ಆರ್‌ಎಸ್‌ಎಸ್‌ ವಿರೋಧಿ ಬರಹ ಪ್ರಶ್ನಿಸಿ ಅದರ ಸದಸ್ಯರು ಮಾನನಷ್ಟ ಮೊಕದ್ದಮೆ ಹೂಡಬಹುದು: ಕೇರಳ ಹೈಕೋರ್ಟ್‌ ತೀರ್ಪು ಎತ್ತಿ ಹಿಡಿದ ಸುಪ್ರೀಂ ಕೋರ್ಟ್

ನವದೆಹಲಿ: ತನ್ನ ಸಂಘಟನೆ ವಿರುದ್ಧ ಅವಹೇಳನಕಾರಿ ಸಂಗತಿಗಳನ್ನು ಪ್ರಕಟಿಸಿದ ಸುದ್ದಿ ಸಂಸ್ಥೆಯ ವಿರುದ್ಧ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸದಸ್ಯರೊಬ್ಬರು ನೀಡಿದ ದೂರನ್ನು ಐಪಿಸಿ ಸೆಕ್ಷನ್‌ 499ರ ಅಡಿ ವಿಚಾರಣೆ ನಡೆಸಬಹುದು ಎಂದು  ಕೇರಳ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಶುಕ್ರವಾರ ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದೆ.
ಕೇರಳ ಹೈಕೋರ್ಟ್‌ ತೀರ್ಪು ಸುಪ್ರೀಂಕೋರ್ಟ್‌ನ ಯಾವುದೇ ಮಧ್ಯಪ್ರವೇಶಕ್ಕೆ ಆಸ್ಪದವೀಯುವಂತೆ ಇಲ್ಲ ಎಂದು ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ ಮತ್ತು ಅನಿರುದ್ಧ ಬೋಸ್ ಅವರಿದ್ದ ಪೀಠ ಅಭಿಪ್ರಾಯಪಟ್ಟಿದ್ದು ಮಾಧ್ಯಮ ಸಂಸ್ಥೆ ಮಾತೃಭೂಮಿ ಪ್ರಿಂಟಿಂಗ್ ಮತ್ತು ಪಬ್ಲಿಷಿಂಗ್ ಕಂ. ಲಿಮಿಟೆಡ್‌ ಮನವಿಯನ್ನು ವಜಾಗೊಳಿಸಿದೆ.

ಆರ್‌ಎಸ್‌ಎಸ್‌ ಒಂದು ಗುರುತಿಸಲ್ಪಡುವ ಸಂಸ್ಥೆಯಾಗಿರುವುದರಿಂದ ಸಂಘಟನೆಯನ್ನು ದೂಷಿಸುವ ಲೇಖನಗಳ ವಿರುದ್ಧ ದೂರು ನೀಡಲು ಅದರ ಸದಸ್ಯರಿಗೆ ಕಾನೂನಾತ್ಮಕ ಅಧಿಕಾರ (ಲೋಕಸ್‌ ಸ್ಟ್ಯಾಂಡಿ) ಇದೆ ಎಂದು ಪ್ರಕರಣದ ಕುರಿತು ತೀರ್ಪು ನೀಡಿದ್ದ ಕೇರಳ ಹೈಕೋರ್ಟ್‌ ನ್ಯಾಯಮೂರ್ತಿ ಸೋಫಿ ಥಾಮಸ್ ಅಭಿಪ್ರಾಯಪಟ್ಟಿದ್ದರು.
ಪ್ರಕರಣದ ವಿಚಾರಣೆಯನ್ನು ತ್ವರಿತಗೊಳಿಸುವಂತೆ ಮತ್ತು ಕಾನೂನು ಪ್ರಕಾರ ಪ್ರಕರಣವನ್ನು ವಿಲೇವಾರಿ ಮಾಡದಂತೆ ಕೇರಳ ಹೈಕೋರ್ಟ್ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿತ್ತು.
ಮಾನನಷ್ಟ ಮೊಕದ್ದಮೆಯೊಂದರಲ್ಲಿ ಆರೋಪಿಗಳು ಎರ್ನಾಕುಲಂ ಕೋರ್ಟ್‌ನಲ್ಲಿ ನಡೆಯುತ್ತಿರುವ ಪ್ರಕರಣದ ಸಂಪೂರ್ಣ ವಿಚಾರಣೆಯನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿರುವ ಮನವಿಯನ್ನು ಹೈಕೋರ್ಟ್ ವಿಚಾರಣೆ ನಡೆಸಿತು.

ಪ್ರಮುಖ ಸುದ್ದಿ :-   ತಾಯಿಯ ಸಂಪತ್ತು ಉಳಿಸಿಕೊಳ್ಳಲು ಪಿತ್ರಾರ್ಜಿತ ತೆರಿಗೆ ಕಾನೂನು ರದ್ದುಗೊಳಿಸಿದ ರಾಜೀವ ಗಾಂಧಿ : ಪ್ರಧಾನಿ ಮೋದಿ ಆರೋಪ

ಆರ್‌ಎಸ್‌ಎಸ್‌ನ ಕೇರಳ ರಾಜ್ಯ ಕಾರ್ಯದರ್ಶಿ ಸಲ್ಲಿಸಿದ ಖಾಸಗಿ ದೂರಿನ ಮೇರೆಗೆ ಮಾತೃಭೂಮಿ ಇಲ್ಲಸ್ಟ್ರೇಟೆಡ್ ವೀಕ್ಲಿ ವಿರುದ್ಧ ದೂರನ್ನು ದಾಖಲಿಸಲಾಗಿದೆ, ಐಪಿಸಿಯ ಸೆಕ್ಷನ್ 34 ರೊಂದಿಗೆ ಸೆಕ್ಷನ್ 120 ಬಿ, 153 ಎ, 500 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳನ್ನು ಆರೋಪಿಸಲಾಗಿದೆ.
ಹೆಚ್ಚುವರಿ ಮುಖ್ಯ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ವಿಚಾರಣೆ ರದ್ದುಗೊಳಿಸುವಂತೆ ಮಾತೃಭೂಮಿ ಇಲ್ಲಸ್ಟ್ರೇಟೆಡ್ ವೀಕ್ಲಿ ಮತ್ತು ಅದರ ಕೆಲ ವರದಿಗಾರರು, ಸಂಪಾದಕರು ಮತ್ತು ಚಿತ್ರಕಲಾವಿದರು ಹೈಕೋರ್ಟ್‌ ಮೊರೆ ಹೋಗಿದ್ದರು. ತೀರ್ಪು ತಮ್ಮ ವಿರುದ್ಧವಾಗಿ ಬಂದ ಬಳಿಕ ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ಸಂಘವು ನಿರ್ಣಾಯಕ ಮತ್ತು ಗುರುತಿಸಬಹುದಾದ ಸಂಸ್ಥೆಯಾಗಿದ್ದಾಗ, ಆ ಸಂಘದ ವಿರುದ್ಧ ಬಳಸಿದ ಅವಹೇಳನಕಾರಿ ಪದಗಳನ್ನು ಬಳಸಿದ್ದನ್ನು ಮಾನನಷ್ಟ ಎಂದು ಪರಿಗಣಿಸಬಹುದು. ಆದ್ದರಿಂದ, ಆ ಸಂಘದ ಯಾವುದೇ ಸದಸ್ಯರು ಐಪಿಸಿಯ ಸೆಕ್ಷನ್ 500 ರ ಅಡಿಯಲ್ಲಿ ದೂರನ್ನು ನಿರ್ವಹಿಸಬಹುದು,” ಎಂದು ಕೇರಳ ಹೈಕೋರ್ಟ್ ಹೇಳಿತ್ತು  ಕೇರಳ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್‌  ಎತ್ತಿ ಹಿಡಿದಿದೆ.
.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement