ಕ್ರೂರಮೃಗ ಬಿಡಿಸಲು ಮದುವೆ ಲೈಸನ್ಸ್‌ ಅಲ್ಲ: ಪತಿ ವಿರುದ್ಧದ ಅತ್ಯಾಚಾರ ಪ್ರಕರಣ ರದ್ದುಗೊಳಿಸಲು ನಿರಾಕರಿಸಿದ ಹೈಕೋರ್ಟ್

ಬೆಂಗಳೂರು:ವೈವಾಹಿಕ ಅತ್ಯಾಚಾರ ಪ್ರಕರಣದಲ್ಲಿ ಮಹತ್ವದ ಆದೇಶ ನೀಡಿರುವ ಕರ್ನಾಟಕ ಹೈಕೋರ್ಟ್‌ ವ್ಯಕ್ತಿಯೊಬ್ಬರ ಮೇಲೆ ಆತನ ಪತ್ನಿ ಸಲ್ಲಿಸಿದ್ದ ಅತ್ಯಾಚಾರ ಪ್ರಕರಣವನ್ನು ರದ್ದುಗೊಳಿಸಲು ನ್ಯಾ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಿರಾಕರಿಸಿದೆ.
ಮದುವೆಯು ಪುರುಷನಿಗೆ ಯಾವುದೇ ವಿಶೇಷ ಸವಲತ್ತು ನೀಡುವುದಿಲ್ಲ. ಮತ್ತು ಅತ್ಯಾಚಾರವು ಅತ್ಯಾಚಾರವೇ ಎಂದು ನ್ಯಾಯಾಲಯ ಹೇಳಿದೆ. ಕ್ರೂರ ಮೃಗವನ್ನು ಬಿಡಿಸಲು ವಿವಾಹವು ಯಾವುದೇ ಪರವಾನಗಿ ನೀಡುವುದಿಲ್ಲ ಎಂದು ತನ್ನ ಆದೇಶದಲ್ಲಿ ಹೇಳಿದೆ.

ಪತ್ನಿಯ ಮೇಲೆ ಆಕೆಯ ಒಪ್ಪಿಗೆಯಿಲ್ಲದೇ ಪತಿ ಲೈಂಗಿಕ ದೌರ್ಜನ್ಯ ನಡೆಸಬಾರದು. ನಡೆಸಿದರೆ ಅದನ್ನು ಅತ್ಯಾಚಾರ ಎಂದೇ ಕರೆಯಲಾಗುತ್ತದೆ. ಪತಿ ತನ್ನ ಪತ್ನಿಯ ಮೇಲೆ ನಡೆಸುವ ಲೈಂಗಿಕ ದೌರ್ಜನ್ಯವು ಆಕೆಯ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಇದು ಆಕೆಯ ಮೇಲೆ ಮಾನಸಿಕ ಮತ್ತು ಶಾರೀರಿಕ ಪರಿಣಾಮಗಳನ್ನು ಬೀರುತ್ತದೆ. ಗಂಡನ ಇಂತಹ ಕೃತ್ಯಗಳು ಅವರ ಪತ್ನಿಯ ಆತ್ಮವನ್ನು ಗಾಯಗೊಳಿಸುತ್ತವೆ. ಆದ್ದರಿಂದ, ಕಾನೂನು ರೂಪಿಸುವವರು ಈಗ ಮೌನ ಹೃದಯದ ಧ್ವನಿಯನ್ನು ಅಗತ್ಯವಾಗಿ ಆಲಿಸಬೇಕಿದೆ ಎಂದು ಹೈಕೋರ್ಟ್‌ ತನ್ನ ಆದೇಶದಲ್ಲಿ ಹೇಳಿದೆ.

ಪ್ರಮುಖ ಸುದ್ದಿ :-   ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರಗಳಲ್ಲೂ ತಮ್ಮ ಪಕ್ಷದಿಂದ ಸ್ಪರ್ಧೆ ; ಮಾಜಿ ಐಎಎಸ್ ಅಧಿಕಾರಿ ದಿವ್ಯಾ ಮಿತ್ತಲ್

ಗಂಡಂದಿರು ತಮ್ಮ ಹೆಂಡತಿಯರ ದೇಹ, ಮನಸ್ಸು ಮತ್ತು ಆತ್ಮದ ಆಡಳಿತಗಾರರು ಎಂಬ ಹಳೆಯ ಚಿಂತನೆ ಮತ್ತು ಸಂಪ್ರದಾಯದಿಂದ ಹೊರಬರಬೇಕು ಎಂದು ಹೈಕೋರ್ಟ್ ಹೇಳಿದೆ. ಈ ಪುರಾತನ ಮತ್ತು ಪೂರ್ವಾಗ್ರಹಪೀಡಿತ ಕಲ್ಪನೆಯಿಂದ ದೇಶದಲ್ಲಿ ಇಂತಹ ಪ್ರಕರಣಗಳು ಹೆಚ್ಚುತ್ತಿವೆ ಎಂದು ಆದೇಶದಲ್ಲಿ ಹೇಳಲಾಗಿದೆ.
ವಿವಾಹದ ಅಡಿಯಲ್ಲಿ ಪತಿಯನ್ನು ರಕ್ಷಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಪತಿ ಎಂಬ ಕಾರಣಕ್ಕಾಗಿ ಯಾವುದೇ ಪುರುಷನನ್ನು ಅತ್ಯಾಚಾರ ಆರೋಪಗಳಿಂದ ವಿನಾಯಿತಿ ನೀಡುವುದು ಕಾನೂನಿನಲ್ಲಿನ ಅಸಮಾನತೆಯನ್ನು ತೋರಿಸುತ್ತದೆ. ಹಾಗೂ ಇದು ಸಂವಿಧಾನದ ಉಲ್ಲಂಘನೆಯಾಗಿದೆ. ಸಂವಿಧಾನದ ಅಡಿಯಲ್ಲಿ ಮಹಿಳೆ ಮತ್ತು ಪುರುಷ ಸಮಾನರಾಗಿದ್ದು, ಐಪಿಸಿ ಸೆಕ್ಷನ್‌ 375ರಲ್ಲಿ ಯಾವುದೇ ವಿನಾಯಿತಿಯನ್ನು ಪಡೆಯಲು ಸಾಧ್ಯವಿಲ್ಲ. ಪುರುಷನು ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಅಥವಾ ಅತ್ಯಾಚಾರ ಎಸಗುವುದು ಐಪಿಸಿಯ ಸೆಕ್ಷನ್ 376 ರ ಅಡಿಯಲ್ಲಿ ಶಿಕ್ಷೆಗೆ ಅರ್ಹವಾಗಿದೆ. avnu ಅವನು ಗಂಡನಾಗಿದ್ದರೂ ಕೂಡ ಎಂದು ಕೋರ್ಟ್ ಹೇಳಿದೆ. ಕಾನೂನಿನಲ್ಲಿ ಅಂತಹ ಅಸಮಾನತೆಗಳ ಅಸ್ತಿತ್ವದ ಬಗ್ಗೆ ಸರ್ಕಾರಗಳು ಚಿಂತಿಸಬೇಕಾಗಿದೆ ಎಂದು ಹೈಕೋರ್ಟ್ ಹೇಳಿದೆ.
ವೈವಾಹಿಕ ಅತ್ಯಾಚಾರವನ್ನು ಅಮೆರಿಕದ 50 ರಾಜ್ಯಗಳಲ್ಲಿ, ಆಸ್ಟ್ರೇಲಿಯಾದ 3 ರಾಜ್ಯಗಳಲ್ಲಿ, ನ್ಯೂಜಿಲೆಂಡ್, ಕೆನಡಾ, ಇಸ್ರೇಲ್, ಫ್ರಾನ್ಸ್, ಸ್ವೀಡನ್, ಡೆನ್ಮಾರ್ಕ್, ನಾರ್ವೆ, ಸೋವಿಯತ್ ಯುನಿಯನ್, ಪೋಲೆಂಡ್ ಮತ್ತು ಜೆಕೊಸ್ಲೊವಾಕಿಯಾ ಸೇರಿ ಹಲವಾರು ಇತರ ದೇಶಗಳಲ್ಲಿ ಕಾನೂನುಬಾಹಿರ ಎಂದು ಹೇಳಲಾಗಿದೆ ಎಂದು ಹೈಕೋರ್ಟ್‌ ಹೇಳಿದೆ.

ಪ್ರಮುಖ ಸುದ್ದಿ :-   ಬೆಂಗಳೂರಿನ ಸ್ಫೋಟ ಪ್ರಕರಣ ಭೇದಿಸಿದ ಪೊಲೀಸರು: ವೈಯಕ್ತಿಕ ದ್ವೇಷವೇ ಕೃತ್ಯಕ್ಕೆ ಕಾರಣ ; ಮೂವರ ಬಂಧನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement