ಉತ್ತರಾಖಂಡ​ ರಾಜ್ಯದ ಇತಿಹಾಸದಲ್ಲೇ ಮೊದಲ ಮಹಿಳಾ ಸ್ಪೀಕರ್ ಆಗಿ ರಿತು ಖಂಡೂರಿ ಭೂಷಣ್ ಆಯ್ಕೆ

ಡೆಹ್ರಾಡೂನ್: ಉತ್ತರಾಖಂಡದ ನೂತನ ಸ್ಪೀಕರ್ (5ನೇ ಸ್ಪೀಕರ್​)​ ಆಗಿ ರಿತು ಖಂಡೂರಿ ಭೂಷಣ್​​ ಅವಿರೋಧವಾಗಿ ಆಯ್ಕೆಯಾಗಿದ್ದು, ಉತ್ತರಾಖಂಡ್​ ಇತಿಹಾಸದಲ್ಲಿಯೇ ಮೊದಲ ಮಹಿಳಾ ಸ್ಪೀಕರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಉತ್ತರಾಖಂಡದ ಕೋಟ್‌ದ್ವಾರ ವಿಧಾನಸಭೆ ಕ್ಷೇತ್ರದ ಶಾಸಕಿಯಾಗಿರುವ ಅವರು ಗುರುವಾರ ಡೆಹ್ರಾಡೂನ್​​ನಲ್ಲಿ ಮುಖ್ಯಮಂತ್ರಿ ಪುಷ್ಕರ್​ ಸಿಂಗ್​ ಧಾಮಿ ಮತ್ತು ಇತರ ಬಿಜೆಪಿ ನಾಯಕರ ಸಮ್ಮುಖದಲ್ಲಿ ವಿಧಾನಸಭೆ ಕಾರ್ಯದರ್ಶಿ ಮುಖೇಶ್ ಸಿಂಘಾಲ್​ಗೆ ತಮ್ಮ ನಾಮಪತ್ರ ಸಲ್ಲಿಕೆ ಮಾಡಿದ್ದರು.

ಉತ್ತರಾಖಂಡ್​ ವಿಧಾನಸಭೆ ಅಧ್ಯಕ್ಷರಾಗಿ ನೇಮಕವಾಗುತ್ತಿದ್ದಂತೆ ಟ್ವೀಟ್ ಮಾಡಿರುವ ರಿತು, ಬಿಜೆಪಿ ಸದಸ್ಯರು ಮತ್ತು ಪ್ರತಿಪಕ್ಷಗಳ ನಾಯಕರಿಗೆ ನನ್ನ ಧನ್ಯವಾದಗಳು. ಸಂಸದೀಯ ಸಂಪ್ರದಾಯ ಮತ್ತು ಪರಿಕಲ್ಪನೆಗಳನ್ನು ಸಾಕಾರಗೊಳಿಸಲು ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ್ದಾರೆ.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉತ್ತರಾಖಂಡದ ಮೊದಲ ಮಹಿಳಾ ಸ್ಪೀಕರ್​ ಆಗಿ ನಾನು ನೇಮಕಗೊಳ್ಳುತ್ತಿರುವುದು ಬರೀ ನನಗಷ್ಟೇ ಹೆಮ್ಮೆಯ ವಿಚಾರವಲ್ಲ, ಇಡೀ ಉತ್ತರಾಖಂಡದ​ ಪಾಲಿಗೇ ಹೆಮ್ಮೆ. ಮಹಿಳೆಯೊಬ್ಬರಿಗೆ ಪ್ರಾಶಸ್ತ್ಯ ನೀಡಿದ್ದು ನಿಜಕ್ಕೂ ಖುಷಿ ತಂದಿದೆ ಎಂದು ಹೇಳಿದ್ದಾರೆ.

ರಿತು ಅವರು ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಮೇಜರ್ ಜನರಲ್​ (ನಿವೃತ್ತ) ಭುವನ್ ಚಂದ್ರ ಖಂಡೂರಿ ಅವರ ಪುತ್ರಿ. ಈ ಬಾರಿ ಕೋಟ್‌ದ್ವಾರ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಕಾಂಗ್ರೆಸ್​​ನ ಸುರೇಂದ್ರ ಸಿಂಗ್ ನೇಗಿಯವರ ವಿರುದ್ಧ ಸುಮಾರು 3,687 ಮತಗಳ ಅಂತರದಿಂದ ಗೆದ್ದಿದ್ದಾರೆ. ಒಂದು ಗಮನಾರ್ಹ ಸಂಗತಿಯೆಂದರೆ ಇದೇ ಕ್ಷೇತ್ರದಲ್ಲಿ ರಿತು ಅವರ ತಂದೆ ಭುವನ್​ ಚಂದ್ರ ಖಂಡೂರಿಯವರನ್ನು ಸುರೇಂದ್ರ ಸಿಂಗ್ ನೇಗಿ 2012ರಲ್ಲಿ ಸೋಲಿಸಿದ್ದರು. ರಿತು 2017ರಲ್ಲಿ ಉತ್ತರಾಖಂಡ್​ನ ಯಮ್ಕೇಶ್ವರ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ಆದರೆ ಈ ಬಾರಿ ಬಿಜೆಪಿ ನಿಕೋಟ್​ದ್ವಾರದಿಂದ ನೀಡಿತ್ತು.
ಭುವನ್ ಚಂದ್ರ ಖಂಡೂರಿ ಉತ್ತರಾಖಂಡ್​​ನಲ್ಲಿ 2007ರಿಂದ 2009ರವರೆಗೆ ಮುಖ್ಯಮಂತ್ರಿಯಾಗಿದ್ದರು. ಮತ್ತೆ 2011-2012ರವರೆಗೆ ಕೂಡ ಸಿಎಂ ಹುದ್ದೆಯಲ್ಲಿ ಇದ್ದರು.

ಪ್ರಮುಖ ಸುದ್ದಿ :-   ʼಗೋವಾದ ಮೇಲೆ ಬಲವಂತವಾಗಿ ಭಾರತದ ಸಂವಿಧಾನದ ಹೇರಿಕೆ ; ಕಾಂಗ್ರೆಸ್ ಅಭ್ಯರ್ಥಿ ಹೇಳಿಕೆಯಿಂದ ಭುಗಿಲೆದ್ದ ವಿವಾದ : ದೇಶ ಒಡೆಯುವ ಹುನ್ನಾರ ಎಂದ ಪ್ರಧಾನಿ ಮೋದಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement