ಕಣ್ಣೂರು (ಕೇರಳ): ಶಾಲಾ ಬಾಲಕನೊಬ್ಬ ಸಾವಿನ ಮನೆ ಕದತಟ್ಟಿ ವಾಪಸ್ ಬಂದ ಘಟನೆಯ ವೀಡಿಯೋ ವೈರಲ್ ಆಗಿದೆ. 8 ವರ್ಷದ ಬಾಲಕನೊಬ್ಬ ಕೆಲವೇ ಸೆಕೆಂಡುಗಳಲ್ಲಿ ಒಂದಲ್ಲ ಎರಡು ಬಾರಿ ಸಾವಿನಿಂದ ಪಾರಾಗಿದ್ದಾನೆ…!
ಒಂದು ಕ್ಷಣ ತಡವಾಗಿದ್ದರೂ ಬಾಲಕ ಬಸ್ ಚಕ್ರದ ಅಡಿಗೆ ಸಿಲುಕಿ, ಭೀಕರವಾಗಿ ಸಾವಿಗೀಡಾಗುತ್ತಿದ್ದ. ಆದರೆ ಅದೃಷ್ಟವಶಾತ್ ಪಾರಾಗಿದ್ದಾನೆ.
ಅದಕ್ಕೂ ಮೊದಲು ಬೈಕ್‌ಗೆ ಡಿಕ್ಕಿ ಹೊಡೆಯುತ್ತಿದ್ದ. ಆದರೆ ಕೂದಲೆಳೆಯ ಅಂತರದಿಂದ ಭೀಕರ ಅಪಘಾತದಿಂದ ಪಾರಾಗಿದ್ದಾನೆ. ಈ ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ.
ಕೇರಳದ ಕಣ್ಣೂರು ಜಿಲ್ಲೆಯ ತಳಿಪರಂಬ ಸಮೀಪದ ಚೋರುಕ್ಕಲ ಎಂಬ ಗ್ರಾಮದಲ್ಲಿ ಈ ಭಯಾನಕ ಘಟನೆ ನಡೆದಿದೆ. ಕೆಲ ದಿನಗಳ ಹಿಂದಷ್ಟೇ 8 ವರ್ಷದ ಬಾಲಕನೊಬ್ಬ ಕೆಲವೇ ಸೆಕೆಂಡುಗಳಲ್ಲಿ ಒಂದಲ್ಲ ಎರಡು ಬಾರಿ ಸಾವಿನಿಂದ ಪಾರಾಗಿದ್ದಾನೆ. ಬೈಕ್ ಆ್ಯಕ್ಸಿಡೆಂಟ್‌ನಿಂದ ತಪ್ಪಿಸಿಕೊಂಡ ಬಾಲಕ, ಮತ್ತೆ ಸ್ವಲ್ಪದರಲ್ಲೇ ವೇಗವಾಗಿ ಬರುತ್ತಿದ್ದ ಬಸ್‌ನಿಂದ ಪಾರಾಗಿದ್ದಾನೆ.
advertisement
9535127775 / 9901837775 / 6364528715 / 08362775155 / https://icsmpucollege.com/
ರಸ್ತೆಯಲ್ಲಿ ಬಾಲಕ ತನ್ನ ಸೈಕಲ್ ಮೇಲೆ ಕುಳಿತು ವೇಗವಾಗಿ ಬಂದಿದ್ದಾನೆ. ರಸ್ತೆಗೆ ಸೈಕಲ್ ಮೇಲೆ ವೇಗವಾಗಿ ಬರುತ್ತಿದ್ದಂತೆ ಎದುರಿನಿಂದ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಸೈಕಲ್‌ನಿಂದ ಉರುಳಿ ಬಿದ್ದಿದ್ದಾನೆ. ಬಳಿಕ ಅವನು ರಸ್ತೆಯಿಂದ ಸ್ಕಿಡ್ ಆಗುತ್ತಿದ್ದಂತೆ, ಮೋಟಾರ್‌ಬೈಕ್‌ನ ಹಿಂದೆ ಬಂದ ಕೇರಳ ರಾಜ್ಯ ಸಾರಿಗೆ ಬಸ್ ಹುಡುಗನ ಸೈಕಲ್ ಮೇಲೆ ಚಲಿಸಿದೆ. ಆದರೆ ಅಲ್ಲೇ ರಸ್ತೆ ಪಕ್ಕದಲ್ಲಿ ಹಾರಿ ಬಿದ್ದ ಬಾಲಕ, ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಬಸ್ ಬೈಸಿಕಲ್ ಮೇಲೆ ಚಲಿಸುತ್ತಿದ್ದಂತೆ, ಅದರ ಹಿಂದೆಯೇ ಒಂದು ಕಾರೊಂದು ಬಂದು, ಸೈಡಿಗೆ ನಿಂತಿದೆ. ರಸ್ತೆಯ ಇನ್ನೊಂದು ಬದಿಗೆ ಉರುಳಿದ ಹುಡುಗ ಬಿದ್ದಿದ್ದಾನೆ. ಬಳಿಕ ಗಾಬರಿಯಿಂದ ಮತ್ತೆ ಎದ್ದು ಬರುತ್ತಿರುವುದು ಕಂಡುಬಂದಿದೆ. ಆಗ ಸುಮುತ್ತಲಿದ್ದವರು ಓಡಿ ಬಂದು ಬಾಲಕನನ್ನು ಎತ್ತುತ್ತಾರೆ.
ಇದೆಲ್ಲ ಕೆಲವೇ ಸೆಕೆಂಡುಗಳಲ್ಲಿ ನಡೆದಿದೆ. ಈ ಭಯಾನಕ ಘಟನೆಯಲ್ಲಿ ಬಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಬಾಲಕ ಸಾವಿನ ದವಡೆಯಿಂದ ಪಾರಾಗಿದ್ದಾನೆ.
ನಿಮ್ಮ ಕಾಮೆಂಟ್ ಬರೆಯಿರಿ