ಚಂಡೀಗಡ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಎಲ್ಲಾ ಶಾಸಕರಿಗೆ ಕೇವಲ ಒಂದು ಪಿಂಚಣಿ ಮಾತ್ರ ನೀಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ. ಎಷ್ಟು ಬಾರಿ ಗೆದ್ದರೂ ಕೂಡಾ ಒಂದೇ ಪಿಂಚಣಿ ಎಂದು ಸ್ಪಷ್ಟಪಡಿಸಿರುವ ಅವರು, ಶಾಸಕರ ಕುಟುಂಬ ಪಿಂಚಣಿಯನ್ನೂ ಕೂಡಾ ಕಡಿತಗೊಳಿಸಿದ್ದಾರೆ.
ಎಷ್ಟು ಬಾರಿ ಗೆದ್ದರೂ ಒಂದು ಅವಧಿಗೆ ಮಾತ್ರ ಪಿಂಚಣಿ ಪಡೆಯುತ್ತಾರೆ ಹಾಗೂ ಶಾಸಕರ ಕುಟುಂಬಗಳಿಗೆ ನೀಡುವ ಭತ್ಯೆಯಲ್ಲಿಯೂ ಕಡಿತಗೊಳಿಸಲಾಗುವುದು ಎಂದು ಮಾನ್ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.
ಹಲವು ಶಾಸಕರು ವಿಧಾನಸಭೆಯಲ್ಲಿ ಜನಪ್ರತಿನಿಧಿಗಳಾಗಿ ಸೇವೆ ಸಲ್ಲಿಸುವ ಪ್ರತಿ ಅವಧಿಗೆ ಬಹು ಪಿಂಚಣಿ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಪಿಂಚಣಿ ಕಡಿತಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
advertisement
9535127775 / 9901837775 / 6364528715 / 08362775155 / https://icsmpucollege.com/
ರಾಜಕಾರಣಿಗಳು ಸೇವೆ ಮಾಡುವ ಹೆಸರಿನಲ್ಲಿ ಜನರಿಂದ ಮತ ಕೇಳಲು ಕೈ ಜೋಡಿಸಿ ಜನರ ಬಳಿಗೆ ಹೋಗುತ್ತಾರೆ. ಆದರೆ ಮೂರು, ಐದು ಅಥವಾ ಆರು ಅವಧಿಗೆ ಶಾಸಕರಾಗಿ ಆಯ್ಕೆಯಾದವರು ಪಿಂಚಣಿ ಹೆಸರಿನಲ್ಲಿ ಲಕ್ಷಾಂತರ ಹಣವನ್ನು ಪಡೆಯುತ್ತಿದ್ದಾರೆ. ಅದನ್ನು ನಾವು ಆಲೋಚನೆ ಮಾಡಿದರೆಯೇ ನಮಗೆ ಆಘಾತವಾಗುತ್ತದೆ. ಅವರು ವಿಧಾನಸಭೆಗೂ ಬರುವುದಿಲ್ಲ,” ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಹೇಳಿದ್ದಾರೆ.
ಶಾಸಕರು ಹಲವಾರು ಬಾರಿ ಶಾಸಕರಾಗಿ ಆಯ್ಕೆಯಾದ ನೆಪದಲ್ಲಿ 3.50 ಲಕ್ಷದಿಂದ 5.25 ಲಕ್ಷದವರೆಗೆ ಪಿಂಚಣಿಯನ್ನು ಪಡೆಯುತ್ತಿದ್ದಾರೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಹೊರೆಯಾಗುತ್ತಿದೆ. ಕೆಲವರು ಸಂಸತ್ತಿನ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ ಮತ್ತು ಅಲ್ಲಿಯೂ ಪಿಂಚಣಿಯನ್ನೂ ಪಡೆಯುತ್ತಾರೆ ಎಂದರು.
ಒಬ್ಬ ಶಾಸಕರಿಗೆ ಒಂದು ಪಿಂಚಣಿ” ಎಂಬ ಬೇಡಿಕೆಯನ್ನು ಆಮ್ ಆದ್ಮಿ ಪಕ್ಷವು (ಎಎಪಿ) ಕಳೆದ ವಿಧಾನಸಭೆಯಲ್ಲಿ ಪಕ್ಷ ವಿರೋಧ ಪಕ್ಷದಲ್ಲಿದ್ದಾಗ ಕೂಡ ಮಾಡಿತ್ತು. ಒಂದು ಅಧಿಕಾರವಧಿಯಲ್ಲಿ ಶಾಸಕರು ಸುಮಾರು 75,150 ಪಿಂಚಣಿ ರೂಪದಲ್ಲಿ ಪಡೆಯುತ್ತಾರೆ. ಶಾಸಕರು ಸೇವೆ ಸಲ್ಲಿಸುವ ಪ್ರತಿ ಅವಧಿಯ ಬಳಿಕ ಪಂಜಾಬ್‌ನ ಶಾಸಕರಿಗೆ ಪಿಂಚಣಿ ಮೊತ್ತದ ಹೆಚ್ಚುವರಿ 66 ಪ್ರತಿಶತವನ್ನು ನೀಡಲಾಗುತ್ತದೆ.
ನಿಮ್ಮ ಕಾಮೆಂಟ್ ಬರೆಯಿರಿ