67 ವರ್ಷದ ವೃದ್ಧೆ ಜೊತೆ ಲಿವಿಂಗ್​ ಟುಗೆದರ್​ಗೆ ನೋಟರಿ ಮಾಡಿಸಿದ 28ರ ಯುವಕ..!

ಗ್ವಾಲಿಯರ್​: ಯುವಕನೊಬ್ಬ ವೃದ್ಧೆಯೊಬ್ಬಳ ಜೊತೆ ಲಿವಿಂಗ್​ ರಿಲೇಶನ್​​ಶಿಪ್​ ಸಂಬಂಧವನ್ನು ನೋಟರಿ ಮಾಡಿಸಿರುವ ವಿಚಿತ್ರ ಪ್ರಕರಣ ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ ನಡೆದಿದೆ ಎಂದು ವರದಿಯಾಗಿದೆ..!
ಮೊರೆನಾ ಜಿಲ್ಲೆಯ 28 ವರ್ಷದ ಭೋಲುಮ್​ ಎಂಬಾತ 67 ವರ್ಷದ ರಾಮಕಾಲಿ ಜೊತೆ ಲಿವಿಂಗ್​ ರಿಲೇಶನ್​​ಶಿಪ್​ ಹೊಂದಿದ್ದು, ತಮ್ಮ ಸಂಬಂಧವನ್ನು ಗ್ವಾಲಿಯರ್ ಜಿಲ್ಲಾ​ ನ್ಯಾಯಾಲಯದಲ್ಲಿ ಮಂಗಳವಾರ ನೋಟರಿ ಮಾಡಿಸಿಕೊಂಡಿದ್ದಾರೆ.

ರಾಮಕಾಲಿ ಮತ್ತು ಭೋಲುಮ್​ ಇಬ್ಬರು ಸಹ ಕೈಲಾರಸ್​ ನಿವಾಸಿಗಳು. ಇಬ್ಬರು ಮದುವೆ ಮಾಡಿಕೊಳ್ಳಲು ಬಯಸಿಲ್ಲ. ಆದರೆ, ಭವಿಷ್ಯದಲ್ಲಿ ತಮ್ಮ ಸಂಬಂಧದ ಬಗ್ಗೆ ಯಾವುದೇ ಜಗಳಗಳು ಹಾಗೂ ನೆರೆಹೊರೆಯವರಿಂದ ತೊಂದರೆ ಉಂಟಾಗಬಾರದು ಎಂದು ಮುಂಚಿತವಾಗಿ ನೋಟರಿ ಮಾಡಲು ಬಂದಿದ್ದೇವೆ ಎಂದು ತಮ್ಮ ಲಿವಿಂಗ್​ ರಿಲೇಶನ್​ಶಿಪ್​ ನೋಟರಿ ಮಾಡಿಸಿಕೊಂಡಿದ್ದಕ್ಕೆ ದಂಪತಿ ಕಾರಣ ನೀಡಿದ್ದಾರೆ.
ಇಬ್ಬರು ನೋಟರಿ ಮಾಡಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಕೀಲ ಪ್ರದೀಪ್ ಅವಸ್ಥಿ, ‘ ನೋಟರಿಯಂತಹ ದಾಖಲೆಗಳು ಕಾನೂನುಬದ್ಧವಾಗಿಲ್ಲದಿದ್ದರೂ ವಿವಾದಗಳನ್ನು ತಪ್ಪಿಸಲು’ ದಂಪತಿಗಳು ಲಿವಿಂಗ್​ ರಿಲೇಶನ್​ಶಿಪ್​ ನೋಟರಿ ಮಾಡಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

advertisement

ನಿಮ್ಮ ಕಾಮೆಂಟ್ ಬರೆಯಿರಿ