ದ ಮತ್ತೊಂದು ಹಂದಿ ಕೂಡ ಕರಡಿಯ ಮೇಲೆ ದಾಳಿ ಮಾಡಿ ಕರಡಿಯನ್ನು ಒಂದು ಮೂಲೆಗೆ ತಳ್ಳುವುದುನ್ನು ಸಹ ವೀಡಿಯೊ ತೋರಿಸುತ್ತದೆ. ಕೆಲವು ನಿಮಿಷಗಳ ನಂತರ, ಕರಡಿ ಹಂದಿ ಗೂಡಿನ ಬೇಲಿಯಿಂದ ಜಿಗಿದು ಹೊರಗೆ ಬರುವುದನ್ನು ಕಾಣಬಹುದು.

ಈ ಎರಡು ಹಂದಿಗಳಿಗೆ ಅವುಗಳ ಮಾಲೀಕರು ಮೇರಿ ಮತ್ತು ಹ್ಯಾಮಿ ಎಂದು ಹೆಸರಿಸಿದ್ದಾರೆ.
ಪೆನ್‌ ಬಳಿ ಅಳವಡಿಸಲಾಗಿರುವ ಸೆಕ್ಯುರಿಟಿ ಕ್ಯಾಮೆರಾದಿಂದ ವಿಡಿಯೋ ತೆಗೆಯಲಾಗಿದ್ದು, ಯೂಟ್ಯೂಬ್ ಮತ್ತು ಇತರ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡಲಾಗಿದೆ. ಯೂಟ್ಯೂಬ್ ಒಂದರಲ್ಲೇ ಈ ವಿಡಿಯೋವನ್ನು 7 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ.

ಪ್ರಮುಖ ಸುದ್ದಿ :-   ಸ್ಪೇಸ್ ಎಕ್ಸ್ ಷೇರುಗಳ ದಾಖಲೆ ಜಿಗಿತ: ವಿಶ್ವದ ಮೊದಲ 'ಟ್ರಿಲಿಯನೇರ್' (ಲಕ್ಷ ಕೋಟಿ ಡಾಲರ್ ಒಡೆಯ)ಆದ ಎಲೋನ್ ಮಸ್ಕ್ !

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement