ಗುಜರಾತಿನ ಸೂರತ್‌ ನಗರದಲ್ಲಿ ದೇಶದ ಮೊದಲ ‘ಸ್ಟೀಲ್ ರಸ್ತೆ’ ನಿರ್ಮಾಣ…! ವೀಕ್ಷಿಸಿ

ಗುಜರಾತ್: ಭಾರತದ ಡೈಮಂಡ್ ಸಿಟಿ ಸೂರತ್ ನಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ಉಕ್ಕಿನ ತ್ಯಾಜ್ಯದಿಂದ ರಸ್ತೆ ನಿರ್ಮಾಣ ಮಾಡಲಾಗಿದೆ.
ಸಂಶೋಧನೆಯ ಭಾಗವಾಗಿ, ಸೂರತ್ ನಗರದಲ್ಲಿ ಹಜಿರಾ ಕೈಗಾರಿಕಾ ಪ್ರದೇಶದಲ್ಲಿ ದೇಶದ ಮೊದಲ ಉಕ್ಕಿನ ತ್ಯಾಜ್ಯದಿಂದ ದೇಶದಲ್ಲಿಯೇ ಮೊದಲ ರಸ್ತೆ ನಿರ್ಮಾಣ ಮಾಡಲಾಗಿದ್ದು, ಆರು ಪಥಗಳ ಒಂದು ಕಿಮೀ ಉದ್ದದ ಸ್ಟೀಲ್ ರಸ್ತೆ ನಿರ್ಮಾಣವಾಗಿದೆ. ಇದರ ಮೇಲೆ ಈಗಾಗಲೇ ಟನ್ನುಗಟ್ಟಲೆ ಭಾರವನ್ನು ಹೊತ್ತ ಸಾವಿರಕ್ಕೂ ಅಧಿಕ ಟ್ರಕ್ಕುಗಳು ಸಂಚರಿಸಿದ್ದು, ರಸ್ತೆಗೆ ಯಾವುದೇ ಹಾನಿಯಾಗಿಲ್ಲ.

ಹೀಗಾಗಿ ಈ ರಸ್ತೆ ಸಂಪೂರ್ಣವಾಗಿ ಯಶಸ್ವಿಯಾಗುವ ಭರವಸೆಯನ್ನು ಅಧಿಕಾರಿಗಳು ಹೊಂದಿದ್ದಾರೆ.
ಈ ರಸ್ತೆಯನ್ನು ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (CSIR) ಮತ್ತು ಸೆಂಟ್ರಲ್ ರೋಡ್ ರಿಸರ್ಚ್ ಇನ್‌ಸ್ಟಿಟ್ಯೂಟ್ (CRRI) ಉಕ್ಕು ಮತ್ತು ನೀತಿ ಆಯೋಗದ ಸಹಾಯದಿಂದ ಪ್ರಾಯೋಜಿಸಲಾಗಿದೆ.
ಸ್ಟೀಲ್ ತ್ಯಾಜ್ಯ ಮರುಬಳಕೆಯ ಸಂಶೋಧನೆ ಭಾಗವಾಗಿ ಈ ಸ್ಟೀಲ್ ರಸ್ತೆ ನಿರ್ಮಾಣವಾಗಿದ್ದು, ಸ್ಟೀಲ್ ರಸ್ತೆ ದೀರ್ಘಕಾಲ ಬಾಳಿಕೆ ಬರುವುದಲ್ಲದೆ, ಮಳೆಗಾಲದಲ್ಲಿ ರಸ್ತೆ ಅಪಘಾತಗಳು ಸಹ ಕಡಿಮೆ ಎಂದು ಹೇಳಲಾಗಿದೆ. ಪ್ರತಿ ವರ್ಷ ದೇಶಾದ್ಯಂತ ವಿವಿಧ ಸ್ಥಾವರಗಳಿಂದ ಉತ್ಪತ್ತಿಯಾಗುವ 1.9 ಕೋಟಿ ಟನ್‌ಗಳಷ್ಟು ಉಕ್ಕಿನ ತ್ಯಾಜ್ಯ ಶೀಘ್ರದಲ್ಲೇ ಇಂಥ ರಸ್ತೆಗೆ ಬಳಕೆಯಾಗಬಹುದು. ಇದನ್ನು ಹೆಚ್ಚು ಬಾಳಿಕೆ ಬರುವಂತೆಯೂ ಮಾಡಬಹುದು ಎಂಬ ವಿಶ್ವಾಸವನ್ನು ಹೊಂದಲಾಗಿದೆ.

ಗುಜರಾತ್‌ನ ಹಾಜಿರಾ ಬಂದರಿನಲ್ಲಿರುವ ಈ 1-ಕಿಲೋಮೀಟರ್ ಉದ್ದದ ರಸ್ತೆಯು ಹಲವಾರು ಟನ್‌ಗಳಷ್ಟು ತೂಕದ ಟ್ರಕ್‌ಗಳ ಸಾಗಾಟದಿಂದ ಸಂಪೂರ್ಣವಾಗಿ ಹಾಳಾಗಿತ್ತು. ಈಗ ಒಂದು ಪ್ರಯೋಗದಉದ್ದೇಶದಿಂದ ಈ ರಸ್ತೆಯನ್ನು ಸಂಪೂರ್ಣವಾಗಿ ಉಕ್ಕಿನ ತ್ಯಾಜ್ಯದಿಂದ ನಿರ್ಮಾಣ ಮಾಡಲಾಗಿದೆ, ಈಗ ಪ್ರತಿದಿನ 18 ರಿಂದ 30 ಟನ್‌ ತೂಕದ 1,000 ಟ್ರಕ್‌ಗಳು ಈ ಸ್ಟೀಲ್‌ ರಸ್ತೆಯಲ್ಲಿ ಆಗುತ್ತಿವೆ. ಹೆಚ್ಚು, ಸಾಗುತ್ತಿವೆ, ಆದರೆ ರಸ್ತೆ ಹಾಳಾಗದೆ ಇದ್ದ ಹಾಗೆಯೇ ಇದೆ ಎಂದು ಸಿಆರ್‌ಆರ್‌ಐ ಪ್ರಧಾನ ವಿಜ್ಞಾನಿ ಸತೀಶ ಪಾಂಡೆ ಹೇಳಿದ್ದಾರೆ.
ಈ ಪ್ರಯೋಗದಿಂದ, ಸ್ಟೀಲ್‌ ತ್ಯಾಜ್ಯದಿಂದ ನಿರ್ಮಾಣವಾದ ಹೆದ್ದಾರಿಗಳು ಮತ್ತು ಇತರ ರಸ್ತೆಗಳು ಬಲಗೊಳ್ಳಬಹುದು. ಅಲ್ಲದೆ, ರಸ್ತೆಯ ದಪ್ಪವನ್ನು ಶೇ.30ರಷ್ಟು ಕಡಿಮೆ ಮಾಡಲಾಗಿದೆ. ವೆಚ್ಚವು ಸುಮಾರು 30 ಪ್ರತಿಶತದಷ್ಟು ಕಡಿಮೆಯಾಗುತ್ತದೆ ಎಂದು ಪಾಂಡೆ ಹೇಳಿದ್ದಾರೆ.

 

ಉಕ್ಕಿನ ಕಾರ್ಖಾನೆಗಳು ಉಕ್ಕಿನ ತ್ಯಾಜ್ಯದ ಪರ್ವತಗಳಾಗಿ ಮಾರ್ಪಟ್ಟಿವೆ. ಇದು ಪರಿಸರಕ್ಕೆ ದೊಡ್ಡ ಅಪಾಯವಾಗಿದೆ, ಅದಕ್ಕಾಗಿಯೇ ನೀತಿ (NITI) ಆಯೋಗದ ಸೂಚನೆಗಳ ಮೇರೆಗೆ ಉಕ್ಕಿನ ಸಚಿವಾಲಯವು ಈ ತ್ಯಾಜ್ಯವನ್ನು ನಿರ್ಮಾಣಕ್ಕೆ ಬಳಸುವ ಯೋಜನೆಯನ್ನು ಹಲವು ವರ್ಷಗಳ ಹಿಂದೆ ನಮಗೆ ನೀಡಿತು. ಮತ್ತು ಸಂಶೋಧನೆಯ ನಂತರ, ವಿಜ್ಞಾನಿಗಳು ಸೂರತ್‌ನ ಎಎಮ್‌ಎನ್‌ಎಸ್ ಸ್ಟೀಲ್ ಪ್ಲಾಂಟ್‌ನಲ್ಲಿ ಉಕ್ಕಿನ ತ್ಯಾಜ್ಯವನ್ನು ಸಂಸ್ಕರಿಸಿದರು ಎಂದು ಎಎಮ್‌ಎನ್‌ಎಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಸಂತೋಷ್ ಎಂ ಮುಂದ್ರಾ ಹೇಳಿದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ