ಪಶ್ಚಿಮ ಬಂಗಾಳ: ಪಂಚಾಯತ ನಾಯಕನ ಹತ್ಯೆಯ ನಂತರ 8 ಜನರ ಸಜೀವ ದಹನ ಮಾಡಿದ ಗುಂಪು..

ಕೋಲ್ಕತ್ತಾ: ಆಘಾತಕಾರಿ ಘಟನೆಯಲ್ಲಿ ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯಲ್ಲಿ ಗುಂಪೊಂದು ಮನೆಗಳಿಗೆ ಬೆಂಕಿ ಹಚ್ಚಿದ ಪರಿಣಾಮ ಕನಿಷ್ಠ 8 ಜನರು ಸಜೀವ ದಹನವಾದ ಘಟನೆ ಸೋಮವಾರ ರಾತ್ರಿ ನಡೆದಿದೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳ ಪ್ರಕಾರ, ಬಿರ್ಭೂಮ್‌ನಲ್ಲಿ ಪಂಚಾಯತ್ ನಾಯಕನಾಗಿ ಸೇವೆ ಸಲ್ಲಿಸಿದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕನನ್ನು ಹತ್ಯೆಗೈದ ನಂತರ ಈ ಘಟನೆ ನಡೆದಿದೆ.
ರಾಮ್‌ಪುರ್‌ಹತ್ ಪಟ್ಟಣದ ಹೊರವಲಯದಲ್ಲಿರುವ ಬೊಗ್ಟುಯಿ ಗ್ರಾಮಕ್ಕೆ ನುಗ್ಗಿದ ಆಕ್ರೋಶಗೊಂಡ ಗುಂಪೊಂದು ನಿನ್ನೆ ತಡರಾತ್ರಿ 10 ರಿಂದ 12 ಮನೆಗಳಿಗೆ ಬೆಂಕಿ ಹಚ್ಚಿದೆ. ಇದುವರೆಗೆ ಒಟ್ಟು 10 ಮೃತದೇಹಗಳು ಪತ್ತೆಯಾಗಿದ್ದು, ಒಂದೇ ಮನೆಯಲ್ಲಿ ಏಳು ಮೃತದೇಹಗಳು ಪತ್ತೆಯಾಗಿವೆ ಎಂದು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಬರ್ಶಾಲ್ ಗ್ರಾಮದ ಟಿಎಂಸಿ ಪಂಚಾಯತ್ ಉಪಮುಖ್ಯಸ್ಥ ಭದು ಶೇಖ್ ಅವರ ಶವ ಸೋಮವಾರ ಈ ಪ್ರದೇಶದಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವಿಚಾರದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ. ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಿಯಂತ್ರಿತ ಬರ್ಶಾಲ್ ಗ್ರಾಮ ಪಂಚಾಯತ್‌ನ ಉಪ ಮುಖ್ಯಸ್ಥ ಭದು ಶೇಕ್ ಅವರ ಮೇಲೆ ಮೋಟಾರ್‌ಸೈಕಲ್‌ನಲ್ಲಿ ಬಂದ ಮುಖ ಮುಚ್ಚಿಕೊಂಡಿದ್ದ ನಾಲ್ವರು ದಾಳಿ ನಡೆಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ತಿಳಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಶೇಖ್ ಅವರನ್ನು ರಾಮ್‌ಪುರಹತ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೆ ಅವರು ಮೃತಪಟ್ಟಿರೆ ಎಂದು ಘೋಷಿಸಲಾಯಿತು. ಅವರ ಪಾರ್ಥಿವ ಶರೀರವನ್ನು ರಾಮ್‌ಪುರಹತ್‌ನಲ್ಲಿರುವ ಅವರ ಗ್ರಾಮ ಊರಾದ ಬಗ್ತುಯಿಗೆ ತರಲಾಗಿದೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ : 1ನೇ ಹಂತದಲ್ಲಿ 62.37%ರಷ್ಟು ಮತದಾನ ; 2019ರ ಮತದಾನದ ಪ್ರಮಾಣಕ್ಕಿಂತ ಕಡಿಮೆ

ಪಕ್ಷದ ಬಣಗಳ ನಡುವಿನ ಹೊಡೆದಾಟದ ವರದಿ ನಿರಾಕರಿಸಿದ ಟಿಎಂಸಿ…
ಈ ಘಟನೆಯು ಆಡಳಿತ ಪಕ್ಷದ ಎರಡು ಬಣಗಳ ನಡುವಿನ ಹೊಡೆದಾಟದ ಘಟನೆ ಎಂದು ಆರೋಪಿಸಲಾಗಿದ್ದರೂ, ಟಿಎಂಸಿ ಪ್ರಧಾನ ಕಾರ್ಯದರ್ಶಿ ಕುನಾಲ್ ಘೋಷ್ ಈ ಘಟನೆಗೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಬೆಂಕಿ ಅವಘಡದಲ್ಲಿ ಸ್ಥಳೀಯರ ಸಾವು ದುಃಖ ತಂದಿದೆ. ಆದರೆ ಈ ಘಟನೆಗೆ ಯಾವುದೇ ರಾಜಕೀಯ ಸಂಬಂಧವಿಲ್ಲ. ಇದು ಸ್ಥಳೀಯ ಗ್ರಾಮ ವಿವಾದ. ಹತ್ಯೆಗೀಡಾದ ಪಂಚಾಯತ್ ಉಪಮುಖ್ಯಸ್ಥರು ಹೆಸರಾಂತ ವ್ಯಕ್ತಿಯಾಗಿದ್ದು, ಅವರ ಸಾವು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದ್ದು, ಹಿಂಸಾತ್ಮಕ ಪ್ರತಿಭಟನೆಗೆ ಕಾರಣವಾಗಿದೆ. ಬೆಂಕಿಯ ಘಟನೆಯು ರಾತ್ರಿಯಲ್ಲಿ ಸಂಭವಿಸಿದೆ ಆದರೆ ಪೊಲೀಸರು ಮತ್ತು ಅಗ್ನಿಶಾಮಕ ದಳವು ತಕ್ಷಣ ಕ್ರಮ ಕೈಗೊಂಡಿದೆ ಎಂದು ಕುನಾಲ್ ಘೋಷ್ ಬಂಗಾಳಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಸರ್ಕಾರವು ತನಿಖೆಯನ್ನು ಚುರುಕುಗೊಳಿಸಿದೆ ಮತ್ತು ಪ್ರಭಾರಿ ಅಧಿಕಾರಿ (OC) ಉಪವಿಭಾಗೀಯ ಪೊಲೀಸ್ ಅಧಿಕಾರಿ (SDPO) ಯನ್ನು ಅಮಾನತುಗೊಳಿಸಲಾಗಿದೆ ಎಂದು ಘೋಷ್ ಹೇಳಿದ್ದಾರೆ ಹಾಗೂ ಇದು ಪೂರ್ವ ಯೋಜಿತ ಕೊಲೆಯೇ ಎಂದು ಪೊಲೀಸ್ ತನಿಖೆಯಿಂದ ಕಂಡುಹಿಡಿಯಲಾಗುವುದು ಎಂದು ತಿಳಿಸಿದ್ದಾರೆ.
ಮೇಲ್ನೋಟಕ್ಕೆ ಇದು ರಾಜಕೀಯ ಹಿಂಸಾಚಾರದ ಘಟನೆಯಂತೆ ಕಾಣುತ್ತಿಲ್ಲ ಎಂದು ಡಿಜಿಪಿ ಮನೋಜ್ ಮಾಳವೀಯ ಹೇಳಿದ್ದಾರೆ. “ಇದು ಈಗ ಹಳೆಯ ವೈಯಕ್ತಿಕ ದ್ವೇಷದ ಪರಿಣಾಮದಂತೆ ತೋರುತ್ತಿದೆ” ಎಂದು ಡಿಜಿಪಿ ಹೇಳಿದರು.

ಪ್ರಮುಖ ಸುದ್ದಿ :-   ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದ 35 ವರ್ಷಗಳಿಂದ ಪಕ್ಷದಲ್ಲಿದ್ದ ಪ್ರಿಯಾಂಕಾ ಗಾಂಧಿ ಆಪ್ತ ತಜೀಂದರ್ ಸಿಂಗ್ ಬಿಟ್ಟು...!

ಘಟನೆ ತನಿಖೆಗೆ ಎಸ್‌ಐಟಿ ರಚನೆ…
ಘಟನೆ ಕುರಿತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತುರ್ತು ಸಭೆ ನಡೆಸಿದ್ದು, ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆಗೆ ಸೂಚನೆ ನೀಡಿದ್ದಾರೆ.
ಮೂವರು ಸದಸ್ಯರ ಎಸ್‌ಐಟಿಯಲ್ಲಿ ಪಶ್ಚಿಮ ಬಂಗಾಳದ ಉನ್ನತ ಪೊಲೀಸ್‌ ಅಧಿಕಾರಿಗಳಾದ ಡಿಐಜಿ-ಸಿಐಡಿ ಜ್ಞಾನವಂತ್ ಸಿಂಗ್, ಉನ್ನತ ಅಧಿಕಾರಿಗಳಾದ ಮೀರಜ್ ಖಾಲಿದ್ ಮತ್ತು ಇನ್ನೊಬ್ಬ ಉನ್ನತ ಸಿಐಡಿ ಅಧಿಕಾರಿ ಸಂಜಯ್ ಸಿಂಗ್ ಸೇರಿದ್ದಾರೆ. ಇದಕ್ಕೂ ಮೊದಲು, ಕೋಲ್ಕತ್ತಾದಿಂದ ಸಿಐಡಿ ತಂಡವು ಈ ವಿಷಯದ ತನಿಖೆಗಾಗಿ ಗ್ರಾಮದ ಕಡೆಗೆ ತೆರಳಿತು.
ಫಿರ್ಹಾದ್ ಹಕೀಮ್, ರಾಮ್‌ಪುರಹತ್ ಶಾಸಕ ಆಶಿಶ್ ಬ್ಯಾನರ್ಜಿ ಮತ್ತು ನೆರೆಯ ಲ್ಯಾಬ್‌ಪುರ್ ಕ್ಷೇತ್ರದ ಶಾಸಕ ಅಭಿಜಿತ್ ಸಿನ್ಹಾ ಅವರನ್ನೊಳಗೊಂಡ ಮೂರು ಸದಸ್ಯರ ಟಿಎಂಸಿ ನಿಯೋಗವೂ ರಾಮಪುರಹತ್‌ಗೆ ತೆರಳಿದೆ.
ಭದು ಶೇಖ್ ಅವರ ಸಹೋದರ ಬಾಬರ್ ಶೇಖ್ ಅವರನ್ನು ಒಂದು ವರ್ಷದ ಹಿಂದೆ ಇದೇ ಗ್ರಾಮದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು ಎಂದು ಬಿರ್ಭೂಮ್ ಜಿಲ್ಲಾ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement